ಗೂಗಲ್ ಮ್ಯಾಪ್ ನೀಡಿದ ತಪ್ಪಾದ ಮಾಹಿತಿಯಿಂದ ಕಾರು ನದಿಗೆ ಬಿದ್ದು ಇಬ್ಬರು ವೈದ್ಯರು ಮೃತಪಟ್ಟ ಘಟನೆ ಕೇರಳ ರಾಜ್ಯದ ಎರ್ನಾಕುಲಂನ ಗೊತ್ತುರುತ್ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದಿದೆ. ಕಾರಿನಲ್ಲಿದ್ದ ಮೂವರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಭಾರೀ ಮಳೆ ಮತ್ತು ಗೂಗಲ್ ಮ್ಯಾಪ್ ತಪ್ಪು ದಿಕ್ಕು ತೋರಿಸಿದ್ದು ಅಪಘಾತಕ್ಕೆ ಕಾರಣವಾಯಿತು. ಹೀಗಾಗಿ ಕಾರು ರಸ್ತೆಯಿಂದ ನದಿಗೆ ಧುಮುಕಿದೆ.
ಮೃತರನ್ನು ಕೊಲ್ಲಂನ ಅದ್ವೈತ್ ಮತ್ತು ಕೊಡುಂಗಲ್ಲೂರಿನ ಅಜ್ಮಲ್ ಎಂದು ಗುರುತಿಸಲಾಗಿದೆ. ಇಬ್ಬರೂ 28 ವರ್ಷ ವಯಸ್ಸಿನವರಾಗಿದ್ದು ಕೊಡುಂಗಲ್ಲೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ವೈದ್ಯ ಖಾಸಿಕ್ ಕಬೀರ್, ನರ್ಸಿಂಗ್ ವಿದ್ಯಾರ್ಥಿ ಜಿಸ್ಮನ್ ಮತ್ತು ಮೆಡಿಕಲ್ ವಿದ್ಯಾರ್ಥಿ ತಮನ್ನ ಅವರನ್ನು ರಕ್ಷಣೆ ಮಾಡಲಾಗಿದೆ. ಅವರ ಸ್ಥಿತಿ ಸುಧಾರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಣಿಪುರ | ವಿದ್ಯಾರ್ಥಿಗಳ ಭೀಕರ ಹತ್ಯೆ ಪ್ರಕರಣ; ಪ್ರಮುಖ ಆರೋಪಿಗಳ ಬಂಧನ
ಕೊಚ್ಚಿಯಲ್ಲಿ ವೈದ್ಯ ಅದ್ವೈತ್ ಅವರ ಹುಟ್ಟಿದ ಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿ ಕಾರಿನಲ್ಲಿ ವಾಪಸ್ ಬರುತ್ತಿದ್ದರು. ಅವರು ಮಧ್ಯರಾತ್ರಿ 12.35 ರ ಸುಮಾರಿಗೆ ಎಡಕ್ಕೆ ತಿರುಗುವ ಬದಲು, ಅವರು ಗೂಗಲ್ ನಕ್ಷೆಗಳಲ್ಲಿನ ನಿರ್ದೇಶನಗಳನ್ನು ಆಧರಿಸಿ ಲೇಬರ್ ಜಂಕ್ಷನ್‌ನಿಂದ ಬಲಕ್ಕೆ ತಿರುಗಿ ಜಲಾವೃತವಾದ ರಸ್ತೆಯನ್ನು ಪ್ರವೇಶಿಸುತ್ತಿದ್ದಾರೆ ಎಂಬುದಾಗಿ ಭಾವಿಸಿದ್ದಾರೆ.
ನೇರವಾಗಿ ದೇವಸ್ಥಾನದ ದೀಪಗಳನ್ನು ನೋಡಿದ್ದರಿಂದ ಅದು ರಸ್ತೆಯೇ ಎಂದು ಅವರು ತಿಳಿದು ಕಾರನ್ನು ಎದುರು ಚಲಾಯಿಸಿದರು. ಆದರೆ ವಾಸ್ತವವಾಗಿ ದೇವಾಲಯವು ನದಿಯ ಇನ್ನೊಂದು ಬದಿಯಲ್ಲಿತ್ತು ಎಂದು ವಡಕ್ಕೇಕರ ಪೊಲೀಸ್ ಠಾಣೆಯ ಅಧಿಕಾರಿ ಹೇಳಿದರು.
ಕಾರು ನೀರಿಗೆ ಬೀಳುವುದನ್ನು ಕಂಡ ಸ್ಥಳೀಯರು ತಕ್ಷಣ ಮೂವರನ್ನು ರಕ್ಷಿಸಿದ್ದಾರೆ. ಆದರೆ ಇಬ್ಬರು ವೈದ್ಯರು ಕೊಚ್ಚಿ ಹೋಗಿದ್ದರಿಂದ ಅವರ ರಕ್ಷಣೆ ಸಾಧ್ಯವಾಗಲಿಲ್ಲ. ಅಗ್ನಿಶಾಮಕ ದಳದವರು ಬಂದು ಇಬ್ಬರ ಮೃತದೇಹ ಮೇಲಕ್ಕೆತ್ತಿದ್ದರು.