ಬೆಳಗಾವಿ – ಮುಂಬೈ ಮಾರ್ಗದಲ್ಲಿ ಸ್ಟಾರ್ ಏರ್ ಸಂಸ್ಥೆಯು ಹೆಚ್ಚುವರಿಯಾಗಿ ಆರಂಭಿಸಿದ ವಿಮಾನಯಾನ ಸೇವೆಗೆ ಭಾನುವಾರ ಚಾಲನೆ ನೀಡಿತು.
“ಬೆಳಗಾವಿ – ಮುಂಬೈ ಮಾರ್ಗದಲ್ಲಿ ಈ ಹಿಂದೆ ವಾರದಲ್ಲಿ ನಾಲ್ಕು ದಿನ(ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ) ಸ್ಟಾರ್ ಏರ್ ಸಂಸ್ಥೆ ವಿಮಾನ ಸಂಚರಿಸುತ್ತಿತ್ತು. ಈಗ ಹೆಚ್ಚುವರಿಯಾಗಿ ಮೂರು ದಿನ(ಭಾನುವಾರ, ಸೋಮವಾರ ಮತ್ತು ಶುಕ್ರವಾರ) ಸಂಚರಿಸಲಿದ್ದು, ವಾರದ ಎಲ್ಲ ದಿನ ಪ್ರಯಾಣಿಕರು ಸಂಚರಿಸಬಹುದು” ಎಂದು ಸಾಂಬ್ರಾ ವಿಮಾನ ನಿಲ್ದಾಣ ನಿರ್ದೇಶಕ ಎಸ್ ತ್ಯಾಗರಾಜನ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ರೈತರಿಗೆ ಬರ ಪರಿಹಾರ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಮಾಜಿ ಪ್ರಧಾನಿಗೆ ಮನವಿ
“ಮುಂಬೈನಿಂದ ಮಧ್ಯಾಹ್ನ 12:15ಕ್ಕೆ ಹೊರಡಲಿರುವ ವಿಮಾನ 1:25ಕ್ಕೆ ಬೆಳಗಾವಿ ತಲುಪಲಿದೆ. ಇಲ್ಲಿಂದ 1:55ಕ್ಕೆ ಹೊರಡಲಿರುವ ವಿಮಾನ 3:10ಕ್ಕೆ ಮುಂಬೈ ತಲುಪಲಿದೆ” ಎಂದು ಹೇಳಿದರು.