ಕೇಂದ್ರ ಜಲಶಕ್ತಿ ಆಯೋಗದ ನಿರ್ದೇಶಕ ಅಶೋಕ ಕುಮಾರ್ ನೇತೃತ್ವದ ಬರ ಅಧ್ಯಯನ ತಂಡ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ತಂಡ ಚೊಕ್ಕಹಳ್ಳಿಗೆ ಭೇಟಿ ನೀಡಿತು. ಬಳಿಕ ರೈತ ಮಂಜುನಾಥ್ ಎಂಬುವವರ ಜಮೀನು ಪರಿಶೀಲಿಸಿತು.
ಈ ಸುದ್ದಿ ಓದಿದ್ದೀರಾ? ಗದಗ | ಕೇಂದ್ರ ಬರ ಅಧ್ಯಯನ ತಂಡ ವೀಕ್ಷಣೆ; ಸರಿಯಾಗಿ ಬರ ಪರಿಸ್ಥಿತಿ ವಿವರಿಸಲು ಸೂಚನೆ
“ಎರಡು ಎಕರೆಯಲ್ಲಿ ರಾಗಿ, ಹುರುಳಿ, ಜೋಳ, ನೆಲಗಡಲೆ ಬಿತ್ತನೆ ಮಾಡಿದ್ದೆವು. ಮುಂಗಾರು ಮಳೆ ಸರಿಯಾದ ರೀತಿಯಲಲ್ಲಿ ಆಗದ ಕಾರಣ ಬೆಳೆ ಪೂರ್ಣ ಹಾಳಾಗಿದ್ದು, ₹2 ಲಕ್ಷ ನಷ್ಟವಾಗಿದೆ” ಎಂದು ಮಂಜುನಾಥ್ ಅವಲತ್ತುಕೊಂಡರು.