ಹಿರಿಯರನ್ನು ಗೌರವಯುತವಾಗಿ ಕಾಣಬೇಕು. ಸರ್ಕಾರದ ಎಲ್ಲ ಸೌಲಭ್ಯಗಳನ್ನು ಅವರಿಗೆ ದೊರಕಿಸುವಂತೆ ಸ್ನೇಹ ಸಂಜೀವಿನಿ ವಿವಿಧೋದ್ದೇಶಗಳು ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ಮಾಡಬೇಕು. ಜತೆಗೆ ನಾವೆಲ್ಲರೂ ಸೇರಿ ಅವರ ರಕ್ಷಣೆ ಮಾಡಬೇಕು ಎಂದು ವಿಕಲಚೇತನರ ಮತ್ತು ಹಿರಿಯ ನಾಗರಿಕ ಕಲ್ಯಾಣ ಅಧಿಕಾರಿ ಮಹಾಂತೇಶ್ ಕುರಿ ಸಲಹೆ ನೀಡಿದರು.
ಗದಗ ಜಿಲ್ಲೆ ನರಗುಂದ ನಗರದ ಸ್ನೇಹ ಸಂಜೀವಿನಿ ವಿವಿಧೋದ್ದೇಶಗಳು ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯು ವೈಭವ ನಿರ್ಗತಿಕರ ಆಶ್ರಮದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅಥಿತಿಗಳಾಗಿ ಮಾತನಾಡಿದರು.
ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ ಅವರು ಹಿರಿಯ ನಾಗರಿಕರಿಗೆ ಪುಸ್ತಕ ನೀಡುವ ಮೂಲಕ ಅವರಲ್ಲಿ ಕಾನೂನು ಅರಿವು ಮೂಡಿಸಿದರು. ಬಳಿಕ ಮಾತನಾಡಿದ ಅವರು, “ಸಮಾಜದಲ್ಲಿರುವ ಯುವ ಮಿತ್ರರು ಕಾನೂನಿನ ಮಹತ್ವವನ್ನು ಅರಿತು ಸಮಾಜದ ಬದಲಾವಣೆಗೆ ಬದ್ಧರಾಗಬೇಕು” ಎಂದರು.
ಅತಿಥಿ ಮಂಜುಳಾ ಮಾತನಾಡಿ, “ಈ ಸ್ನೇಹ ಸಂಜೀವಿನಿ ಸಂಸ್ಥೆ ಇನ್ನೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಉನ್ನತಿಯವಾಗಿ ಬೆಳೆಯಲಿ ಮತ್ತು ಸಮಾಜದಿಂದ ಅವರಿಗೆ ದೊರೆಯಬೇಕಾದ ಗೌರವವನ್ನು ದೊರಕಿಸುವಲ್ಲಿ ನಿಮ್ಮ ಕಾರ್ಯ ಶ್ಲಾಘನೀಯ” ಎಂದು ಸಂಸ್ಥಯನ್ನು ಹೊಗಳಿದರು.
ಈ ಸುದ್ದಿ ಓದಿದ್ದೀರಾ? ಮರ್ಯಾದೆಗೇಡು ಹತ್ಯೆ | ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ದುರುಳ ತಂದೆ
ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಆಸ್ಪತ್ರೆ ಮೂಲಕ ನಾಗರಿಕರಿಗೆ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಹನಮಂತ ದೇಸಾಯಿ, ಸ್ನೇಹ ಸಂಜೀವಿನ ಸಂಸ್ಥೆಯ ಅಧ್ಯಕ್ಷ ಶಶಿಕುಮಾರ್, ಸಂಸ್ಥೆ ಉಪಾಧ್ಯಕ್ಷ ಬಸವರಾಜ್ ಹವಳ, ಕಾಲೇಜು ವಿದ್ಯಾರ್ಥಿಗಳು ಮತ್ತು ಸಂಸ್ಥೆ ಹಿರಿಯ ನಾಗರಿಕರು ಇದ್ದರು.