ಧಾರವಾಡ ಜಿಲ್ಲೆ ಹುಬ್ಬಳ್ಳಿಯ ಚಾಮುಂಡೇಶ್ವರಿ ಕಲ್ಯಾಣ ಸೇವಾ ಸಂಘ ಮತ್ತು ಪಂಚ ಕಮಿಟಿಯಿಂದ ಚಾಮುಂಡೇಶ್ವರಿ ನಗರದ ಹಿರಿಯರುಗಳಾದ ನರಸಪ್ಪ ಮಾದರ, ವೆಂಕಟರಮಣ ತಾಡಪತ್ರಿ, ಶ್ರೀರಾಮುಲು ಭಂಢಾರಿ ಮುಂತಾದವರ ಸಮ್ಮುಖದಲ್ಲಿ ಕಮಿಟಿ ಅಧ್ಯಕ್ಷ ಪರಶುರಾಮ ಮಲ್ಯಾಳ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ನವರಾತ್ರಿಯ ಒಂಬತ್ತು ದಿನಗಳೂ ಕೂಡ ಹಲವು ರೀತಿಯ ಪಂದ್ಯಾವಳಿಗಳನ್ನು ನಡೆಸಲಾಗುತ್ತಿದ್ದು, ಪುರುಷರು ಮತ್ತು ಮಹಿಳೆಯರಿಗಾಗಿ ಕ್ರಿಕೆಟ್, ವಾಲಿಬಾಲ್, ಕಬಡ್ಡಿ, ಲೆಮನ್ ಸ್ಪೂನ್, ರಂಗೋಲಿ ಸ್ಪರ್ಧೆ ಮುಂತಾದ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ವಿಜೇತರಿಗೆ ವಿಜಯದಶಮಿ ದಿನದಂದು ನಡೆಯುವ ಪಲ್ಲಕ್ಕಿ ಉತ್ಸವದ ಬಳಿಕ ಸಮಾರೋಪ ಸಭೆಯಲ್ಲಿ ಬಹುಮಾನಗಳನ್ನು ವಿತರಿಸುವುದಾಗಿ ಕಮಿಟಿಯ ಸದಸ್ಯರು ಪ್ರಕಟಣೆಗೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಮಹಿಷಾ ದಸರಾ ಅಸಂಖ್ಯಾತರಿಗೆ ಶಕ್ತಿ ತುಂಬಿದೆ: ಪಿ.ಎನ್. ರಾಮಯ್ಯ
ಕಮಿಟಿಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕೊಂಡಪಲ್ಲಿ ಮತ್ತು ಖಜಾಂಚಿ ಸುರೇಶ ಸೌದುಲ್, ಇತರ ಪದಾಧಿಕಾರಿಗಳಾದ ಮಂಜುನಾಥ ಕತ್ರಿಮಾಲ, ಆನಂದ ಮಾದರ ಮತ್ತು ಕ್ರೀಡಾಕೂಟದ ಉಸ್ತುವಾರಿ ಸಮಿತಿಯ ಹರೀಶ ತಾಡಪತ್ರಿ, ವೆಂಕಟೇಶ್ ಭಂಢಾರಿ, ಶ್ರೀನಿವಾಸ ಅನಂತಪುರ, ಸಂತೋಷ ಸೌದುಲ್, ಉಮೇಶ ಆತ್ಮಕೂರ, ಗಿರೀಶ, ಕುನಾಲ ಶಿರಿಶಾಲ, ಹರೀಶ, ಸಾಯಿ ಮುಂತಾದವರು ಇದ್ದರು.