ದೇಶದಲ್ಲಿ ಬಿಜೆಪಿ 1,000ಕ್ಕೂ ಹೆಚ್ಚು ಶಾಸಕರನ್ನು ಖರೀದಿಸಿ, 11 ರಾಜ್ಯಗಳಲ್ಲಿ ಸರ್ಕಾರಗಳನ್ನು ಪತನಗೊಳಿಸಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. “ಮಕರ ಸಂಕ್ರಮಣದ ನಂತರ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಜೆಡಿಎಸ್-ಬಿಜೆಪಿಯವರು ಹೇಳುತ್ತಿದ್ದಾರೆ. ನಾವು ಭವಿಷ್ಯ ನುಡಿಯುವದಿಲ್ಲ. ಈ ಬಾರಿ ಕರ್ನಾಟಕದ ಜನತೆ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಆಶೀರ್ವದಿಸಿದ್ಧಾರೆ. ಕಾಂಗ್ರೆಸ್ ಬಹುಮತದ ಸರ್ಕಾರ ರಚಿಸಿದ್ದು, ಸಾಂವಿಧಾನಿಕವಾಗಿ ಸರ್ಕಾರ ನಡೆಯುತ್ತಿದೆ” ಎಂದು ಹೇಳಿದರು.
“ಬಿಜೆಪಿಯವರು ಕಳೆದ 10 ವರ್ಷದಲ್ಲಿ ವಿವಿದ ಪಕ್ಷಗಳ ಶಾಸಕರನ್ನು ಖರಿದಿಸಿ ಸರ್ಕಾರ ರಚಿಸಿದ್ದಾರೆ. ದೇಶದಲ್ಲಿ 1000 ಶಾಸಕರನ್ನು ಖರೀದಿಸಿ, 11 ಸರ್ಕಾರ ಪತನಗೊಳಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಯನ್ನು ಜನರು ಮನೆಗೆ ಕಳುಹಿಸಲಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ ಕಾಂಗ್ರೆಸ್‌ಗೆ ಮಾತ್ರವಲ್ಲ ದೇಶಕ್ಕೆ ಪ್ರತಿಷ್ಠೆಯಾಗಿದೆ” ಎಂದು ಹೇಳಿದರು.