ಚುಕ್ಕಿ ನಂಜುಂಡಸ್ವಾಮಿ ನೇತೃತ್ವದ ರೈತ ಸಂಘದ ಜಿಲ್ಲಾ ಘಟಕ ಅಸ್ತಿತ್ವಕ್ಕೆ ಬಂದಿದ್ದು, ರಾಯಚೂರು ಜಿಲ್ಲೆಗೆ ಕೇಂದ್ರ ಅಧ್ಯಯನ ತಂಡ ಬಾರದೇ ನಿರ್ಲಕ್ಷ್ಯ ಹಾಗೂ ತುಂಗಭದ್ರಾ ಜಲಾಶಯದ 104 ಮೈಲ್ ಕೊನೆಭಾಗಕ್ಕೆ ನೀರು ತಲುಪದೇ ಇರುವುದನ್ನು ವಿರೋಧಿಸಿ ಹೋರಾಟ ನಡೆಸಲಿದೆ ಎಂದು ಸಮಿತಿ ಮುಖಂಡ ನರಸಪ್ಪ ಯಾದವ ಹೇಳಿದರು.
ರಾಯಚೂರಿನಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, “ಜಿಲ್ಲೆಯಲ್ಲಿ ಬರ ಘೋಷಣೆ ಮಾಡಿದ್ದು ಬಿಟ್ಟರೆ, ಬೇರೆ ಯಾವ ಪರಿಹಾರ ಕಾರ್ಯಗಳೂ ಪ್ರಾರಂಭವಾಗಿಲ್ಲ. ಕೇಂದ್ರ ಬರ ಅಧ್ಯಯನ ತಂಡ ಕೆಲವೇ ಜಿಲ್ಲೆಗಳಿಗೆ ಭೇಟಿ ನೀಡಿ ಹೋಗಿದೆ.ರಾಯಚೂರು ಜಿಲ್ಲೆಗೆ ಆಗಮಿಸದೆ ಪರಿಸ್ಥಿತಿ ನೋಡದೇ ಇರುವುದು ಖಂಡನೀಯ” ಎಂದರು.
“ಗ್ರಾಮೀಣ ರೈತರಿಗೆ 12 ತಾಸು ವಿದ್ಯುತ್ ನೀಡುವುದಾಗಿ ಹೇಳಿದ್ದ ಕಾಂಗ್ರೆಸ್ ಸರ್ಕಾರ, ಈಗ ಮರೆತುಬಿಟ್ಟಿದೆ. 5 ತಾಸುಗಳಾದರೂ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಕೃಷಿ ಪಂಪ್‌ಸೆಟ್ ಅವಲಂಬಿತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ರೈತ ಸಂಘ ಹೋರಾಟ ನಡೆಸಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಅನಿಷ್ಠ ಪದ್ಧತಿಗಳ ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ
ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಂಗದೊಡ್ಡಿ ಮಾತನಾಡಿ, “ಸರ್ಕಾರದ ತಾರತಮ್ಯ ಧೋರಣೆಯಿಂದ ರೈತರ ಸಮಸ್ಯೆಗಳು ಹೆಚ್ಚುತ್ತಿವೆ. ಕೊನೆಭಾಗದ ರೈತರಿಗೆ ನೀರು ಬಾರದೇ ಇದ್ದು, ಎಪಿಎಂಸಿಗಳಲ್ಲಿ ರೈತರಿಗೆ ಮೋಸ ಮಾಡಲಾಗುತ್ತಿದೆ. ಹತ್ತಿಗೆ ಪ್ರತಿ ಕೆ ಜಿ ಬಾಡ್ ತೆಗೆಯುವ ಪದ್ಧತಿ ನಿಲ್ಲಿಸಬೇಕು. ಇಲ್ಲದೇ ಹೋದಲ್ಲಿ ಎಪಿಎಂಸಿ ಬಂದ್ ಮಾಡಿ ಪ್ರತಿಭಟನೆ ನಡೆಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಅಬ್ದುಲ್ ಮಜೀದ್, ಈರಣ್ಣ ಗೋರ್ಕಲ್, ಅಕ್ಕಮ್ಮ, ನರಸಪ್ಪ ಹೊಕ್ರಾಣ, ನರಸಿಂಗರಾವ ಕುಲ್ಕಣ, ಹುಚ್ಚಪ್ಪ ನಾಯಕ, ರಮೇಶ, ಹುಲಿಗೆಪ್ಪ ಜಾಲಿಬೆಂಚಿ ಿದ್ದರು.
ವರದಿ : ಹಫೀಜುಲ್ಲ