ನಾಯಕ ರೋಹಿತ್ ಶರ್ಮಾ ಸ್ಪೋಟಕ ಶತಕದ ನೆರವಿನಿಂದ ಭಾರತ ತಂಡ ಐಸಿಸಿ ಏಕದಿನ ವಿಶ್ವಕಪ್ 2023ರ 14ನೇ ಆವೃತ್ತಿಯ 9ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ಧ 8 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿತು. ಈ ಮೂಲಕ ಟೂರ್ನಿಯಲ್ಲಿ 2ನೇ ಜಯ ದಾಖಲಿಸಿದೆ.
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ನೀಡಿದ 274 ರನ್‌ಗಳ ಸವಾಲನ್ನು ಬೆನ್ನಟ್ಟಿದ ಟೀಂ ಇಂಡಿಯಾ 35 ಓವರ್‌ಗಳಲ್ಲಿ ಗೆಲುವನ್ನು ತನ್ನದಾಗಿಸಿಕೊಂಡಿತು.
ಇಶಾನ್ ಕಿಶನ್ ಅವರೊಂದಿಗೆ ಮೊದಲ ವಿಕೆಟ್ ಜೊತೆಯಾಟದಲ್ಲಿ ಭರ್ಜರಿ ಆಟವಾಡಿದ ನಾಯಕ ರೋಹಿತ್ ಶರ್ಮಾ ಸಿಕ್ಸರ್, ಬೌಂಡರಿಗಳನ್ನು ಬಾರಿಸಿ ಅಫ್ಘಾನ್ ಬೌಲರ್‌ಗಳ ಬೆವರಿಳಿಸಿದರು. 18.4 ಓವರ್‌ಗಳಲ್ಲಿ ಇವರಿಬ್ಬರ ಜೊತೆಯಾಟದಿಂದ 156 ರನ್ ಹರಿದು ಬಂತು.
India march to their second successive win off the back of a dominant display in Delhi 💪#CWC23 #INDvAFG pic.twitter.com/Z0gyJC8r5f
— ICC Cricket World Cup (@cricketworldcup) October 11, 2023
45 ರನ್ (5 ಬೌಂಡರಿ, 2 ಸಿಕ್ಸರ್)ಗಳಿಸಿ ಇಶಾನ್ ಕಿಶನ್ ಔಟಾದ ನಂತರ ವೇಗವಾಗಿ ರನ್ ಗಳಿಸುವುದನ್ನು ರೋಹಿತ್ ಮುಂದುವರಿಸಿದರು. 25.4 ನೇ ಓವರ್‌ನಲ್ಲಿ ರಶೀದ್ ಖಾನ್ ಬೌಲಿಂಗ್‌ನಲ್ಲಿ ರೋಹಿತ್ ಬೌಲ್ಡ್ ಆದರು.
That 💯 feeling! 📸📸#TeamIndia | #INDvAFG | #MeninBlue | #CWC23 pic.twitter.com/AyMwCfBMmv
— BCCI (@BCCI) October 11, 2023
131 ರನ್‌ಗಳ ಅದ್ಭುತ ಆಟದಲ್ಲಿ 16 ಆಕರ್ಷಕ ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್ ಒಳಗೊಂಡಿದ್ದವು. ರೋಹಿತ್ ಈ ಪಂದ್ಯದಲ್ಲಿ ಮೂರು ವಿಶ್ವದಾಖಲೆಗಳನ್ನು ತನ್ನದಾಗಿಸಿಕೊಂಡರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಸಿಕ್ಸ್, ಏಕದಿನ ವಿಶ್ವಕಪ್‌ನಲ್ಲಿ ಹೆಚ್ಚು ಶತಕ ಹಾಗೂ ವಿಶ್ವಕಪ್‌ನಲ್ಲಿ ವೇಗವಾಗಿ ಶತಕ ಬಾರಿಸಿದ ಭಾರತೀಯ ಆಟಗಾರನೆಂಬ ಮೂರು ದಾಖಲೆಗಳು ರೋಹಿತ್ ಪಾಲಾಯಿತು.
ರೋಹಿತ್ ಔಟಾದ ನಂತರ ಆಟ ಮುಂದುವರಿಸಿದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ತಂಡವನ್ನು ಜಯದ ದಡಕ್ಕೆ ಮುಟ್ಟಿಸಿದರು.
ಈ ಸುದ್ದಿ ಓದಿದ್ದೀರಾ? ಮೋದಿಯ ತವರು ಗುಜರಾತ್‌ಗೆ ಅತೀ ಹೆಚ್ಚು ಕ್ರೀಡಾ ಅನುದಾನ: ಏಷ್ಯನ್ ಕ್ರೀಡಾಕೂಟದಲ್ಲಿ ಶೂನ್ಯ ಪದಕ
56 ಚೆಂಡುಗಳಲ್ಲಿ 55 ರನ್ ಗಳಿಸಿದ ವಿರಾಟ್ ಅಟದಲ್ಲಿ 6 ಬೌಂಡರಿಗಳಿದ್ದರೆ, 25 ರನ್ ಗಳಿಸಿದ ಶ್ರೇಯಸ್ ಅಯ್ಯರ್ ಬ್ಯಾಟಿಂಗ್‌ನಲ್ಲಿ 1 ಸಿಕ್ಸರ್ 1 ಬೌಂಡರಿಯಿತ್ತು.
ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನಿಸ್ತಾನ ಬ್ಯಾಟಿಂಗ್ ಆಯ್ದುಕೊಂಡು ನಾಯಕ ಹಶ್ಮತುಲ್ಲಾ ಶಾಹಿದಿ ಮತ್ತು ಅಜ್ಮತುಲ್ಲಾ ಒಮರ್ಜಾಯ್ ಅವರ ತಲಾ ಅರ್ಧಶತಕಗಳ ನೆರವಿನಿಂದ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 272 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು.
Most sixes in international cricket ✅
Most hundreds in Cricket World Cup history ✅
Fastest-ever Cricket World Cup hundred by an Indian ✅Rohit Sharma eclipsed several records during his 131 👊#CWC23 #INDvAFG pic.twitter.com/4tJNgAX8i6
— ICC Cricket World Cup (@cricketworldcup) October 11, 2023
63ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಹಶ್ಮತುಲ್ಲಾ ಶಾಹಿದಿ (82), ಅಜ್ಮತುಲ್ಲಾ ಒಮರ್ಜಾಯ್ (62) ತಲಾ ಅರ್ಧಶತಕ ಸಿಡಿಸಿದರು. ಅಲ್ಲದೆ, ನಾಲ್ಕನೇ ವಿಕೆಟ್ಗೆ ಶತಕದ ಜೊತೆಯಾಟವಾಡಿ ಗಮನಾರ್ಹ ಪ್ರದರ್ಶನ ನೀಡಿದರು. ಇದರಿಂದ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.
ತಲಾ ಅರ್ಧಶತಕ ಸಿಡಿಸಿ ಮಿಂಚುತ್ತಿದ್ದ ಶಾಹಿದಿ, ಒಮರ್ಜಾಯ್ಗೆ ಹಾರ್ದಿಕ್, ಕುಲ್ದೀಪ್ ಶಾಕ್ ನೀಡಿದರು. ಬಳಿಕ ಮೊಹಮ್ಮದ್ ನಬಿ (19), ನಜೀಬುಲ್ಲಾ ಜದ್ರಾನ್ (2), ರಶೀದ್ ಖಾನ್ನ್‌ರನ್ನು (16) ಬುಮ್ರಾ ಔಟ್ ಮಾಡಿದರು. ಆ ಮೂಲಕ ಪಂದ್ಯದಲ್ಲಿ 39/4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.