- ಸಿದ್ದರಾಮಯ್ಯ ಅವರ ಸರ್ಕಾರ ಪ್ರತಿಯಾಗಿ ಸಚಿವರ ಇಲಾಖೆಗಳಿಗೆ ಟಾರ್ಗೆಟ್ ಕೊಟ್ಟಿದೆ
- ನಗರಾಭಿವೃದ್ಧಿ ₹250 ಕೋಟಿ, ಅಬಕಾರಿ ಇಲಾಖೆ ₹150 ಕೋಟಿ ರೂ. ಸಂಗ್ರಹಕ್ಕೆ ಗುರಿ
ಕಾಂಗ್ರೆಸ್ ಬಂದಿದೆ ಲೂಟಿಗೆ ಇಳಿದಿದೆ. ಮೊದಲ ಹಂತದಲ್ಲಿ ಹೈಕಮಾಂಡ್ ನೀಡಿರುವ ₹1000 ಕೋಟಿ ಟಾರ್ಗೆಟ್‌ಗೆ, ಸಿದ್ದರಾಮಯ್ಯ ಅವರ ಸರ್ಕಾರ ಪ್ರತಿಯಾಗಿ ಸಚಿವರ ಇಲಾಖೆಗಳಿಗೆ ಟಾರ್ಗೆಟ್ ಕೊಟ್ಟಿದೆ ಎಂದು ಬಿಜೆಪಿ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, “ಡಿಕೆ ಶಿವಕುಮಾರ್- ಬೆಂಗಳೂರು ನಗರಾಭಿವೃದ್ಧಿ ₹250 ಕೋಟಿ, ಆರ್.ಬಿ. ತಿಮ್ಮಾಪುರ- ಅಬಕಾರಿ ಇಲಾಖೆ ₹150 ಕೋಟಿ, ಸತೀಶ್ ಜಾರಕಿಹೊಳಿ- ಲೋಕೋಪಯೋಗಿ ಇಲಾಖೆ ₹115 ಕೋಟಿ, ಪ್ರಿಯಾಂಕ್ ಖರ್ಗೆ- ಗ್ರಾಮೀಣ ಅಭಿವೃದ್ಧಿ ಇಲಾಖೆ ₹100 ಕೋಟಿ, ದಿನೇಶ್ ಗುಂಡೂರಾವ್- ಆರೋಗ್ಯ ಇಲಾಖೆ ₹75 ಕೋಟಿ, ಚಲುವರಾಯಸ್ವಾಮಿ- ಕೃಷಿ ಇಲಾಖೆ ₹125 ಕೋಟಿ, ಹೆಚ್.ಸಿ.ಮಹದೇವಪ್ಪ- ಸಮಾಜ ಕಲ್ಯಾಣ ಇಲಾಖೆ ₹95 ಕೋಟಿ ಹಾಗೂ ಕೃಷ್ಣಬೈರೇಗೌಡ- ಕಂದಾಯ ಇಲಾಖೆ ₹90 ಕೋಟಿ” ಗುರಿ ನೀಡಲಾಗಿದೆ” ಎಂದು ಹೇಳಿದೆ.
ಎರಡನೇ ಹಂತದ ಪಟ್ಟಿಯನ್ನು ಇಂದು ಕರ್ನಾಟಕಕ್ಕೆ ಆಗಮಿಸುತ್ತಿರುವ ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಅವರಿಂದಲೇ ಸ್ವತಃ ಬಿಡುಗಡೆ ಆಗಲಿದೆ. ಐಟಿ ದಾಳಿ ಹಿನ್ನೆಲೆಯಲ್ಲಿ ಬಿಜೆಪಿ ಸಿದ್ದರಾಮಯ್ಯ ಬಗ್ಗೆ ಪೋಸ್ಟರ್ ರಿಲೀಸ್ ಮಾಡಿ, ಸಿದ್ದರಾಮಯ್ಯರನ್ನು ಕಲೆಕ್ಷನ್ ಮಾಸ್ಟರ್ ಎಂದು ಟೀಕಿಸಿದೆ. ಕಲೆಕ್ಷನ್ ಮಾಸ್ಟರ್ ಎಂದು ಬರೆದಿರುವ ಬಜೆಟ್ ಸೂಟ್ ಕೇಸ್ ಹಿಡಿದುಕೊಂಡ ಸಿದ್ದರಾಮಯ್ಯ ಚಿತ್ರವನ್ನು ಬಿಜೆಪಿ ಪೋಸ್ಟ್ ಮಾಡಿದೆ.
Karnataka CM – Karnataka Collection Master. pic.twitter.com/yEB5ekdtNo
— BJP Karnataka (@BJP4Karnataka) October 16, 2023
25 ಲಕ್ಷ ಕೊಡ್ಲೇಬೇಕು ಅಬಕಾರಿ ನೀತಿ
ಅಧಿಕಾರಕ್ಕೆ ಬಂದ ಒಂದೇ ವಾರದಲ್ಲಿ ಕೋಟಿ ಕೋಟಿ ರೂ.ಗೆ ಅಬಕಾರಿ ಹುದ್ದೆಗಳನ್ನು ಸೇಲ್‌ಗೆ ಇಟ್ಟಿದ್ದ ಲೂಟಿಕೋರ ಕಾಂಗ್ರೆಸ್ ಸರ್ಕಾರ, ಅಬಕಾರಿ ಇಲಾಖೆಯನ್ನು ಭ್ರಷ್ಟಾಚಾರದ ಹೆಬ್ಬಾಗಿಲು ಮಾಡಿಕೊಂಡಿದೆ. ಲೈಸೆನ್ಸ್ ಟ್ರಾನ್ಸ್‌ಫರ್, ಲೈಸೆನ್ಸ್ ಶಿಫ್ಟಿಂಗ್‌ಗೆ ಲಕ್ಷ ಲಕ್ಷ ಹಣಕ್ಕೆ ಅಧಿಕಾರಿಗಳು ರಾಜಾರೋಷವಾಗಿ ಕೈ ಚಾಚುತ್ತಿರುವುದು ಎಟಿಎಂ ಸರ್ಕಾರಕ್ಕಾಗಿಯೇ” ಎಂದು ಟೀಕಿಸಿದೆ.
“ರಾಜ್ಯದಲ್ಲಿ ಈ ಪರಿ ಭ್ರಷ್ಟಾಚಾರವನ್ನು ನೋಡಿದರೆ, ನೀವು ತಿನ್ನಿ ನಮಗೂ ಕೊಡಿ ಎನ್ನುವ ಅನಧಿಕೃತ ಆದೇಶವನ್ನು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಹೊರಡಿಸಿದಂತಿದೆ. ರಾಜ್ಯದ ಕಾಂಗ್ರೆಸ್ ಪಂಚ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಕೊಟ್ಟಿರುವ ಮೊದಲನೇ ಹಂತದ ₹1000 ಕೋಟಿ ಟಾರ್ಗೆಟ್ ಯಾವ ರಾಜ್ಯಕ್ಕೆ ಎಷ್ಟು?
✔ ತೆಲಂಗಾಣ ಕಾಂಗ್ರೆಸ್‌ಗೆ ₹300 ಕೋಟಿ
✔ ಮಿಜೋರಾಂ ಕಾಂಗ್ರೆಸ್‌ಗೆ ₹100 ಕೋಟಿ
✔ ಛತ್ತಿಸ್‌ಗಢ ಕಾಂಗ್ರೆಸ್‌ಗೆ ₹200 ಕೋಟಿ
✔ ರಾಜಸ್ಥಾನ ಕಾಂಗ್ರೆಸ್‌ಗೆ ₹200 ಕೋಟಿ
✔ ಮಧ್ಯಪ್ರದೇಶ ಕಾಂಗ್ರೆಸ್‌ಗೆ ₹200 ಕೋಟಿ
ಕಮಿಷನ್, ಕಲೆಕ್ಷನ್ ಮೂಲಕ ಸಾವಿರ ಕೋಟಿ ಟಾರ್ಗೆಟ್ ಮಾಡಿ ಸಂಗ್ರಹಿಸುತ್ತಿರುವ ಕಾಂಗ್ರೆಸ್ ಹಣ ಹಂಚುವ ಮುನ್ನವೇ ಸಿಕ್ಕಿ ಬಿದ್ದಿದೆ” ಎಂದು ಆರೋಪಿಸಿದೆ.