ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯ ಎರಡನೇ ಪಂದ್ಯದಲ್ಲಿ ನೆದರ್‌ಲ್ಯಾಂಡ್ಸ್ ತಂಡ ಪಾಕಿಸ್ತಾನಕ್ಕೆ ಸುಲಭ ತುತ್ತಾಯಿತು.
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕ್ ನೀಡಿದ್ದ 287 ರನ್‌ಗಳ ಸವಾಲನ್ನು ಬೆನ್ನಟ್ಟಿದ ನೆದರ್ಲ್ಯಾಂಡ್ಸ್ 41 ಓವರ್‌ಗಳಲ್ಲಿ 205 ರನ್‌ಗಳಿಗೆ ಆಲೌಟ್ ಆಗಿ 81 ರನ್ನುಗಳ ಸೋಲು ಅನುಭವಿಸಿತು.
ನೆದರ್ಲ್ಯಾಂಡ್ಸ್ ಪರ ಆರಂಭಿಕ ಆಟಗಾರ ವಿಕ್ರಂಜಿತ್ ಸಿಂಗ್(52) ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ಬಾಸ್ ಡಿ ಲೀಡೆ 67 ರನ್ ಗಳಿಸಿದ್ದು ಹೊರತುಪಡಿಸಿದರೆ ಉಳಿದ ಆಟಗಾರರಿಂದ ಹೆಚ್ಚು ಪ್ರದರ್ಶನ ವ್ಯಕ್ತವಾಗಲಿಲ್ಲ.
ಪಾಕಿಸ್ತಾನದ ಪರ ಹಾರಿಸ್ ರೌಫ್ 43/3 ಹಾಗೂ ಹಸನ್ ಅಲಿ 33/2 ವಿಕೆಟ್ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನುಳಿದಂತೆ ಶಾಹೀನ್ ಶಾ ಆಫ್ರಿದಿ 37/1, ಇಫ್ತಿಕರ್ ಅಹಮದ್ 16/1, ಮೊಹಮ್ಮದ್ ನವಾಜ್ 31/1 ಹಾಗೂ ಶಾದಾಬ್ ಖಾನ್ 45/1 ವಿಕೆಟ್‌ಗಳನ್ನು ಪಡೆದರು.
ಇದಕ್ಕೂ ಮೊದಲು ಟಾಸ್ ಗೆದ್ದ ನೆದೆರ್‌ಲ್ಯಾಂಡ್ಸ್ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್ ಅವರು ಪಾಕ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು.
After being asked to bat first, Pakistan have been bowled out in 49 overs 😮
Netherlands need 287 to win in Hyderabad 🎯 https://t.co/bO5Cxj4bcy #PAKvNED #CWC23 pic.twitter.com/HwPoqIBVrd
— ESPNcricinfo (@ESPNcricinfo) October 6, 2023
ಏಕದಿನ ವಿಶ್ವಕಪ್ 2023 ರ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಪಾಕಿಸ್ತಾನ, ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಡಚ್ಚರ ಬೌಲಿಂಗ್ಗೆ ತತ್ತರಿಸಿತು. ಆದರೆ, ಸಂಘಟಿತ ಬೌಲಿಂಗ್ ದಾಳಿಯ ನಡುವೆ ಮೊಹಮ್ಮದ್ ರಿಜ್ವಾನ್ (68) ಮತ್ತು ಸೌದ್ ಶಕೀಬ್ (68) ತಲಾ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾದರು. ಅಂತಿಮವಾಗಿ ಡಚ್ಚರಿಗೆ 287 ರನ್‌ಗಳ ಗುರಿ ನೀಡಿತು.
The eagle has its claws on you 😄 #CWC23 #NEDvPAK LIVE ▶️ https://t.co/bO5Cxj3Dn0 pic.twitter.com/7oOubi1Q1d
— ESPNcricinfo (@ESPNcricinfo) October 6, 2023
ಈ ಸುದ್ದಿ ಓದಿದ್ದೀರಾ? ಏಕದಿನ ವಿಶ್ವಕಪ್ 2023 | ಬೆಂಗಳೂರಿನ ತಮ್ಮ ಪೂರ್ವಜರ ಬಗ್ಗೆ ಮೆಲುಕು ಹಾಕಿದ ರಚಿನ್ ರವೀಂದ್ರ
ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಫಕಾರ್ ಜಮಾನ್ (12), ಇಮಾಮ್ ಉಲ್ ಹಕ್ (15) ಮತ್ತು ನಾಯಕ ಬಾಬರ್ ಅಜಮ್ (5) ಬೇಗನೇ ವಿಕೆಟ್ ಒಪ್ಪಿಸಿದರು. 38 ರನ್‌ಗಳಿಗೆ 3 ವಿಕೆಟ್ ಪಡೆದು ನೆದರ್ಲೆಂಡ್ಸ್ ಮೇಲುಗೈ ಸಾಧಿಸಿತು. ಆದರೆ, ಈ ಹಂತದಲ್ಲಿ ಒಂದಾದ ಮೊಹಮ್ಮದ್ ರಿಜ್ವಾನ್ ಮತ್ತು ಸೌದ್ ಶಕೀಲ್ 114 ಎಸೆತಗಳಲ್ಲಿ 120 ರನ್‌ಗಳ ಜೊತೆಯಾಟವಾಡಿ ಕುಸಿಯುವ ತಂಡಕ್ಕೆ ಆಸರೆಯಾದರು. ಇಬ್ಬರು ಅರ್ಧಶತಕ ಸಿಡಿಸಿ ಮಿಂಚಿದರು. ರಿಜ್ವಾನ್ 75 ಎಸೆತಗಳಲ್ಲಿ 8 ಬೌಂಡರಿ ಸಹಿತ 68 ರನ್, ಶಕೀಲ್ 52 ಎಸೆತಗಳಲ್ಲಿ 9 ಬೌಂಡರಿ 1 ಸಿಕ್ಸರ್ ಸಹಿತ 68 ರನ್ ಕಲೆ ಹಾಕಿದರು.
A sensational four-wicket haul on #CWC23 debut for Bas de Leede 👊#PAKvNED 📝: https://t.co/g7GsWb5pp6 pic.twitter.com/7qDTnlRCqn
— ICC (@ICC) October 6, 2023
7ನೇ ವಿಕೆಟ್ಗೆ ಶಾದಾಬ್ ಖಾನ್(32) ಮತ್ತು ಮೊಹಮ್ಮದ್ ನವಾಜ್(39) 70 ಎಸೆತಗಳಲ್ಲಿ 64 ರನ್‌ಗಳ ಜೊತೆಯಾಟವಾಡಿ ತಂಡದ ಮೊತ್ತವನ್ನು 287 ರನ್‌ಗಳಿಗೆ ಕೊಂಡೊಯ್ದರು
ನೆದರ್ಲೆಂಡ್ಸ್ ಪರ ಬಾಸ್ ಡಿ ಲೀಡೆ 62/ 4 ವಿಕೆಟ್, ಕಾಲಿನ್ ಅಕರ್ಮನ್ 39/2, ಆರ್ಯನ್ ದತ್, ಲೋಗನ್ ವ್ಯಾನ್ ಬೀಕ್, ಪಾಲ್ ವ್ಯಾನ್ ಮೀಕೆರೆನ್ ತಲಾ 1 ವಿಕೆಟ್ ಪಡೆದರು.
190 runs and 9 wickets in TWO MATCHES 🤯
Bas de Leede becomes the first player to score 50+ runs and pick up 4+ wickets in consecutive ODIs 🔥#CWC23 #NEDvPAK LIVE ▶️ https://t.co/bO5Cxj4bcy pic.twitter.com/jkn98Ufeid
— ESPNcricinfo (@ESPNcricinfo) October 6, 2023