ಕುಡಿದ ಮತ್ತಿನಲ್ಲಿ ಶಾಲಾ ಬಸ್ ಚಾಲನೆ ಮಾಡಿ ಪಾದಚಾರಿಯೊಬ್ಬರಿಗೆ ಗುದ್ದಿದ ಪರಿಣಾಮ ವ್ಯಕ್ತಿ ಮೃತಪಟ್ಟ ಘಟನೆ ಬೆಂಗಳೂರಿನ ದೊಡ್ಡಬಾಣಸವಾಡಿಯಲ್ಲಿ ನಡೆದಿದೆ.
ಅಂಜಿನಪ್ಪ ಮೃತ ವ್ಯಕ್ತಿ. ಚಾಲಕ ಸುಭಾಷ್ (30) ಶಾಲಾ ಬಸ್ ಚಲಾಯಿಸುತ್ತಿದ್ದ ವ್ಯಕ್ತಿ. ಅಕ್ಟೋಬರ್ 10ರಂದು ಶಾಲಾ ಬಸ್ ಚಾಲಕ ಕುಡಿದು 25 ಶಾಲಾ ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ದೊಡ್ಡಬಾಣಸವಾಡಿ ಬಳಿ ತೆರಳುತ್ತಿದ್ದರು. ಈ ವೇಳೆ, ಬಾಣಸವಾಡಿ ಬಳಿ ಮೆಡಿಕಲ್ ಶಾಪ್‌ನಿಂದ ಮನೆಗೆ ತೆರಳುತ್ತಿದ್ದ ಅಂಜಿನಪ್ಪ ಅವರಿಗೆ ಗುದ್ದಿದ್ದಾನೆ.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಂಜಿನಪ್ಪ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ, ಅಕ್ಟೋಬರ್ 11 ರಂದು ಮೃತಪಟ್ಟಿದ್ದಾರೆ.
ಈ ಅಪಘಾತ ನಡೆಸುವುದಕ್ಕೂ ಮೊದಲು ಶಾಲಾ ಬಸ್ ಚಾಲಕ ಓರ್ವ ಮಹಿಳೆಗೆ ಬಸ್ ಗುದ್ದಿ ಬಂದಿದ್ದನು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಐಟಿ ದಾಳಿ ವೇಳೆ ಮಂಚದಡಿ ಕಂತೆ ಕಂತೆ ನೋಟು ಪತ್ತೆ
ಬಾಣಸವಾಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ಚಾಲಕ ಸುಭಾಷ್ನನ್ನು ಬಂಧಿಸಿದ್ದಾರೆ.