ಡೀಸೆಲ್ ಕಳವು ಮಾಡಿದ ಶಂಕೆಯಲ್ಲಿ ದಲಿತ ಸಮುದಾಯದ ಎಂಜಿನಿಯರ್ ಒಬ್ಬರನ್ನು ಐವರು ಸಹೋದ್ಯೋಗಿಗಳು ಥಳಿಸಿದ ಘಟನೆ ಗುಜರಾತ್‌ನ ಬನಸ್ಕಾಂತ ಜಿಲ್ಲೆಯಲ್ಲಿ ನಡೆದಿದೆ.
ಪಾಲನ್‌ಪುರದ ಖಾಸಗಿ ಉತ್ಪಾದನಾ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದ 25 ವರ್ಷದ ವ್ಯಕ್ತಿಯನ್ನು ಸಹೋದ್ಯೋಗಿಗಳು ಥಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಸಂತ್ರಸ್ತರ ಮನೆಗೆ ಅವರ ಸಹೋದ್ಯೋಗಿಗಳು ಸೆಪ್ಟೆಂಬರ್ 28 ರಂದು ಭೇಟಿ ನೀಡಿದ್ದರು. ಸಹೋದ್ಯೋಗಿಯ ಹುಟ್ಟುಹಬ್ಬದ ಪಾರ್ಟಿಯ ನೆಪದಲ್ಲಿ ಅವರನ್ನು ಹೋಟೆಲ್‌ಗೆ ವಾಹನದಲ್ಲಿ ಹೊರಗೆ ಕರೆದುಕೊಂಡು ಹೋಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 209ರೂ. ಏರಿಕೆ
ಸೇತುವೆಯೊಂದರ ಮೇಲೆ ಕಾರನ್ನು ನಿಲ್ಲಿಸಿದ ಆರೋಪಿಗಳು ಡೀಸೆಲ್ ಕಳ್ಳತನ ಮಾಡುತ್ತಿದ್ದಾನೆ ಎಂದು ಆರೋಪಿಸಿ ದಲಿತ ಸಮುದಾಯದ ವ್ಯಕ್ತಿಯ ಮೇಲೆ ಜಾತಿ ನಿಂದನೆ ಮಾಡಿ ತೀವ್ರವಾಗಿ ಥಳಿಸಿದ್ದಾರೆ. ಘಟನೆಯ ನಂತರ ಇಂಜಿನಿಯರ್‌ಗೆ ಮೂಳೆ ಮುರಿತ ಸೇರಿದಂತೆ ಹಲವು ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೇ ವೇಳೆ, ಕಾಂಗ್ರೆಸ್ ಪರಿಶಿಷ್ಟ ಜಾತಿ (ಎಸ್‌ಸಿ) ಸೆಲ್ ಅಧ್ಯಕ್ಷ ಹಿತೇಂದ್ರ ಪಿಠಾಡಿಯ ಮಾತನಾಡಿ, ಗುಜರಾತ್‌ನಲ್ಲಿ ದಲಿತರ ಮೇಲಿನ ದೌರ್ಜನ್ಯ ಘಟನೆಗಳು ಹೆಚ್ಚುತ್ತಿವೆ ಮತ್ತು ಸಮಾಜ ವಿರೋಧಿಗಳಿಗೆ ಕಾನೂನಿನ ಭಯವಿಲ್ಲ. ಈ ಘಟನೆ ನಡೆದು ಎರಡು ದಿನಗಳು ಕಳೆದಿವೆ, ಆದರೆ ಯಾವುದೇ ಆರೋಪಿಗಳನ್ನು ಇನ್ನೂ ಬಂಧಿಸಲಾಗಿಲ್ಲ, ಇದು ದಲಿತರ ಬಗ್ಗೆ ಗುಜರಾತ್ ಬಿಜೆಪಿ ಸರ್ಕಾರ ಮತ್ತು ಗುಜರಾತ್ ಪೊಲೀಸರ ವರ್ತನೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.