ಭೀಕರ ರಸ್ತೆ ಅಪಘಾತ ಸಂಭವಿಸಿ ಫಾರ್ಚುನರ್ ಕಾರೊಂದು ನಿಂತದ್ದ ಟಿಪ್ಪರ್ ಲಾರಿ ಮತ್ತು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಹೊಸಬೆಟ್ಟುವಿನ ಬಳಿ ನಡೆದಿದೆ.
ಮೃತ ವ್ಯಕ್ತಿಯನ್ನು ಕಾರು ಚಾಲಕ ಅರ್ಜುನ್(27) ಎಂದು ಗುರುತಿಸಲಾಗಿದೆ. ಸಹ ಪ್ರಯಾಣಿಕ ಮಹಮ್ಮದ್ ಫೈಝಾನ್ ಮತ್ತು ಅನಿರುದ್ ನಾಯರ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ತಿಳಿಸಿದ್ದಾರೆ.
ಈ ಸುದ್ದಿ ಓದದ್ದೀರಾ? ವಿಜಯನಗರ | ತಮ್ಮ ಹಕ್ಕುಗಳಿಗಾಗಿ ಲಿಂಗತ್ವ ಅಲ್ಪಸಂಖ್ಯಾತರ ಹೋರಾಟ
“ತಮಿಳುನಾಡು ನೋಂದಣಿಯ ಕಾರು ಇದಾಗಿದ್ದು, ಅತೀ ವೇಗದ ಚಾಲನೆಯಿಂದಾಗಿ ಘಟನೆ ಸಂಭವಿಸಿದೆ. ಪೊಲೀಸ್ ಸಿಬ್ಬಂದಿ ಮತ್ತು ಸಾರ್ವಜನಿಕರ ಸಹಕಾರದಿಂದ ಎರಡು ಗಂಟೆಯ ಪರಿಶ್ರಮದಿಂದ ಶವವನ್ನು ಹೊರತೆಗೆಯಲಾಯಿತು” ಎಂದು ಹೇಳಿದ್ದಾರೆ.
ಘಟನೆ ಸಂಬಂಧ ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.