ಏಕದಿನ ವಿಶ್ವಕಪ್ 2023 | ಭಾರತ – ಪಾಕ್ ಪಂದ್ಯಕ್ಕೂ ಶುಭಮನ್‌ ಗಿಲ್ ಅಲಭ್ಯ ಸಾಧ್ಯತೆ

Date:

ಡೆಂಗ್ಯೂವಿನಿಂದ ಬಳಲುತ್ತಿದ್ದ ಭಾರತದ ಆರಂಭಿಕ ಆಟಗಾರ ಶುಭಮನ್‌ ಗಿಲ್ ಚೆನ್ನೈನ ಆಸ್ಪತ್ರೆಯಿಂದ ಇಂದು(ಅಕ್ಟೋಬರ್ 10) ಬಿಡುಗಡೆಯಾಗಿದ್ದಾರೆ. ಹೆಚ್ಚಿನ ವಿಶ್ರಾಂತಿ ಅಗತ್ಯವಿರುವ ಕಾರಣ ಅಕ್ಟೋಬರ್‌ 11ರ ಅಫ್ಘಾನಿಸ್ತಾನ ಪಂದ್ಯದ ಜೊತೆಗೆ ಅಕ್ಟೋಬರ್ 14ರಂದು ನಡೆಯುವ ಪಾಕಿಸ್ತಾನ ಪದ್ಯಕ್ಕೂ ಅಲಭ್ಯರಾಗುವ ಸಾಧ್ಯತೆಯಿದೆ.

ಮಂಗಳವಾರ ಬೆಳಗ್ಗೆ ಚೆನ್ನೈನ ಆಸ್ಪತ್ರೆಯಿಂದ ಶುಭಮನ್‌ ಗಿಲ್ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ತಿಳಿಸಿದೆ.

ಯುವ ಬ್ಯಾಟರ್ ಆಸ್ಪತ್ರೆಯಿಂದ ತಂಡದ ಹೋಟೆಲ್‌ಗೆ ಮರಳಿದರು. ಶುಭಮನ್ ಗಿಲ್‌ ಅವರ ರಕ್ತದಲ್ಲಿ ಪ್ಲೇಟ್‌ಲೆಟ್ಸ್‌ ತೀರಾ ಕುಸಿದಿದೆ. ಅಲ್ಲಿ ಅವರನ್ನು ಬಿಸಿಸಿಐ ವೈದ್ಯಕೀಯ ತಂಡವು ಮೇಲ್ವಿಚಾರಣೆ ಮಾಡುತ್ತದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಭಾರತದ ಆರಂಭಿಕ ಪಂದ್ಯವನ್ನು ಶುಭಮನ್ ಗಿಲ್ ತಪ್ಪಿಸಿಕೊಂಡಿದ್ದರು. ಈಗ ಮತ್ತೆರಡು ಪಂದ್ಯಗಳಿಗೂ ಗಿಲ್ ಅವರು ಆಡುತ್ತಿಲ್ಲದಿರುವುದು ಟೀಂ ಇಂಡಿಯಾ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಈ ಸುದ್ದಿ ಓದಿದ್ದೀರಾ? ಏಕದಿನ ವಿಶ್ವಕಪ್ 2023 | ಸ್ಟಾರ್ ಆಟಗಾರ ಶುಭಮನ್ ಗಿಲ್‌ಗೆ ಡೆಂಗ್ಯೂ; ಆಸಿಸ್ ವಿರುದ್ಧ ಅಶ್ವಿನ್ ಕಣಕ್ಕೆ!

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ (ಅಕ್ಟೋಬರ್ 9) ಬಿಡುಗಡೆ ಮಾಡಿದ್ದ ಅಧಿಕೃತ ಹೇಳಿಕೆಯಲ್ಲಿ ಶುಭಮನ್ ಗಿಲ್‌ ನವದೆಹಲಿಗೆ ಪ್ರಯಾಣ ಬೆಳೆಸುವುದಿಲ್ಲ ಎಂಬುದನ್ನು ಖಾತ್ರಿಯಾಗಿತ್ತು. ಜೊತೆಗೆ ವೈದ್ಯಕೀಯ ತಂಡ ಗಿಲ್ ಜೊತೆಗೆ ಇರುವುದಾಗಿ ಬಿಸಿಸಿಐ ತಿಳಿಸಿತ್ತು.

2023ರಲ್ಲಿ ಏಕದಿನ ಕ್ರಿಕೆಟ್‌ ಒಂದರಲ್ಲೇ 1200ಕ್ಕೂ ಹೆಚ್ಚು ರನ್‌ ಬಾರಿಸಿರುವ ಶುಭಮನ್ ಗಿಲ್‌ ಶ್ರೇಷ್ಠ ಲಯದಲ್ಲಿದ್ದರು.

ಹೀಗಾಗಿ ಅವರ ಅಲಭ್ಯತೆ ಟೀಮ್ ಇಂಡಿಯಾಗೆ ಬಹುದೊಡ್ಡ ಹಿನ್ನಡೆಯಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಗಿಲ್‌ ಸ್ಥಾನದಲ್ಲಿ ಇನಿಂಗ್ಸ್‌ ಆರಂಭಿಸಿದ್ದ ಎಡಗೈ ಬ್ಯಾಟರ್‌ ಇಶಾನ್‌ ಕಿಶನ್‌ ಮೊದಲ ಓವರ್‌ನಲ್ಲೇ ಡಕ್‌ಔಟ್‌ ಆಗಿದ್ದರು.

ಗಿಲ್ ಅನುಪಸ್ಥಿತಿಯಲ್ಲಿ, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಇಶಾನ್ ಕಿಶನ್ ಮತ್ತೊಮ್ಮೆ ಇನ್ನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ.

ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಇಬ್ಬರೂ ಆರಂಭಿಕರು ವಿಫಲರಾದ ನಂತರ 200 ರನ್‌ಗಳ ಬೆನ್ನಟ್ಟಿದ ವಿರಾಟ್ ಕೊಹ್ಲಿ ಮತ್ತು ಕೆ ಎಲ್ ರಾಹುಲ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಈ ಸುದ್ದಿ ಓದಿದ್ದೀರಾ? ವಿಶ್ವಕಪ್ | ಆಘಾತ ಕಂಡಿದ್ದ ತಂಡಕ್ಕೆ ಕೊಹ್ಲಿ-ರಾಹುಲ್ ಜೋಡಿಯಿಂದ ಜಯ: ಟೀಮ್ ಇಂಡಿಯಾ ಶುಭಾರಂಭ

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲಿ ‘ಕೆಎಂಎಫ್’ ಪ್ರಯೋಜಕತ್ವ

ನಂದಿನಿ ಬ್ರಾಂಡ್‌ನೊಂದಿಗೆ ಡೇರಿ ಉದ್ಯಮಗಳಲ್ಲಿ ಎಲ್ಲಡೆ ಹೆಸರುವಾಸಿಯಾಗಿರುವ ಕರ್ನಾಟಕ ಹಾಲು ಒಕ್ಕೂಟ...

ಐಪಿಎಲ್ | ಹೈದರಾಬಾದ್ ನೀಡಿದ್ದ ಬೃಹತ್ ಗುರಿ ಮುಟ್ಟಲು ಎಡವಿದ ಡೆಲ್ಲಿ ಕ್ಯಾಪಿಟಲ್ಸ್‌: 67 ರನ್‌ಗಳ ಸೋಲು

ಇಂದು ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ಡೆಲ್ಲಿ...

ಮಹಿಳೆಯರ ಕುಸ್ತಿ | ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ರೀತಿಕಾ ಹೂಡಾ, ಅಂಶು ಮಲಿಕ್

ಕಝಕಿಸ್ತಾನದ ಬಿಸ್ಕೆಕ್‌ನಲ್ಲಿ ನಡೆದ ಏಷ್ಯನ್ ಒಲಿಂಪಿಕ್ಸ್‌ನ ಏಷ್ಯನ್ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ...

ಐಪಿಎಲ್ | ‘ಪವರ್ ಪ್ಲೇ’ಯಲ್ಲಿ 125 ರನ್ ಚಚ್ಚಿದ ಹೈದರಾಬಾದ್: T20 ಇತಿಹಾಸದಲ್ಲೇ ಹೊಸ ದಾಖಲೆ

ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್‌)ನ...