ಪಂಡಿತ್ ಸಿದ್ದರಾಮ ಜಂಬಲ ದಿನ್ನಿ ರಂಗಮಂದಿರದ ಆಧುನೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸಣ್ಣ-ಪುಟ್ಟ ಕೆಲಸಗಳನ್ನು ಬಾರಿ ಇದ್ದು, ಅವುಗಳನ್ನೂ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್ ಬೋಸರಾಜು ಸೂಚನೆ ನೀಡಿದ್ದರೆ
ರಾಯಚೂರಿನ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದ ಆಧುನೀಕರಣ ಕಾಮಗಾರಿಯನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸಚಿವರು ಮಾತನಾಡಿದರು. ಕಾಮಗಾರಿಯನ್ನು ಕ್ಯಾಷೋಟೆಕ್ ಸಂಸ್ಥೆಗೆ ಕಳೆದ ಒಂದು ವರ್ಷ ಗುತ್ತಿಗೆ ನೀಡಲಾಗಿತ್ತು. ರಂಗಮಂದಿರ ಒಳಭಾಗದಲ್ಲಿ ಕಾಮಗಾರಿ ಪೂರ್ಣ ಗೊಂಡಿದೆ. ವೇದಿಕೆ ನಿರ್ಮಾಣ, ಖುರ್ಚಿಗಳು ಮತ್ತು ಹವಾನಿಯಂತ್ರಕ ಅವಡಿಕೆ ಕೆಲಸ ಮುಗಿದಿದೆ. ಕಲಾವಿದರು ವಿಶ್ರಾಂತಿ ಪಡೆಯಲು ಒಳ ಭಾಗದಲ್ಲಿ ಕೊಠಡಿ ನಿರ್ಮಾಣ ಮಾಡಲಾಗಿದೆ. ಬಾರಿ ಉಳಿದಿರುವ ಮೂಲಭೂತ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಬೇಕು ಎಂದು ತಿಳಿಸಿದರು.
ಧ್ವನಿ ವರ್ಧಕ ಸಮಸ್ಯೆ ಮತ್ತು ಆಲಂಕಾರಿಕ ವಿದ್ಯುತ್ ಸರಿಪಡಿಸಬೇಕು. ರಂಗಮಂದಿರದ ಹೊರ ಭಾಗದಲ್ಲಿ ಬಣ್ಣ ಮತ್ತು ಮುಂಭಾಗದಲ್ಲಿ ಕಾಂಪೌಂಡ್ ನಿರ್ಮಾಣವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ನಗರಸಭೆ ಹಿರಿಯ ಸದಸ್ಯ ಜಯಣ್ಣ, ಕಾಂಗ್ರೆಸ್ ಮುಖಂಡ ಮಹಮದ್ ಶಾಲಂ, ಕ್ಯಾಷೋಟೆಕ್ ಅಧಿಕಾರಿ ಶರಣಪ್ಪ ಪಟ್ಟೇದ್ ಸೇರಿದಂತೆ ಇತರರು ಇದ್ದರು.