2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಲಾದ ಸುಮಾರು ಎರಡು ಕೋಟಿ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಎಚ್ಎಸ್ಆರ್‌ಪಿ) ಅಂಟಿಸುವುದನ್ನು ರಾಜ್ಯ ಸಾರಿಗೆ ಇಲಾಖೆ ಕಡ್ಡಾಯಗೊಳಿಸಿದೆ. ಆದರೂ, ಈವರೆಗೆ ಕೇವಲ 30,000 ವಾಹನ ಮಾಲೀಕರು ತಮ್ಮ ನಂಬರ್ ಪ್ಲೇಟ್‌ಗಳನ್ನು ಬದಲಾಯಿಸಿದ್ದಾರೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
“ರಾಜ್ಯಾದ್ಯಂತ ಸುಮಾರು ಎರಡು ಕೋಟಿ ವಾಹನ ಮಾಲೀಕರಿಗೆ ಹೊಸ ನಂಬರ್ ಪ್ಲೇಟ್ ಪಡೆಯಲು ಸುಮಾರು 45 ದಿನಗಳು ಉಳಿದಿವೆ. ಈ ಗಡುವಿನೊಳಗೆ ಹೊಸ ನಂಬರ್ ಪ್ಲೇಟ್ ಅಳವಡಿಕೆ ನಡೆಯಬೇಕಾದರೆ, ನವೆಂಬರ್ 17 ರವರೆಗೆ ಪ್ರತಿದಿನ 4 ಲಕ್ಷಕ್ಕೂ ಹೆಚ್ಚು ವಾಹನಗಳು ನೋಂದಾಯಿಸಿಕೊಂಡು ಎಚ್ಎಸ್ಆರ್‌ಪಿ ಪ್ಲೇಟ್ ಅಂಟಿಸಬೇಕು. ಫಲಕಗಳನ್ನು ಅಂಟಿಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಇಲ್ಲದ ಕಾರಣ ವಾಹನ ಮಾಲೀಕರು ಹಳೆಯ ನಂಬರ್ ಪ್ಲೇಟ್‌ಗಳನ್ನೇ ಮುಂದುವರಿಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರದ ರಸ್ತೆ ಸಮಸ್ಯೆಗೆ ಮಂಗಳೂರಿನಲ್ಲಿ ಮೊಬೈಲ್ ಟವರ್ ಏರಿ ಕುಳಿತ ಯುವಕ!
ಮೂಲ ಉಪಕರಣ ತಯಾರಕರ (ಒಇಎಂ) ಅಧಿಕೃತ ವಿತರಕರಿಂದ ಪ್ರತ್ಯೇಕವಾಗಿ ಎಚ್ಎಸ್ಆರ್‌ಪಿ ಅಳವಡಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆಗಸ್ಟ್ 17 ರಂದು ಅಧಿಸೂಚನೆ ಹೊರಡಿಸಿದೆ. ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಬದಲಿಸಿಕೊಳ್ಳಲು ನವೆಂಬರ್ 17 ಕೊನೆಯ ದಿನಾಂಕವಾಗಿದೆ. ಈ ದಿನಾಂಕದ ಬಳಿಕ, ಎಚ್ಎಸ್ಆರ್‌ಪಿ ಪ್ಲೇಟ್ ಹೊಂದಿರದ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಸಿದ್ಧತೆ ಇಲ್ಲದೇ ಕಾನೂನು ಮಾಡಿದರೆ ಹೀಗೇ ಆಗುವುದು. ಸರಕಾರಕ್ಕೆ ಕೇವಲ ದಂಡ ಬೇಕಿದೆ.
ಇದೇ RTO ರಸ್ತೆ ಬದಿಯಲ್ಲಿ ಕ್ಯಾಂಪ್ ಹಾಕಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬಹುದಾಲ್ಲ ??
ಆದರೆ eke ಮಾಡುವುದಿಲ್ಲ.
ಕೊನೆ ಕೊನೆಗೆ ಎರಡು ಮೂರು ಪಟ್ಟು ಜಾಸ್ತಿ ಕೊಟ್ಟು number plate change
ಮಾಡಿಸುವ ಪರಿಸ್ಥಿತಿ ಬರಬಹುದು. Helmet vishayadalli
400, 500 ರೂಪಾಯಿ ಹೆಲ್ಮೆಟ್ ಕೊಡುವ ಬದಲು ಹೆಲ್ಮೆಟ್ ಹಾಕಿಲ್ಲ ಅಂತ 1000 ದಂಡ ಹಾಕಲ್ಲವೆ ? Naavu
ಕೆಲವರು ಕೊಡುವ ಲಿಂಕ್ ಮೂಲಕ ಬುಕ್ ಮಾಡೋಣ ಅಂದರೆ ಡೀಟೇಲ್ಸ್ ರೆಕಾರ್ಡ್ ಆಗಲ್ಲ. ಏನು ಮಾಡಬೇಕು. ? ಜನ ಸಾಮಾನ್ಯರಿಗೆ ತಿಳುವಳಿಕೆ ಇಲ್ಲ ಅನ್ನುವುದು ಒಂದು ಸಬೂಬು. ಮೊದಲು ಫೈನ್ ನಂತರ ರಾಜಕೀಯ ಎಂಟ್ರಿ ನಂತರ ಫೈನ್ ನಲ್ಲಿ ರಿಯಾಯಿತಿ. ಇದೇ ಜೀವನ..