ದೆಹಲಿಯ ಅರುಣ್ ಜೈಟ್ಲಿ ಸ್ಟೇಡಿಯಂನಲ್ಲಿ ಇಂದು ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ದಕ್ಷಿಣ ಆಫ್ರಿಕಾ ತಂಡವು 428 ರನ್‌ಗಳನ್ನು ದಾಖಲಿಸುವ ಮೂಲಕ ವಿಶ್ವಕಪ್‌ನ ಇತಿಹಾಸದಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆ ಮೂಲಕ ಈ ಹಿಂದೆ 2015ರಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಸ್ಟ್ರೇಲಿಯಾ ತಂಡದ 417 ರನ್‌ಗಳ ದಾಖಲೆಯನ್ನು ಹಿಂದಿಕ್ಕಿದೆ.
South Africa have achieved the highest-ever total in a @cricketworldcup game 🔥#CWC23 | #SAvSL 📝: https://t.co/bHwFpH9gw9 pic.twitter.com/oCGYqPZgyb
— ICC Cricket World Cup (@cricketworldcup) October 7, 2023
ಇಂದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವು ಟಾಸ್ ಗೆದ್ದುಕೊಂಡ ಬಳಿಕ ಬೌಲಿಂಗ್ ನಡೆಸುವ ನಿರ್ಧಾರ ತೆಗೆದುಕೊಂಡಿತ್ತು. ನಿಗದಿತ 50 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ ತಂಡವು ಕೇವಲ 5 ವಿಕೆಟ್‌ಗಳನ್ನು ಕಳೆದುಕೊಂಡು 428 ರನ್‌ಗಳನ್ನು ಕಲೆ ಹಾಕಿತ್ತು.
ದಕ್ಷಿಣ ಆಫ್ರಿಕಾ ಪರವಾಗಿ ಕ್ವಿಂಟನ್ ಡಿ ಕಾಕ್(100 ರನ್), ವ್ಯಾನ್ ಡರ್ ಡುಸ್ಸೆನ್(108 ರನ್) ಹಾಗೂ ಮಾರ್ಕರಮ್(106 ರನ್) ಅವರ ಶತಕ ಬಾರಿಸಿದ್ದಾರೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ನಾಯಕನ ತೀರ್ಮಾನವು ಶ್ರೀಲಂಕಾಕ್ಕೆ ದುಬಾರಿಯಾಗಿ ಪರಿಣಮಿಸಿತು.
– Fastest World Cup century.
– First team with 3 centurions in the same innings of a World Cup.
– Highest ever World Cup score.
– 200th individual centuries in World Cup.
– Most times registered 400+ totals in World Cup.South Africa carnage in Delhi….!!! pic.twitter.com/M5Yc2Ptp1m
— Mufaddal Vohra (@mufaddal_vohra) October 7, 2023