ಗಾಝಾದ ಅಮಾಯಕರ ಮೇಲೆ ಬಾಂಬ್ ಸುರಿದರೆ ಒತ್ತೆಯಾಳುಗಳ ಹತ್ಯೆ: ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಹಮಾಸ್

Date:

Advertisements

ಗಾಝಾದಲ್ಲಿ ಇಸ್ರೇಲ್ ನಿರಂತರ ಬಾಂಬ್ ಸುರಿಯುತ್ತಿದ್ದು, ಅಮಾಯಕ ನಾಗರಿಕರು ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಸ್ರೇಲ್‌ಗೆ ಕೊನೆಯ ಎಚ್ಚರಿಕೆ ನೀಡಿರುವ ‘ಹಮಾಸ್’, ಗಾಝಾದ ಅಮಾಯಕರ ಮೇಲೆ ಬಾಂಬ್ ಸುರಿದರೆ ಇಸ್ರೇಲಿ ಒತ್ತೆಯಾಳುಗಳನ್ನು ಗಲ್ಲಿಗೇರಿಸಿ ಹತ್ಯೆ ಮಾಡುವುದಾಗಿ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಹಮಾಸ್‌ನ ಕಸ್ಸಾಮ್ ಬ್ರಿಗೇಡ್‌ನ ವಕ್ತಾರ ಅಬೂ ಒಬೈದಾ ಆಡಿಯೋ ಬಿಡುಗಡೆಗೊಳಿಸಿರುವುದಾಗಿ ‘ಅಲ್-ಜಝೀರಾ’ ವರದಿ ಮಾಡಿದೆ.

ಇಸ್ರೇಲ್ ಗಾಝಾದ ಮೇಲೆ ಬಾಂಬ್ ದಾಳಿ ಮುಂದುವರಿಸಿ, ನಾಗರಿಕರನ್ನು ಕೊಲ್ಲುವುದನ್ನು ಮುಂದುವರಿಸಿದರೆ ವಶದಲ್ಲಿರುವ ಇಸ್ರೇಲಿ ಬಂಧಿತರನ್ನು ಗಲ್ಲಿಗೇರಿಸುವುದಾಗಿ ಹಮಾಸ್‌ನ ಕಸ್ಸಾಮ್ ಬ್ರಿಗೇಡ್‌ ಎಚ್ಚರಿಕೆ ನೀಡಿದೆ.

Advertisements

“ಇದು ನಮ್ಮ ಪ್ರಮುಖ ಘೋಷಣೆ. ನಿಮ್ಮ ಒಂದೊಂದು ಬಾಂಬ್‌ಗಳು ಗಾಝಾದ ಮೇಲೆ ಬಿದ್ದರೆ, ನಮ್ಮ ವಶದಲ್ಲಿರುವ ಇಸ್ರೇಲಿ ಬಂಧಿತರನ್ನು ಒಬ್ಬೊಬ್ಬರನ್ನಾಗಿ ಗಲ್ಲಿಗೆ ಏರಿಸುತ್ತೇವೆ. ನೀವು ಅಮಾಯಕರ ಮೇಲೆ ಬಾಂಬ್ ಹಾಕುವುದನ್ನು ನಿಲ್ಲಿಸದೇ ಇದ್ದಲ್ಲಿ ನಾವು ಅದನ್ನು ಮಾಡಬೇಕಾದ ಅನಿವಾರ್ಯತೆ ನೀವು ಸೃಷ್ಟಿ ಮಾಡಬೇಡಿ” ಎಂದು ಹಮಾಸ್‌ನ ಕಸ್ಸಾಮ್ ಬ್ರಿಗೇಡ್‌ಗಳ ವಕ್ತಾರ ಅಬೂ ಒಬೈದಾ ಹೇಳಿರುವುದಾಗಿ ವರದಿ ಮಾಡಿದೆ.

“ನಾವು ಈ ಬಲವಂತದ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡಬೇಡಿ. ನಿಮ್ಮ ಬಾಂಬ್‌ ಬಿದ್ದಂತೆ ನಾವು ಒತ್ತೆಯಾಳುಗಳನ್ನು ಗಲ್ಲಿಗೇರಿಸುತ್ತೇವೆ. ಅದರ ವಿಡಿಯೋವನ್ನು ಕೂಡ ಪ್ರಸಾರ ಮಾಡಬೇಕಾದ ಅನಿವಾರ್ಯತೆ ಸೃಷ್ಟಿ ಮಾಡಬೇಡಿ. ಇದು ನಿಮಗೆ ಕೊನೆಯ ಎಚ್ಚರಿಕೆ. ನಾವು ಆ ರೀತಿ ಮಾಡಿದರೆ ಅದಕ್ಕೆ ಇಸ್ರೇಲಿ ನಾಯಕರೇ ಜವಾಬ್ದಾರಿಯಾಗುತ್ತಾರೆ” ಎಂದು ಹಮಾಸ್ ತಿಳಿಸಿರುವುದಾಗಿ ಜಝೀರಾ ವರದಿ ಮಾಡಿದೆ.

100ಕ್ಕೂ ಹೆಚ್ಚು ಜನರನ್ನು ಹಮಾಸ್ ತನ್ನ ವಶದಲ್ಲಿಟ್ಟುಕೊಂಡಿದ್ದು, ಅವರೆಲ್ಲರನ್ನೂ ಗಾಝಾದ ಯಾವುದೋ ಪ್ರದೇಶಕ್ಕೆ ಕರೆದೊಯ್ದಿರುವುದಾಗಿ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಎಂದು ಇಸ್ರೇಲ್‌ನ ವಿದೇಶಾಂಗ ಸಚಿವ ಎಲಿ ಕೊಹೆನ್ ಹೇಳಿದ್ದಾರೆ.

ಹಮಾಸ್ ದಾಳಿಯಲ್ಲಿ 700ಕ್ಕೂ ಹೆಚ್ಚು ಇಸ್ರೇಲಿ ನಾಗರಿಕರು ಸಾವನ್ನಪ್ಪಿದ್ದರೆ, ಇಸ್ರೇಲ್‌ ಗಾಝಾದ ಮೇಲೆ ನಿರಂತರ ಬಾಂಬ್ ದಾಳಿ ನಡೆಸುತ್ತಿರವುದರಿಂದ 500ಕ್ಕೂ ಅಧಿಕ ಪ್ಯಾಲೆಸ್ತೀನಿಯರು ಮೃತಪಟ್ಟಿರುವುದಾಗಿ ವರದಿಯಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಹಿಂಸಾಚಾರ ಪ್ರಕರಣ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಜಾಮೀನು

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್‌ಗೆ ಮೇ 9, 2023ರ ಹಿಂಸಾಚಾರ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X