ಜಮ್ಮು ಮತ್ತು ಕಾಶ್ಮೀರದಲ್ಲಿ ವಾಸಿಸುವ ಹಿಂದೂಗಳಿಗೆ ಚಿತ್ರದ ಗಳಿಕೆಯ ಒಂದು ಭಾಗವನ್ನು ದೇಣಿಗೆ ನೀಡದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ನಿರ್ಮಾಪಕರನ್ನು ಬಾಲಿವುಡ್ ನಟಿ ಆಶಾ ಪರೇಖ್ ಅವರು ತರಾಟೆಗೆ ತೆಗೆದುಕೊಂಡರು.
ಇತ್ತೀಚಿಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ದಿ ಕಾಶ್ಮೀರ್ ಫೈಲ್ಸ್’ ನಿರ್ಮಾಪಕರು 200 ಕೋಟಿ ರೂ. ಗಳಿಸಿದ್ದಾರೆ ಎಂದು ಭಾವಿಸೋಣ. ಸಿನಿಮಾದ ಗಳಿಕೆಯಲ್ಲಿ ಅವರು ಕಾಶ್ಮೀರಿ ಹಿಂದೂಗಳಿಗೆ ಸಹಾಯ ಮಾಡಲು 50 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಬಹುದಿತ್ತು. ಜಮ್ಮುವಿನಲ್ಲಿ ನೀರು ಮತ್ತು ವಿದ್ಯುತ್ ಸಂಪರ್ಕವಿಲ್ಲದೆ ವಾಸಿಸುವ ಹಿಂದೂಗಳ ಕಲ್ಯಾಣಕ್ಕಾಗಿ ಸಿನಿಮಾ ತಯಾರಕರು ಎಷ್ಟು ಹಣವನ್ನು ನೀಡಿದ್ದಾರೆ” ಎಂದು ಆಶಾ ಪರೇಖ್ ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮದುವೆಗಳ ನೆಪ; ರಾಜಸ್ಥಾನ ಚುನಾವಣಾ ದಿನಾಂಕ ಬದಲಿಸಿದ ಚುನಾವಣಾ ಆಯೋಗ
ಸಂದರ್ಶನದ ಸಮಯದಲ್ಲಿ, ‘ದಿ ಕಾಶ್ಮೀರ್ ಫೈಲ್ಸ್’ ಮತ್ತು ‘ದಿ ಕೇರಳ ಸ್ಟೋರಿ’ಯಂತಹ ‘ವಿವಾದಾತ್ಮಕ ಚಿತ್ರಗಳನ್ನು’ ವೀಕ್ಷಿಸಿದ್ದೀರಾ ಎಂದು ಆಶಾ ಅವರನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ಇಂತಹ ಸಿನಿಮಾಗಳಿಂದ ಜನರಿಗೆ ಏನು ಲಾಭ’ ಎಂದು ಪ್ರಶ್ನಿಸಿದರು. ‘ನಾನು ಆ ಚಿತ್ರಗಳನ್ನು ನೋಡಿಲ್ಲ, ಹಾಗಾಗಿ ಅವುಗಳ ಸುತ್ತಲಿನ ವಿವಾದಗಳ ಬಗ್ಗೆ ನಾನು ಪ್ರತಿಕ್ರಿಯಿಸಲಾರೆ” ಎಂದರು.
कश्मीर फ़ाइल्स के प्रोड्यूसर ने 400 करोड़ कमाएं.
प्रोड्यूसर ने कश्मीर में रहने वाले कितने हिंदुओं को पैसे दिए?
जिनके पास पानी, खाना और बिजली नहीं है.
– आशा पारेख, फिल्म ऐक्ट्रेस pic.twitter.com/CZBQRdLO6n
— Govind Pratap Singh | GPS (@govindprataps12) October 10, 2023
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ವಿವೇಕ್ ರಂಜನ್ ಅಗ್ನಿಹೋತ್ರಿ ಕಥೆ ಬರೆದು ನಿರ್ದೇಶಿಸಿದ್ದಾರೆ ಮತ್ತು ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಮತ್ತು ಜೀ ಸ್ಟುಡಿಯೋ ಸಿನಿಮಾವನ್ನು ನಿರ್ಮಿಸಿದೆ. ಚಿತ್ರದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ಪುನೀತ್ ಇಸ್ಸಾರ್, ದರ್ಶನ್ ಕುಮಾರ್, ಪ್ರಕಾಶ್ ಬೆಳವಾಡಿ, ಮೃಣಾಲ್ ಕುಲಕರ್ಣಿ ಮತ್ತು ಚಿನ್ಮಯ್ ಮಾಂಡ್ಲೇಕರ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಸಿನಿಮಾದಲ್ಲಿ ಮುಸ್ಲಿಂ ಸಮುದಾಯವನ್ನು ವಿವಾದಾತ್ಮಕವಾಗಿ ತೋರಿಸಿದ ಕಾರಣ ದೇಶದ್ಯಾಂತ ಆಕ್ರೋಶ ವ್ಯಕ್ತವಾಗಿತ್ತು.