ರೈಲ್ವೆ ಇಲಾಖೆಯ ಅಕ್ರಮ ನೇಮಕಾತಿ ಸಂಬಂಧದ ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಅವರ ಪತ್ನಿ ರಾಬ್ರಿ ದೇವಿ ಮತ್ತು ಅವರ ಪುತ್ರ ಬಿಹಾರದ ಪ್ರಸ್ತುತ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ಗೆ ದೆಹಲಿಯ ನ್ಯಾಯಾಲಯವು ಬುಧವಾರ ಜಾಮೀನು ಮಂಜೂರು ಮಾಡಿದೆ.
ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯದ ಮುಂದೆ ಇಂದು ಹಾಜರಾಗಿದ್ದ ಲಾಲೂ ಪ್ರಸಾದ್ ಕುಟುಂಬಕ್ಕೆ ಜಾಮೀನು ಮಂಜೂರು ಮಾಡಿದೆ.
#WATCH | Delhi: Former Bihar CM and RJD chief Lalu Yadav, former Bihar CM Rabri Devi, Bihar Deputy CM Tejashwi Yadav and RJD MP Misa Bharti leave from Rouse Avenue Court after they were granted bail in the alleged land-for-jobs scam case. pic.twitter.com/tp3jGdKD39
— ANI (@ANI) October 4, 2023
ಅಕ್ಟೋಬರ್ 2022ರಲ್ಲಿ ಲಾಲೂ ಮತ್ತು ಇತರರ ವಿರುದ್ಧ ಸಲ್ಲಿಸಲಾದ ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಕೇಂದ್ರ ರೈಲ್ವೆಯಲ್ಲಿ ಅಭ್ಯರ್ಥಿಗಳ ಅಕ್ರಮ ನೇಮಕಾತಿಗಳನ್ನು ಮಾಡಲಾಗಿದೆ, ರೈಲ್ವೆಯ ನಿಯಮಗಳು, ಮಾರ್ಗಸೂಚಿಗಳು ಮತ್ತು ಕಾರ್ಯವಿಧಾನವನ್ನು ಉಲ್ಲಂಘಿಸಲಾಗಿದೆ ಎಂದು ಉಲ್ಲೇಖಿಸಲಾಗಿತ್ತು.
ಲಾಲೂ ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದಾಗ ನಡೆದಿದೆ ಎನ್ನಲಾದ ‘ಉದ್ಯೋಗಕ್ಕಾಗಿ ಜಮೀನು’ ಪ್ರಕರಣ ಇದಾಗಿದೆ.
VIDEO | "This was a legal thing, we appeared before the court (today). We have been granted bail by the court," says Bihar Deputy CM @yadavtejashwi as Delhi court grants bail to RJD chief Lalu Prasad Yadav and his family members in land-for-jobs scam case. pic.twitter.com/PJ5fHKDQOw
— Press Trust of India (@PTI_News) October 4, 2023
ಕಳೆದ ಮಾರ್ಚ್ 2023ರಲ್ಲಿ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯವು, ಸುಮಾರು 600 ಕೋಟಿ ರೂ. ಮೌಲ್ಯದ ಅಕ್ರಮ ಪತ್ತೆಯಾಗಿದೆ ಎಂದು ಹೇಳಿತ್ತು.
ರೈಲ್ವೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಆಕಾಂಕ್ಷಿಗಳಿಂದ ಲಂಚದ ರೂಪದಲ್ಲಿ ಭೂಮಿಯನ್ನು ಪುಕ್ಕಟೆಯಾಗಿ ಅಥವಾ ಕಡಿಮೆ ಬೆಲೆಗೆ ಪಡೆಯಲಾಗಿದೆ ಎಂದು ಆರೋಪ ಇವರ ಮೇಲಿತ್ತು.