- ಧರಣಿ ಕುಳಿತಿದ್ದ ಟಿಎಂಸಿ ಸಂಸದೆಯನ್ನು ಕೃಷಿಭವನದಿಂದ ಹೊರಹಾಕಿದ ಮಹಿಳಾ ಪೊಲೀಸರು
- ಮೂರು ಗಂಟೆ ಕಾಯಿಸಿ ಸಂದರ್ಶನಕ್ಕೆ ನಿರಾಕರಿಸಿದ ಕೇಂದ್ರ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ; ಆರೋಪ
ಪಶ್ಚಿಮ ಬಂಗಾಳದ ಸಾವಿರಾರು ಕೋಟಿ ಮನ್‌ರೇಗಾದ ಹಣವನ್ನು ಕೇಂದ್ರ ಸರ್ಕಾರವು ಬಿಡುಗಡೆಗೊಳಿಸುವಂತೆ ಕೋರಿ ಟಿಎಂಸಿ ನಾಯಕರ ನಿಯೋಗವು ಮಂಗಳವಾರ ಕೇಂದ್ರ ಗ್ರಾಮೀಣ ಅಭಿವೃದ್ಧಿ ಖಾತೆಯ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರನ್ನು ಭೇಟಿಯಾಗಲು ಅವಕಾಶ ಕೋರಿ ಸಮಯ ನಿಗದಿ ಮಾಡಿಕೊಂಡಿತ್ತು. ಆರು ಗಂಟೆಗೆ ಭೇಟಿ ಎಂದು ಸಮಯ ನಿಗದಿ ಆಗಿದ್ದರೂ, ಸಂಜೆ 7.30ರ ಸುಮಾರಿಗೆ ಇಂದು ಭೇಟಿಯಾಗಲು ಸಾಧ್ಯವಿಲ್ಲ ಎಂದಿದ್ದರು.
ಹೀಗಾಗಿ ನಿಯೋಗದಲ್ಲಿದ್ದ ಸದಸ್ಯರು ಕೃಷಿಭವನದಲ್ಲೇ ಧರಣಿ ಕುಳಿತರು. ಆಗ ದೆಹಲಿ ಪೊಲೀಸರು ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ಹಲವು ಸಂಸದರನ್ನು ಕೃಷಿ ಭವನದಿಂದ ಎಳೆದು ಹೊರಹಾಕಿರುವ ಘಟನೆ ನಡೆದಿದೆ.
Listen up @narendramodi – you can drag us out but the truth won’t go away- you have illegally withheld thousands of crores of MNREGA funds from the poot of West Bengal.
— Mahua Moitra (@MahuaMoitra) October 3, 2023
INDIA will throw you out come 2024. pic.twitter.com/qYA9BgnZWI
ಈ ಹಿನ್ನೆಲೆಯಲ್ಲಿ ಹೊರಹಾಕಿದ ಘಟನೆಯ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮೊಯಿತ್ರಾ, “ಪ್ರಧಾನಮಂತ್ರಿಯವರೇ ಕೇಳಿ, ಇಂದು ನೀವು ನಮ್ಮನ್ನು ಎಳೆದು ಹೊರಹಾಕಬಹುದು, ಆದರೆ ನಿಮ್ಮನ್ನು ಇಂಡಿಯಾನೇ ಹೊರಹಾಕುತ್ತದೆ” ಎಂದು ತಿಳಿಸಿದ್ದಾರೆ.
ಕೇಂದ್ರದ ಸಚಿವರ ಸಂದರ್ಶನಕ್ಕೆ ‘ಅಪಾಯಿಂಟ್‌ಮೆಂಟ್’ ಪಡೆದ ಬಳಿಕವೂ ಜಗತ್ತಿನಲ್ಲೇ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿನ ಸಂಸದರನ್ನು ಹೀಗೆ ನಡೆಸಿಕೊಳ್ಳಲಾಗುತ್ತಿದೆ. ಮೂರು ಗಂಟೆ ಕಾಯಿಸಿ ಸಂದರ್ಶನಕ್ಕೆ ನಿರಾಕರಿಸಿದ್ದಾರೆ ಎಂದು ಆಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಪ್ರಧಾನಿ ಮತ್ತು ಗೃಹ ಸಚಿವರ ಹೆಸರನ್ನು ಉಲ್ಲೇಖಿಸಿ ಶೇಮ್ ಶೇಮ್ ಎಂದು ಕೂಗಿದ್ದಾರೆ.
Sorry @SadhviNiranjan you are a lying so and so (and I am being polite). You gave our delegation an appointment . You vetted all names, checked each one off before allowing us to enter, made us wait 3 hrs & then ran away via the back door. https://t.co/tZ68Qgss0G
— Mahua Moitra (@MahuaMoitra) October 3, 2023
ಪ್ರಧಾನಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮೊಯಿತ್ರಾ, “ನೀವು ನಮ್ಮನ್ನು ಹೊರಗೆ ಎಳೆದು ಹಾಕಬಹುದು, ಆದರೆ ಸತ್ಯ ದೂರವಾಗುವುದಿಲ್ಲ. ಪಶ್ಚಿಮ ಬಂಗಾಳಕ್ಕೆ ಸೇರಿದ 15 ಸಾವಿರ ಕೋಟಿ ರೂ. ಮನರೇಗಾ ಅನುದಾನವನ್ನು ನೀವು ಕಾನೂನುಬಾಹಿರವಾಗಿ ತಡೆಹಿಡಿದಿದ್ದೀರಿ ಎಂದರು. ಜತೆಗೆ, ನಿಮ್ಮನ್ನು 2024ರಲ್ಲಿ ‘ಇಂಡಿಯಾ’ನೇ ಹೊರಹಾಕಲಿದೆ” ಎಂದು ಕೂಗಿದರು.
ಇದೇ ವೇಳೆ ಕೇಂದ್ರ ಗ್ರಾಮೀಣ ಅಭಿವೃದ್ಧಿ ಖಾತೆಯ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರ ವಿರುದ್ಧವೂ ಕಿಡಿಕಾರಿರುವ ಸಂಸದೆ ಮೊಯಿತ್ರಾ, “ನಮ್ಮ ನಿಯೋಗಕ್ಕೆ ಅಪಾಯಿಂಟ್‌ಮೆಂಟ್ ನೀಡಿದ್ದೀರಿ. ಬಳಿಕ ನೀವು ಎಲ್ಲ ಹೆಸರುಗಳನ್ನು ಪರಿಶೀಲಿಸಿದ್ದೀರಿ. ನಮಗೆ ಪ್ರವೇಶಿಸಲು ಅನುಮತಿಸುವ ಮೊದಲು ಪ್ರತಿಯೊಂದನ್ನು ಪರಿಶೀಲಿಸಿ, ನಮ್ಮನ್ನು ಮೂರು ಗಂಟೆಗಳ ಕಾಲ ಕಾಯುವಂತೆ ಮಾಡಿ ಮತ್ತು ಆ ನಂತರ ಹಿಂಬಾಗಿಲಿನ ಮೂಲಕ ಓಡಿಹೋಗಿದ್ದೀರಿ” ಎಂದು ದೂರಿದ್ದಾರೆ.
ಪಶ್ಚಿಮ ಬಂಗಾಳದ ಸಾವಿರಾರು ಕೋಟಿ ಮನ್‌ರೇಗಾದ ಹಣವನ್ನು ಕೇಂದ್ರ ಸರ್ಕಾರವು ಅಕ್ರಮವಾಗಿ ತಡೆ ಹಿಡಿದಿದೆ. ಹಾಗಾಗಿ ಅದನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರವು ಆಗ್ರಹಿಸಿತ್ತು. ಇದೇ ವಿಚಾರವಾಗಿ ಮಾತುಕತೆಗೆಂದು ಕೋರಿ ಟಿಎಂಸಿ ನಾಯಕರ ನಿಯೋಗವು ಮಂಗಳವಾರ ಕೇಂದ್ರ ಗ್ರಾಮೀಣ ಅಭಿವೃದ್ಧಿ ಖಾತೆಯ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರನ್ನು ಭೇಟಿಯಾಗಲು ಅವಕಾಶ ಕೋರಿತ್ತು. ಆರು ಗಂಟೆಗೆ ಭೇಟಿ ಎಂದು ಸಮಯ ನಿಗದಿ ಆಗಿದ್ದರೂ, ಸಂಜೆ 7.30ರ ಸುಮಾರಿಗೆ ಇಂದು(ಮಂಗಳವಾರ) ಭೇಟಿಯಾಗಲು ಸಾಧ್ಯವಿಲ್ಲ ಎಂದಿದ್ದರು. ಇದು ಟಿಎಂಸಿ ನಿಯೋಗವನ್ನು ಕೆರಳುವಂತೆ ಮಾಡಿತ್ತು. ಹೀಗಾಗಿ ನಿಯೋಗದಲ್ಲಿದ್ದ ಸದಸ್ಯರು ಕೃಷಿಭವನದಲ್ಲೇ ಧರಣಿ ಕುಳಿತಿದ್ದಾರೆ.