ನೀರಿನ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಬೀದರ್ ತಾಲೂಕಿನ ಬೇಮಳಖೇಡ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಗಣೇಶ್(10) ಮತ್ತು ಸಾಯಿನಾಥ್(15) ಮೃತಪಟ್ಟ ಬಾಲಕರು. ಓರ್ವ ಬಾಲಕ ಹೊಂಡಕ್ಕೆ ಇಳಿದು ನೀರು ತರುವ ವೇಳೆ ಕಾಲು ಜಾರಿ ಬಿದಿದ್ದಾನೆ. ಆತ ಹೊರಬರಲಾಗದೆ ಒದ್ದಾಡುತ್ತಿರುವುದನ್ನು ಕಂಡು ಇನ್ನೊಬ್ಬ ಬಾಲಕ ಆತನ ರಕ್ಷಣೆಗೆ ಇಳಿದಿದ್ದಾನೆ. ಆತನೂ ಮೇಲೆ ಬರಲಾಗದೆ, ಉಸಿರುಗಟ್ಟಿ ಇಬ್ಬರೂ ಪ್ರಾಣಬಿಟ್ಟಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಬಾಲಕರ ಮೃತದೇಹ ಹೊರತೆಗೆದಿದ್ದಾರೆ. ಬೇಮಳಖೇಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಸಿದ್ದಾರೆ.