- 30 ಜನರಲ್ಲಿ ಕೇವಲ ನಾಲ್ಕು ಜನ ಗೆದ್ದಿದ್ದಾರೆ
- 2018ರ ಚುನಾವಣೆಯಲ್ಲಿ 37 ಜನ ಗೆದ್ದಿದ್ವಿ
ಕಳೆದ ಚುನಾವಣೆಯಲ್ಲಿ ಕೇರಳ ಮಾದರಿ ಮಾಟ ಮಂತ್ರದಿಂದಲೇ ನಾವು ಸೋತಿದ್ದು. 2018ರ ಚುನಾವಣೆಯಲ್ಲಿ ನಾವು 37 ಜನ ಗೆದ್ದಿದ್ವಿ. ಅದರಲ್ಲಿ ಏಳು ಜನ ಹೋಗಿ 30 ಜನ ಉಳಿದುಕೊಂಡಿದ್ವಿ. ಆದರೆ ಆ 30 ಜನರಲ್ಲಿ ಕೇವಲ ನಾಲ್ಕು ಜನ ಗೆದ್ದಿದ್ದಾರೆ. ಉಳಿದವರು ಸೋಲಲು ಮಾಟ ಮಂತ್ರವೇ ಕಾರಣ ಎಂದು ಜೆಡಿಎಸ್ ಮಾಜಿ ಶಾಸಕ ಬಂಡೆಪ್ಪ ಕಾಶಂಪೂರ ಹೇಳಿದರು.
ಹುಬ್ಬಳ್ಳಿಯಲ್ಲಿ ನಡೆದ ಪಕ್ಷದ ಪುನಃಶ್ಚೇತನ ಪರ್ವದಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಸೋಲಿಗೆ ಕಾರಣ ಎನು ಎಂಬುದನ್ನು ಹೀಗೆ ಬಿಚ್ಚಿಟ್ಟರು.
“ಕಾಂಗ್ರೆಸ್‌ನವರಿಗೆ 135 ಸ್ಥಾನ ಬರುತ್ತದೆ ಎಂಬುದು ಗೊತ್ತಿರಲಿಲ್ಲ. ನಾವು 55 ಸ್ಥಾನ ಗೆಲ್ಲಬೇಕಿತ್ತು. ಮಾಟ ಮಂತ್ರ ಮಾಡಿರೋದು ನೂರಕ್ಕೆ ನೂರು ನಿಜವಾಗಿದ್ದು, ನಾವು ಹೀನಾಯವಾಗಿ ಸೋಲಲು ಕಾರಣವಾಯಿತು” ಎಂದರು.
“ಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಕೂಡ ಗೆಲ್ಲಬಾರದು. ಕಾಂಗ್ರೆಸ್ ವಿರುದ್ದ ಅವರದೇ 35 ಶಾಸಕರು ದಿನ ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಇನ್ನೊಂದು 20 ರಿಂದ 25 ಜನ ಡೈಲಾಗ್ ಹೊಡೆದರೂ ಸರ್ಕಾರದ ಕಥೆ ಮುಗೀತು”ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಹೇಳಿದ್ದ ಹಸಿ ಸುಳ್ಳು-‘ನಾನೂ ತಿನ್ನುವುದಿಲ್ಲ, ತಿನ್ನಲೂ ಬಿಡುವುದಿಲ್ಲ’
ಜಿ ಟಿ ದೇವೇಗೌಡ ಮಾತನಾಡಿ, “ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕರ್ನಾಟಕದಿಂದ ಹಣ ಹೋಗುತ್ತಿದೆ. ಚುನಾವಣೆಗಾಗಿ ಲಂಚದ ದುಡ್ಡನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಯಾರು ಏನೇ ಎನ್ನಲಿ ಮತ್ತೆ ಮೋದಿಯನ್ನು ಪ್ರಧಾನಿ ಮಾಡೋಣ” ಎಂದು ಸಮಾವೇಶದಲ್ಲಿ ಕರೆಕೊಟ್ಟರು.
“ಪಂಪಸೆಟ್ಗಳಿಗೆ ಕರೆಂಟ್ ಇಲ್ಲ, ರೈತರ ಆತ್ಮಹತ್ಯೆ 6ನೇ ಗ್ಯಾರಂಟಿಯಾಗಿದೆ. ಕಾಂಗ್ರೆಸ್ ಸರ್ಕಾರ ಒಂದು ಕಾಳು ಅಕ್ಕಿಯನ್ನೂ ಕೂಡ ಕೊಟ್ಟಿಲ್ಲ. ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಎಲ್ಲವೂ ಬೋಗಸ್” ಎಂದು ಹರಿಹಾಯ್ದರು.