ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಯಾಣಕ್ಕಾಗಿ ಪೊಲೀಸರು ರಸ್ತೆಯಲ್ಲಿ ಇತರ ವಾಹನ ಸಂಚಾರ ತಡೆದಿದ್ದರು. ಪರಿಣಾಮವಾಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಗು ಆಂಬುಲೆನ್ಸ್‌ನಲ್ಲಿಯೇ ಒಂದು ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿತ್ತು ಎಂದು ವರದಿಯಾಗಿದೆ.
ನಳಂದದಲ್ಲಿ ಎಥೆನಾಲ್ ಕಾರ್ಖಾನೆಯನ್ನು ಉದ್ಘಾಟಿಸಿ ನಿತೀಶ್ ಕುಮಾರ್ ಪಾಟ್ನಾಗೆ ಹಿಂತಿರುಗುತ್ತಿದ್ದರು. ಈ ವೇಳೆ, ಪಾಟ್ನಾ ಬಳಿಯ ಫತುಹಾದಲ್ಲಿ ವಾಹನ ಸಂಚಾರವನ್ನು ಪೊಲೀಸರು ತಡೆದಿದ್ದರು. ಹೀಗಾಗಿ, ರಸ್ತೆಯಲ್ಲಿ ಭಾರೀ ಟ್ರಾಫಿಕ್ ಉಂಟಾಗಿತ್ತು. ‘ತನ್ನ ಮಗುವನ್ನು ಬೇಗನೆ ಆಸ್ಪತ್ರೆಗೆ ಕರೆದೊಯ್ಯಬೇಕು. ಹೋಗಲು ಅವಕಾಶ ಮಾಡಿಕೊಡಿ’ ಎಂದು ಮಗುವಿನ ತಾಯಿ ಪೊಲೀಸರಲ್ಲಿ ಕೇಳಿದರೂ, ಪೊಲೀಸರು ಆಂಬುಲೆನ್ಸ್ ಹೋಗಲು ಬಿಡಲಿಲ್ಲ ಎಂದು ಆರೋಪಿಸಲಾಗಿದೆ.
ಮಗು ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಕಂಡು ಮಹಿಳೆ ಕುಸಿದು ಬಿದ್ದಿದ್ದಾರೆ ಎಂದು ವರದಿಯಾಗಿದೆ.
कुछ नहीं बस पटना में CM नीतीश के काफिले के लिए एम्बुलेंस को रोक दिया गया. pic.twitter.com/SPMNAApRgt
— Utkarsh Singh (@UtkarshSingh_) September 30, 2023
ಒಂದು ತಿಂಗಳ ಹಿಂದೆ ಕೂಡ ಪಾಟ್ನಾದಲ್ಲಿ ಮುಖ್ಯಮಂತ್ರಿಗಳ ಬೆಂಗಾವಲು ಪಡೆ ಹಾದುಹೋಗಲು ಆಂಬ್ಯುಲೆನ್ಸ್ ಅನ್ನು ನಿಲ್ಲಿಸಲಾಗಿತ್ತು. ಆಗ ಆಂಬ್ಯುಲೆನ್ಸ್ ನಿಲ್ಲಿಸಿದ್ದ ಪೊಲೀಸರನ್ನು ಗುರುತಿಸಿದರೂ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ಅಂತದ್ದೇ ಮತ್ತೊಂದು ಘಟನೆ ವರದಿಯಾಗಿದೆ.