ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದ ವಿಶ್ವಕಪ್ ಮಹಾಸಮರಕ್ಕೆ ಇಂದಿನಿಂದ (ಗುರುವಾರ) ಅಧಿಕೃತ ಚಾಲನೆ ಸಿಕ್ಕಿದೆ. ಪ್ರಶಸ್ತಿಗಾಗಿ 10 ತಂಡಗಳು ಸೆಣಸಾಡಲಿವೆ. ಇಂದಿನಿಂದ ನವೆಂಬರ್ 19ರವರೆಗೆ ವಿಶ್ವಕಪ್ ಕದನ ನಡೆಯಲಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್ ಅದ್ಧೂರಿ ಉದ್ಘಾಟನಾ ಸಮಾರಂಭಕ್ಕೆ ಯೋಜನೆ ಹಾಕಿಕೊಂಡಿದ್ದ ಬಿಸಿಸಿಐ ಕೊನೆ ಗಳಿಗೆಯಲ್ಲಿ ಸಮಾರಂಭ ಕೈಬಿಟ್ಟಿದೆ.
ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಆದರೆ ಈ ಪಂದ್ಯಕ್ಕೆ ಅಭಿಮಾನಿಗಳಿಂದ ಅತ್ಯಂತ ನೀರಸವಾದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ಎನಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಹೆಸರಿನ ಕ್ರೀಡಾಂಗಣ ಸಂಪೂರ್ಣವಾಗಿ ಖಾಲಿ ಖಾಲಿಯಾಗಿದೆ. ಇದರ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.
The propaganda of BJP is getting busted everywhere & they are falling apart into pieces.
The BCCI led by Jay Shah on the agenda of BJP tried to make a big event at NARENDRA MODI stadium by distributing 40,000 tickets free to the crowd.
The crowd didn’t turn out at the Modi… pic.twitter.com/VGDjWKzJ5n
— Amock (@Politics_2022_) October 5, 2023
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣ 1,32,000 ದಷ್ಟು ವೀಕ್ಷಕರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಇಷ್ಟು ದೊಡ್ಡ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯಕ್ಕೆ ಅಭಿಮಾನಿಗಳು ಅತ್ಯಂತ ನೀರಸವಾದ ಪ್ರತಿಕ್ರಿಯೆ ನೀಡಿದ್ದಾರೆ. ಕೇವಲ 4 ಸಾವಿರ ಮಂದಿ ಭಾಗಿಯಾಗಿರುವುದಾಗಿ ಟ್ವಿಟ್ಟರ್ ಸೇರಿದಂತೆ ಹಲವು ಸೋಷಿಯಲ್ ಮೀಡಿಯಾಗಳಲ್ಲಿ ಬಳಕೆದಾರರು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಈ ಬೆಳವಣಿಗೆಯು ಕೇಂದ್ರ ಸರ್ಕಾರ ಹಾಗೂ ಬಿಸಿಸಿಐಯನ್ನು ಮುಜುಗರಕ್ಕೀಡು ಮಾಡಿದೆ.
As per @bookmyshow, tickets for England vs New Zealand match got sold out within minutes!
People were so crazy to watch this game that more than 1,00,000 tickets got sold out within minutes!!
But then, whom did they sell the tickets? Are ghosts watching match?@BCCI#ENGvsNZ https://t.co/Fz309t7K0O
— Rajiv (@Rajiv1841) October 5, 2023
ಉಚಿತ ಟಿಕೆಟ್ ವಿತರಿಸಿದ್ದ ಬಿಜೆಪಿ ಮುಖಂಡರು
‘ಇಂಡಿಯನ್ ಎಕ್ಸ್ಪ್ರೆಸ್’ ಜೊತೆಗೆ ಮಾತನಾಡಿದ್ದ ಬೋಡಕ್ದೇವ್ ಪ್ರದೇಶದ ಬಿಜೆಪಿ ಉಪಾಧ್ಯಕ್ಷ ಲಲಿತ್ ವಾಧವನ್, ‘ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಗೊಂಡಿರುವ ಹಿನ್ನೆಲೆಯಲ್ಲಿ ಸುಮಾರು 40 ಸಾವಿರ ಟಿಕೆಟ್ಗಳನ್ನು ಗುಜರಾತ್ನ ಮಹಿಳೆಯರಿಗೆ ಉಚಿತವಾಗಿ ಹಂಚಿದ್ದೇವೆ. ಜೊತೆಗೆ ಊಟದ ಕೂಪನ್ ಕೂಡ ವಿತರಿಸಿದ್ದೇವೆ. ಅವರೆಲ್ಲರೂ ಉದ್ಘಾಟನಾ ಪಂದ್ಯ ವೀಕ್ಷಿಸಲಿದ್ದಾರೆ. ಸ್ಟೇಡಿಯಂ ಜನರಿಂದ ತುಂಬಿ ತುಳುಕಲಿದೆ’ ಎಂದು ತಿಳಿಸಿದ್ದರು.
To whom #SachinTendulkar is waving to? 👀#NZvENG #NZvENG #icccricketworldcup2023 #CWC23 #ICCWorldCup2023 #ENGvsNZ #BCCI #Jayshah #Ahmedabad pic.twitter.com/J9K7cQmZWM
— Jaweria Abbasi (@JaweriaBasharat) October 5, 2023
ಆದರೆ, ಬಿಜೆಪಿ ವಿತರಿಸಿದ್ದ 40 ಸಾವಿರ ಟಿಕೆಟ್ಗಳ ಪೈಕಿ ಅರ್ಧದಷ್ಟೂ ಜನರು ಉದ್ಘಾಟನಾ ಪಂದ್ಯವನ್ನು ವೀಕ್ಷಿಸಲು ಸ್ಟೇಡಿಯಂಗೆ ಬಾರದಿರುವುದು ಈಗ ಗುಜರಾತ್ ಹಾಗೂ ಕೇಂದ್ರದ ಬಿಜೆಪಿ ನಾಯಕರನ್ನು ಮುಜುಗರಕ್ಕೀಡು ಮಾಡಿದೆ.
ಈ ರೀತಿಯ ಬೆಳವಣಿಗೆಗೆ ಬಿಸಿಸಿಐ ಕಾರ್ಯದರ್ಶಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಅವರ ಮಗ ಜಯ್ ಶಾ ಅವರೇ ಕಾರಣ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಬಿಸಿಸಿಐನಲ್ಲಿ ಜಯ್ ಶಾ ದುರಾಡಳಿತ ಕ್ರಿಕೆಟ್ ಅನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ ಎನ್ನುವ ಟೀಕೆಗಳು ವ್ಯಕ್ತವಾಗಿವೆ. ಪ್ರಧಾನಿ ಮೋದಿ ಹಾಗೂ ಬಿಜೆಪಿಯವರು ಕ್ರೀಡೆಯಲ್ಲೂ ಹಸ್ತಕ್ಷೇಪ ಮಾಡಿದರೆ ಈ ರೀತಿಯ ಪರಿಣಾಮ ಉಂಟಾಗದಿರುತ್ತದಾ” ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.
Jay Shah enjoying the England Vs New Zealand match at Narendra Modi Stadium. pic.twitter.com/8QaT0LZLRj
— Mufaddal Vohra (@mufaddal_vohra) October 5, 2023
ನರೇಂದ್ರ ಮೋದಿ ಕ್ರೀಡಾಂಗಣ 1,32,000ದಷ್ಟು ಆಸನದ ಸಾಮರ್ಥ್ಯವಿದ್ದರೂ ಕೇವಲ 3 ರಿಂದ 4 ಸಾವಿರ ಜನ ಭಾಗವಹಿಸಿದ್ದಾರೆ. ಅಂದರೆ ಕೇವಲ ಶೇ.3 ರಷ್ಟು ಮಂದಿ ಮಾತ್ರ ಎಂದು ‘ದಿ ಡೈಲಿ ಮೇಲ್’ ವರದಿ ಮಾಡಿದೆ.
ಇಷ್ಟು ದೊಡ್ಡ ಕ್ರೀಡಾಂಗಣದಲ್ಲಿ ಈ ಉದ್ಘಾಟನಾ ಪಂದ್ಯವನ್ನು ಆಯೋಜನೆ ಮಾಡಿ ಮುಜುಗರಕ್ಕೆ ಒಳಗಾಗುವ ಅಗತ್ಯವಿತ್ತಾ ಎನ್ನುವ ಪ್ರಶ್ನೆಗಳು ಈಗ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಎದ್ದಿವೆ.
BCCI & Jay Shah are ruining cricket by involving subcontinent politics to it.
No Opening Ceremony
No Crowd for the NZ vs ENG match today
No hype for the tournament
World Cup theme song sucks
No proper Ticket system pic.twitter.com/Hrifnll9d1— RK (@MahiGOAT07) October 5, 2023