14ನೇ ಏಕದಿನ ವಿಶ್ವಕಪ್‌ ಕ್ರಿಕೆಟ್ ಇಂದಿನಿಂದ ಆರಂಭ: ತಂಡಗಳು, ಪಂದ್ಯಗಳು, ಕ್ರೀಡಾಂಗಣ ಇತ್ಯಾದಿ ಫುಲ್‌ ಡೀಟೇಲ್ಸ್

Date:

Advertisements

ಕ್ರಿಕೆಟ್ ಪ್ರೆಮಿಗಳು ಕಾತರದಿಂದ ಕಾಯುತ್ತಿರುವ 14ನೇ ಐಸಿಸಿ ಏಕದಿನ ವಿಶ್ವಕಪ್‌ ಕ್ರಿಕೆಟ್ ಇಂದಿನಿಂದ ಭಾರತದಲ್ಲಿ (ಅಕ್ಟೋಬರ್ 5) ಆರಂಭವಾಗಲಿದೆ. ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್‌ ತಂಡಗಳ ನಡುವೆ ಉದ್ಘಾಟನಾ ಪಂದ್ಯ ಗುಜರಾತ್‌ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ.

ಅಕ್ಟೋಬರ್‌ 5ರಿಂದ ನವೆಂಬರ್ 19ರವರೆಗೂ 45 ದಿನಗಳು ನಡೆಯಲಿರುವ ಏಕದಿನ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ 10 ತಂಡಗಳು ಪೈಪೋಟಿ ನಡೆಸಲಿದ್ದು, 10 ಕ್ರೀಡಾಂಗಣಗಳಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿವೆ. ಪ್ರತಿ ತಂಡ ಟೂರ್ನಿಯಲ್ಲಿ ಭಾಗವಹಿಸುವ 9 ತಂಡಗಳೊಡನೆ ಸೆಣಸಿ ಹೆಚ್ಚು ಪಂದ್ಯಗಳನ್ನು ಗೆಲ್ಲುವುದರೊಂದಿಗೆ ಸೆಮಿಫೈನಲ್‌ಗೆ ಪ್ರವೇಶ ಪಡೆಯಬೇಕಿದೆ.

ಪಂದ್ಯ, ತಂಡ, ಕ್ರೀಡಾಂಗಣಗಳು ಇತ್ಯಾದಿ ವಿವರ

Advertisements

ತಂಡಗಳು:

ಭಾರತ: ಐಸಿಸಿ ರ‍್ಯಾಂಕಿಂಗ್ -1

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ (ಉಪನಾಯಕ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಆರ್‌ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್

ಪಾಕಿಸ್ತಾನ: ಐಸಿಸಿ ರ‍್ಯಾಂಕಿಂಗ್ – 2

ಬಾಬರ್ ಆಜಮ್ (ನಾಯಕ), ಶಾದಾಬ್ ಖಾನ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಸಲ್ಮಾನ್ ಅಲಿ ಅಘಾ, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹ್ಯಾರಿಸ್ ರೌಫ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಮೊಹಮ್ಮದ್ ಅಫ್ರಿದಿ ವಾಸಿಂ.

ಆಸ್ಟ್ರೇಲಿಯಾ: ಐಸಿಸಿ ರ‍್ಯಾಂಕಿಂಗ್ -3

ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಸೀನ್ ಅಬಾಟ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಮಿಚ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆಡಮ್ ಝಂಪಾ, ಮಿಚೆಲ್ ಸ್ಟಾರ್ಕ್

ದಕ್ಷಿಣ ಆಫ್ರಿಕಾ: ಐಸಿಸಿ ರ‍್ಯಾಂಕಿಂಗ್ -4

ಟೆಂಬಾ ಬವುಮಾ (ನಾಯಕ), ಜೆರಾಲ್ಡ್ ಕೊಯೆಟ್ಜಿ, ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಆಂಡಿಲ್ ಫೆಹ್ಲುಕ್ವಾಯೊ, ಕಗಿಸೊ ರಬಾಡಾ, ತಬ್ರೈಜ್ ಶಮ್ಸಿ, ಡ್ಯುಸ್ಸೆನ್ ರ್ಸೆಸ್ಸೆನ್ ರ್ಸೆಸ್ಸಿ

ಇಂಗ್ಲೆಂಡ್: ಐಸಿಸಿ ರ‍್ಯಾಂಕಿಂಗ್ -5

ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಗಸ್ ಅಟ್ಕಿನ್ಸನ್, ಜಾನಿ ಬೈರ್‌ಸ್ಟೋ, ಹ್ಯಾರಿ ಬ್ರೂಕ್, ಸ್ಯಾಮ್ ಕರ್ರಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಆದಿಲ್ ರಶೀದ್, ಜೋ ರೂಟ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಮಾರ್ಕ್ ವುಡ್, ಕ್ರಿಸ್ ವೋಕ್ಸ್

ನ್ಯೂಜಿಲೆಂಡ್: ಐಸಿಸಿ ರ‍್ಯಾಂಕಿಂಗ್ -6

ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಲಾಕ್ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ವಿಲ್ ಯಂಗ್

ಶ್ರೀಲಂಕಾ: ಐಸಿಸಿ ರ‍್ಯಾಂಕಿಂಗ್ -7

ದಾಸುನ್ ಶನಕ (ನಾಯಕ), ಕುಸಾಲ್ ಮೆಂಡಿಸ್, ದಿಮುತ್ ಕರುಣಾರತ್ನೆ, ಕುಸಲ್ ಜನಿತ್, ಪಾತುಂ ನಿಸ್ಸಾಂಕ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವ, ಸದೀರ ಸಮರವಿಕ್ರಮ, ದುನಿತ್ ವೆಲ್ಲಲಾಗೆ, ದುಶನ್ ಹೇಮಂತ, ದಿಲ್ಶನ್ ಮಧುಶಂಕ, ಕಸುನ್ ರಜಿತಾ, ಲಹಿರು ಕುಮಾರ, ಮಹೇಶ್ ತೀಕ್ಷಣ, ಮತೀಶ ಪತಿರಾನ

ಬಾಂಗ್ಲಾದೇಶ: ರ‍್ಯಾಂಕಿಂಗ್ -8

ಶಾಕಿಬ್ ಅಲ್ ಹಸನ್ (ನಾಯಕ), ಲಿಟ್ಟನ್ ಕುಮಾರ್ ದಾಸ್, ತಂಝಿದ್ ಹಸನ್ ತಮೀಮ್, ನಜ್ಮುಲ್ ಹೊಸೈನ್ ಶಾಂಟೊ, ತೌಹಿದ್ ಹೃದಯೋಯ್, ಮುಶ್ಫಿಕರ್ ರಹೀಮ್, ಮಹ್ಮುದುಲ್ಲಾ ರಿಯಾದ್, ಮೆಹಿದಿ ಹಸನ್ ಮಿರಾಜ್, ನಸುಮ್ ಅಹ್ಮದ್, ಶಾಕ್ ಮಹೆದಿ ಹಸನ್, ತಸ್ಕಿನ್ ಅಹ್ಮದ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ತಂಝೀಮ್ ಹಸನ್ ಸಾಕಿಬ್

ಅಫ್ಘಾನಿಸ್ತಾನ: ರ‍್ಯಾಂಕಿಂಗ್ -9

ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ರಿಯಾಜ್ ಹಸನ್, ರಹಮತ್ ಷಾ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನೂರ್ ಅಹ್ಮದ್, ಫಜಲ್ ರಹಮದ್, ಫಜಲ್ ರಹಕ್ವೀನ್.

ನೆದರ್‌ಲ್ಯಾಂಡ್ಸ್: ರ‍್ಯಾಂಕಿಂಗ್ -10

ಸ್ಕಾಟ್ ಎಡ್ವರ್ಡ್ಸ್ (ನಾಯಕ), ಮ್ಯಾಕ್ಸ್ ಒ’ಡೌಡ್, ಬಾಸ್ ಡಿ ಲೀಡೆ, ವಿಕ್ರಮ್ ಸಿಂಗ್, ತೇಜ ನಿಡಮನೂರು, ಪಾಲ್ ವ್ಯಾನ್ ಮೀಕೆರೆನ್, ಕಾಲಿನ್ ಅಕರ್‌ಮನ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್, ರಯಾನ್ ಕ್ಲೈನ್, ವೆಸ್ಲಿ ಬ್ಯಾರೆಸಿ, ಸಾಕಿಬ್ ಜುಲ್ಫಿಕರ್, ಶರೀಜ್ ಅಹ್ಮದ್, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್

ಈ ಸುದ್ದಿ ಓದಿದ್ದೀರಾ? ವಿಶ್ವಕಪ್‌ ಏಕದಿನ ತಂಡಕ್ಕೆ ಸ್ಥಾನ ಪಡೆದ ಸ್ಪಿನ್ನರ್ ಆರ್‌ ಅಶ್ವಿನ್‌: ಬದಲಾವಣೆಯ 15ರ ಬಳಗದಲ್ಲಿ ಆಯ್ಕೆ

ಪಂದ್ಯಗಳು ಹಾಗೂ ದಿನಾಂಕ:

World cup schedule 1

ಭಾರತ ತಂಡದ ಪಂದ್ಯಗಳು:

odi india team matchs

ಪಂದ್ಯ ನಡೆಯುವ ಕ್ರೀಡಾಂಗಣಗಳು:

ಅರುಣ್ ಜೇಟ್ಲಿ ಕ್ರೀಡಾಂಗಣ, ನವದೆಹಲಿ: 55000 ಪ್ರೇಕ್ಷಕರ ಸಾಮರ್ಥ್ಯವಿದೆ. 1883ರಲ್ಲಿ ಪ್ರಾರಂಭವಾದ ಈ ಕ್ರೀಡಾಂಗಣವನ್ನು ಮೊದಲು ಫಿರೋಜ್ ಷಾ ಕೋಟ್ಲಾ ಎಂದು ಕರೆಯಲಾಗುತ್ತಿತ್ತು.

ಇಲ್ಲಿನ ಪಂದ್ಯಗಳು: ದಕ್ಷಿಣ ಆಫ್ರಿಕಾ vs ಶ್ರೀಲಂಕಾ (ಅಕ್ಟೋಬರ್ 7), ಭಾರತ vs ಅಫ್ಘಾನಿಸ್ತಾನ (ಅಕ್ಟೋಬರ್ 11), ಇಂಗ್ಲೆಂಡ್ vs ಅಫ್ಘಾನಿಸ್ತಾನ (ಅಕ್ಟೋಬರ್ 15), ಆಸ್ಟ್ರೇಲಿಯಾ vs ನೆದರ್‌ಲ್ಯಾಂಡ್ಸ್ (ಅಕ್ಟೋಬರ್ 25), ಬಾಂಗ್ಲಾದೇಶ vs ಶ್ರೀಲಂಕಾ (ನವೆಂಬರ್ 6).

ವಾಂಖೆಡೆ ಕ್ರೀಡಾಂಗಣ, ಮುಂಬೈ: 33000 ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ. 2011ರ ವಿಶ್ವಕಪ್ ಫೈನಲ್ ಪಂದ್ಯವನ್ನು ಇಲ್ಲಿ ನಡೆಸಲಾಗಿತ್ತು. ಭಾರತ ಇದೇ ಕ್ರೀಡಾಂಗಣದಲ್ಲಿ 2011ರ ವಿಶ್ವಕಪ್‌ ಗೆದ್ದುಕೊಂಡಿತ್ತು.

ಇಲ್ಲಿನ ಪಂದ್ಯಗಳು: ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ (ಅಕ್ಟೋಬರ್ 21), ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶ (ಅಕ್ಟೋಬರ್ 24), ಭಾರತ vs ಶ್ರೀಲಂಕಾ (ನವೆಂಬರ್ 2), ಆಸ್ಟ್ರೇಲಿಯಾ vs ಅಫ್ಘಾನಿಸ್ತಾನ (ನವೆಂಬರ್ 7), ಮೊದಲ ಸೆಮಿಫೈನಲ್ (ನವೆಂಬರ್ 15).

 

ಎಂಎಂ ಚಿದಂಬರಂ ಕ್ರೀಡಾಂಗಣ, ಚೆನ್ನೈ: 38000 ಪ್ರೇಕ್ಷಕರ ಸಾಮರ್ಥ್ಯ.

ಇಲ್ಲಿನ ಪಂದ್ಯಗಳು: ಭಾರತ vs ಆಸ್ಟ್ರೇಲಿಯಾ (ಅಕ್ಟೋಬರ್ 8), ನ್ಯೂಜಿಲೆಂಡ್ vs ಬಾಂಗ್ಲಾದೇಶ (ಅಕ್ಟೋಬರ್ 13), ನ್ಯೂಜಿಲೆಂಡ್ vs ಅಫ್ಘಾನಿಸ್ತಾನ (ಅಕ್ಟೋಬರ್ 18), ಪಾಕಿಸ್ತಾನ vs ಅಫ್ಘಾನಿಸ್ತಾನ (ಅಕ್ಟೋಬರ್ 23), ಪಾಕಿಸ್ತಾನ vs ದಕ್ಷಿಣ ಆಫ್ರಿಕಾ (ಅಕ್ಟೋಬರ್ 27).

 

ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್: 132,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ದೇಶದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ. ಇದು 2023ರ ವಿಶ್ವಕಪ್‌ನ ಆರಂಭಿಕ ಮತ್ತು ಫೈನಲ್‌ ಪಂದ್ಯಗಳು ಸೇರಿದಂತೆ 5 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. 

ಇಲ್ಲಿನ ಪಂದ್ಯಗಳು: ಇಂಗ್ಲೆಂಡ್ vs ನ್ಯೂಜಿಲೆಂಡ್ (ಅಕ್ಟೋಬರ್ 5), ಭಾರತ vs ಪಾಕಿಸ್ತಾನ (ಅಕ್ಟೋಬರ್ 14), ಇಂಗ್ಲೆಂಡ್ vs ಆಸ್ಟ್ರೇಲಿಯಾ (ನವೆಂಬರ್ 4), ದಕ್ಷಿಣ ಆಫ್ರಿಕಾ vs ಅಫ್ಘಾನಿಸ್ತಾನ (ನವೆಂಬರ್ 10), ಫೈನಲ್ (ನವೆಂಬರ್ 19).

 

ಈಡನ್ ಗಾರ್ಡನ್ಸ್ ಕ್ರೀಡಾಂಗಣ, ಕೋಲ್ಕತ್ತಾ: 68000 ಪ್ರೇಕ್ಷಕರ ಸಾಮರ್ಥ್ಯ. 1987ರ ವಿಶ್ವಕಪ್‌ ಕ್ರಿಕೆಟ್ ಫೈನಲ್‌ ನಡೆದ ಸ್ಥಳವಾಗಿದೆ. ಇದು ಭಾರತದ ಅತ್ಯಂತ ಹಳೆಯ ಕ್ರಿಕೆಟ್ ಮೈದಾನವಾಗಿದೆ.

ಇಲ್ಲಿನ ಪಂದ್ಯಗಳು: ನೆದರ್‌ಲ್ಯಾಂಡ್ಸ್ vs ಬಾಂಗ್ಲಾದೇಶ (ಅಕ್ಟೋಬರ್ 28), ಪಾಕಿಸ್ತಾನ vs ಬಾಂಗ್ಲಾದೇಶ (ಅಕ್ಟೋಬರ್ 31), ಭಾರತ vs ದಕ್ಷಿಣ ಆಫ್ರಿಕಾ (ನವೆಂಬರ್ 5), ಇಂಗ್ಲೆಂಡ್ vs ಪಾಕಿಸ್ತಾನ (ನವೆಂಬರ್ 11), ಎರಡನೇ ಸೆಮಿಫೈನಲ್ (ನವೆಂಬರ್ 16).

 

ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು: 40,000 ಪ್ರೇಕ್ಷಕರ ಸಾಮರ್ಥ್ಯ. ಇದು ಭಾರತದ ಸೌರಶಕ್ತಿ ಚಾಲಿತ ಕ್ರಿಕೆಟ್ ಸ್ಟೇಡಿಯಂ. 

ಇಲ್ಲಿನ ಪಂದ್ಯಗಳು: ಆಸ್ಟ್ರೇಲಿಯಾ vs ಪಾಕಿಸ್ತಾನ (ಅಕ್ಟೋಬರ್ 20), ಇಂಗ್ಲೆಂಡ್ vs ಶ್ರೀಲಂಕಾ (ಅಕ್ಟೋಬರ್ 26), ನ್ಯೂಜಿಲೆಂಡ್ vs ಪಾಕಿಸ್ತಾನ (ನವೆಂಬರ್ 4), ನ್ಯೂಜಿಲೆಂಡ್ vs ಶ್ರೀಲಂಕಾ (ನವೆಂಬರ್ 9), ಭಾರತ vs ನೆದರ್‌ಲ್ಯಾಂಡ್ಸ್ (ನವೆಂಬರ್ 12).

 

ಎಂಸಿಎ ಕ್ರಿಕೆಟ್ ಕ್ರೀಡಾಂಗಣ, ಪುಣೆ: 37000 ಪ್ರೇಕ್ಷಕರ ಸಾಮರ್ಥ್ಯ.

ಇಲ್ಲಿನ ಪಂದ್ಯಗಳು: ಭಾರತ vs ಬಾಂಗ್ಲಾದೇಶ (ಅಕ್ಟೋಬರ್ 19), ಅಫ್ಘಾನಿಸ್ತಾನ vs ಶ್ರೀಲಂಕಾ (ಅಕ್ಟೋಬರ್ 30), ನ್ಯೂಜಿಲೆಂಡ್ vs ದಕ್ಷಿಣ ಆಫ್ರಿಕಾ (ನವೆಂಬರ್ 1), ಇಂಗ್ಲೆಂಡ್ vs ನೆದರ್‌ಲ್ಯಾಂಡ್ಸ್ (ನವೆಂಬರ್ 8), ಆಸ್ಟ್ರೇಲಿಯಾ vs ಬಾಂಗ್ಲಾದೇಶ (ನವೆಂಬರ್ 11).

 

ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣ, ಧರ್ಮಶಾಲಾ: 23000 ಪ್ರೇಕ್ಷಕರ ಸಾಮರ್ಥ್ಯ.

ಪಂದ್ಯಗಳು: ಬಾಂಗ್ಲಾದೇಶ vs ಅಫ್ಘಾನಿಸ್ತಾನ (ಅಕ್ಟೋಬರ್ 7), ಇಂಗ್ಲೆಂಡ್ vs ಬಾಂಗ್ಲಾದೇಶ (ಅಕ್ಟೋಬರ್ 10), ದಕ್ಷಿಣ ಆಫ್ರಿಕಾ vs ನೆದರ್‌ಲ್ಯಾಂಡ್ಸ್ (ಅಕ್ಟೋಬರ್ 17), ಭಾರತ vs ನ್ಯೂಜಿಲೆಂಡ್ (ಅಕ್ಟೋಬರ್ 22), ಆಸ್ಟ್ರೇಲಿಯಾ vs ನ್ಯೂಜಿಲೆಂಡ್ (ಅಕ್ಟೋಬರ್ 28).

 

ರಾಜೀವ್ ಗಾಂಧಿ ಕ್ರಿಕೆಟ್ ಕ್ರೀಡಾಂಗಣ, ಹೈದರಾಬಾದ್: 39,200 ಪ್ರೇಕ್ಷಕರ ಸಾಮರ್ಥ್ಯ.

ಪಂದ್ಯಗಳು: ಪಾಕಿಸ್ತಾನ vs ನೆದರ್‌ಲ್ಯಾಂಡ್ಸ್ (ಅಕ್ಟೋಬರ್ 6), ನ್ಯೂಜಿಲೆಂಡ್ vs ನೆದರ್‌ಲ್ಯಾಂಡ್ಸ್ (ಅಕ್ಟೋಬರ್ 9), ಪಾಕಿಸ್ತಾನ vs ಶ್ರೀಲಂಕಾ (ಅಕ್ಟೋಬರ್ 10).

 

ಏಕನಾ ಕ್ರೀಡಾಂಗಣ, ಲಖನೌ: 50000 ಪ್ರೇಕ್ಷಕರ ಸಾಮರ್ಥ್ಯ.

ಪಂದ್ಯಗಳು: ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ (ಅಕ್ಟೋಬರ್ 12), ಆಸ್ಟ್ರೇಲಿಯಾ vs ಶ್ರೀಲಂಕಾ (ಅಕ್ಟೋಬರ್ 16), ನೆದರ್‌ಲ್ಯಾಂಡ್ಸ್ vs ಶ್ರೀಲಂಕಾ (ಅಕ್ಟೋಬರ್ 21), ಭಾರತ vs ಇಂಗ್ಲೆಂಡ್ (ಅಕ್ಟೋಬರ್ 29), ನೆದರ್‌ಲ್ಯಾಂಡ್ಸ್ vs ಅಫ್ಘಾನಿಸ್ತಾನ (ನವೆಂಬರ್ 3).

 

ಅಂಪೈರ್‌ಗಳು:

ಆಸ್ಟ್ರೇಲಿಯಾ: ಪಾಲ್ ರೀಫೆಲ್, ರಾಡ್ ಟಕರ್, ಪಾಲ್ ವಿಲ್ಸನ್

ಇಂಗ್ಲೆಂಡ್: ಮೈಕೆಲ್ ಗಾಫ್, ರಿಚರ್ಡ್ ಇಲ್ಲಿಂಗ್ವರ್ತ್, ರಿಚರ್ಡ್ ಕೆಟಲ್ಬರೋ, ಅಲೆಕ್ಸ್ ವಾರ್ಫ್

ಭಾರತ: ನಿತಿನ್ ಮೆನನ್

ನ್ಯೂಜಿಲ್ಯಾಂಡ್: ಕ್ರಿಸ್ ಗಫಾನಿ, ಕ್ರಿಸ್ ಬ್ರೌನ್

ದಕ್ಷಿಣ ಆಫ್ರಿಕಾ: ಮರೈಸ್ ಎರಾಸ್ಮಸ್, ಆಡ್ರಿಯನ್ ಹೋಲ್ಡ್ಸ್ಟಾಕ್

ಶ್ರೀಲಂಕಾ: ಕುಮಾರ್ ಧರ್ಮಸೇನ

ಪಾಕಿಸ್ತಾನ: ಅಹ್ಸನ್ ರಝಾ

ಬಾಂಗ್ಲಾದೇಶ: ಶರ್ಫುದ್ದೌಲಾ

ವೆಸ್ಟ್ ಇಂಡೀಸ್: ಜೋಯಲ್ ವಿಲ್ಸನ್

 

ರೆಫ್ರಿಗಳು: ಜಾವಗಲ್ ಶ್ರೀನಾಥ್, ಜೆಫ್ ಕ್ರೋವ್, ರಿಚಿ ರಿಚರ್ಡ್ಸನ್, ಆಂಡಿ ಪೈಕ್ರಾಫ್ಟ್

 

ಪ್ರಶಸ್ತಿ ಮೊತ್ತ

2023ರ ವಿಶ್ವಕಪ್‌ ಕ್ರಿಕೆಟ್ ಫೈನಲ್‌ನಲ್ಲಿ ವಿಜೇತರಾಗುವ ತಂಡಕ್ಕೆ 4 ಮಿಲಿಯನ್ ಡಾಲರ್ ( ಅಂದಾಜು ರೂ. 33ಕೋಟಿ) ನಗದು ಬಹುಮಾನ ಸಿಗಲಿದೆ. ರನ್ನರ್ ಅಪ್ ತಂಡಕ್ಕೆ 2 ಮಿಲಿಯನ್ ಡಾಲರ್ ( ಅಂದಾಜು 16 ಕೋಟಿ) ಲಭಿಸಲಿದೆ. ಸೆಮಿಫೈನಲ್ ನಲ್ಲಿ ಸೋಲು ಅನುಭವಿಸುವ ಎರಡು ತಂಡಗಳಿಗೆ ತಲಾ ರೂ. 6 ಕೋಟಿ ದೊರೆಯಲಿದೆ. ನಾಕೌಟ್ ಹಂತ ಪ್ರವೇಶಿಸಲು ವಿಫಲವಾಗುವ ಇತರ ಆರು ತಂಡಗಳು ತಲಾ 82 ಲಕ್ಷ ರೂ. ಹಾಗೂ ಲೀಗ್ ಹಂತದಲ್ಲಿ ಪ್ರತಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ತಲಾ ರೂ.33 ಲಕ್ಷ ಪ್ರೋತ್ಸಾಹ ಧನ ಪಡೆಯಲಿವೆ.ಈ ವಿಶ್ವಕಪ್​ನ ಒಟ್ಟಾರೆ ಬಹುಮಾನದ ಗಾತ್ರ ಸರಿಸುಮಾರು 83 ಕೋಟಿ ರೂ. ಆಗಿದೆ.

 

ಭಾರತದಲ್ಲಿ ಪಂದ್ಯ ನೇರ ಪ್ರಸಾರವಾಗುವ ಚಾನಲ್‌ಗಳು ಮತ್ತು ಆಪ್:

ಚಾನಲ್: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಡಿಡಿ ಸ್ಪೋರ್ಟ್ಸ್

ಆಪ್‌ ಮತ್ತು ವೆಬ್‌ಸೈಟ್: ಡಿಸ್ನಿ ಪ್ಲಸ್ ಹಾಟ್‌ಸ್ಟಾರ್

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

ಕೇರಳ ಭೇಟಿ ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ...

Download Eedina App Android / iOS

X