ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಮಧ್ಯಾಹ್ನ ಭಾರೀ ಮಳೆಯಾಗಿದ್ದು, ನಗರದಲ್ಲಿ ತಂಪು ವಾತಾವರಣವಿದೆ. ಇನ್ನು ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಹಿಂಗಾರು ಮಳೆ ಚುರುಕುಗೊಂಡಿದೆ. ಹಾಗಾಗಿ, ಬೆಂಗಳೂರಿನಲ್ಲಿ ಮಧ್ಯಾಹ್ನವೇ ಭಾರೀ ಮಳೆಯಾಗುತ್ತಿದೆ. ಬುಧವಾರ ರಾತ್ರಿ ನಗರದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಲಾಲ್‌ಬಾಗ್, ಜಯನಗರ, ಕೋರಮಂಗಲ, ಜೆಪಿ ನಗರ, ಎಚ್‌ಎಸ್‌ಆರ್, ಬನಶಂಕರಿ, ಮಲ್ಲೇಶ್ವರ, ಮೈಸೂರು ರಸ್ತೆ, ಕಬ್ಬನ್ ಪಾರ್ಕ್, ಎಂಜಿ ರಸ್ತೆ, ಶಿವಾಜಿನಗರ, ಬಿಟಿಎಂ, ವಿಜಯನಗರ, ಗೋವಿಂದರಾಜನಗರ, ಮಲ್ಲೇಶ್ವರಂ, ರೇಸ್ ಕೋರ್ಸ್, ಮಂತ್ರಿಮಾಲ್, ಶಿವಾನಂದ ಸರ್ಕಲ್, ಕೆ.ಆರ್.ಸರ್ಕಲ್, ಹಡ್ಸನ್ ಸರ್ಕಲ್, ಕಾರ್ಪೊರೇಷನ್, ಲಾಲ್‍ಬಾಗ್, ಚಾಮರಾಜಪೇಟೆ ಸೇರಿದಂತೆ ನಗರದ ಹಲವೆಡೆ ಜೋರು ಮಳೆ ಸುರಿದಿದೆ.
ಏಕಾಏಕಿ ಮಳೆ ಆರಂಭವಾದ ಕಾರಣ ವಾಹನ ಸವಾರರು ದಾರಿಹೋಕರು ಮೆಟ್ರೋ, ಬಸ್ ನಿಲ್ಧಾಣ, ಅಂಗಡಿ-ಮುಂಗಟ್ಟು ಹಾಗೂ ಅಂಡರ್‌ಪಾಸ್‌ಗಳಲ್ಲಿ ಆಶ್ರಯ ಪಡೆದರು. ಜೋರು ಮಳೆಯ ಕಾರಣ ನಗರದ ಬಹುತೇಕ ರಸ್ತೆಗಳು ಜಲಾವೃತವಾಗಿವೆ. ಸಂಚಾರ ದಟ್ಟಣೆ ಉಂಟಾಗಿದೆ.
ನಗರದ ‘ಪಣತ್ತೂರು ರೈಲ್ವೇ ಅಂಡರ್‌ಪಾಸ್’ನಲ್ಲಿ ರಸ್ತೆ ಹದಗೆಟ್ಟಿದೆ. ಜತೆಗೆ ಭಾರೀ ಮಳೆ ಸುರಿಯುತ್ತಿರುವುದರಿಂದ ನೀರು ನಿಂತಿದ್ದು, ನಿಧಾನಗತಿಯ ಸಂಚಾರವಿದೆ. ವರ್ತೂರಿನಲ್ಲಿಯೂ ನಿಧಾನಗತಿಯ ಸಂಚಾರವಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 1 ಕೆ.ಜಿ 262 ಗ್ರಾಂ ಚಿನ್ನದ ಆಭರಣ ಕದ್ದಿದ್ದ ಸೇಲ್ಸ್ ಮ್ಯಾನ್; ಬಂಧನ
“ರಿಂಗ್ ರಸ್ತೆಯ ಕಸ್ತೂರಿ ನಗರ ಬ್ರಿಡ್ಜ್ ಬಳಿ ಇರುವ ಗ್ರ್ಯಾಂಡ್ ಸೀಸನ್ ಹೋಟೆಲ್ ಮುಂಭಾಗ(ಹೆಬ್ಬಾಳ ಹೋಗುವ ಕಡೆಗೆ) ವಾಟರ್ ಲಾಗಿಂಗ್ ಆಗಿದೆ. ಚನಸಂದ್ರ ಮತ್ತು ಹುಣಸೆಮರದ ರಸ್ತೆಯಲ್ಲಿ ಮಳೆ ನೀರು ನಿಂತಿರುವ ಕಾರಣ ಜೆಸಿಬಿ ಸಹಾಯದ ಮೂಲಕ ನೀರನ್ನು ತೆರುವುಗೊಳಿಸಲಾಗುತ್ತಿದೆ. ರೈನ್‌ಬೋ ಆಸ್ಪತ್ರೆ ಬಳಿಯ ಸೇಲಂ ಸೇತುವೆಯಲ್ಲಿ ನೀರು ನಿಂತಿದ್ದರಿಂದ ನಿಧಾನಗತಿಯ ಸಂಚಾರವಿದೆ” ಎಂದು ಹೇಳಿದೆ.
‘Traffic Advisory’
Slow moving traffic due to heavy Rain and water logging along with bad road conditions Chanasandara towards TShalli
11.10.2023@CPBlr @Jointcptraffic @DCPTrEastBCP @acpwfieldtrf @blrcitytraffic @TShalliPS @bngdistpol @112BlrRural pic.twitter.com/g23cRMbEdd— WHITEFIELD TRAFFIC PS BTP (@wftrps) October 11, 2023
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು, ಚಾಮರಾಜನಗರ, ಕೊಡಗು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ರಾಮನಗರ ಜಿಲ್ಲೆಗಳಿಗೆ ಬುಧವಾರ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.