ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಸಮೀಪದಅರಬಾವಿ ಗ್ರಾಮದ ದುರದುಂಡೇಶ್ವರ ಮಠದ ಸಿದ್ಧಲಿಂಗೇಶ್ವರ ಸ್ವಾಮೀಜಿ(75) ಲಿಂಗೈಕ್ಯರಾಗಿದ್ದಾರೆ.
ಭಾನುವಾರ ರಾತ್ರಿ ಪೂಜೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಗೋಕಾಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಹೃದಯಾಘಾತದಿಂದ ಕೊನೆಯುಸಿಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ರಾಮದುರ್ಗ ತಾಲೂಕಿನ ಸಾಲಹಳ್ಳಿಯಲ್ಲಿ ಜನಿಸಿದ ಸಿದ್ದಲಿಂಗೇಶ್ವರರು 1977ರಲ್ಲಿ ಮಠದ ಪೀಠ ಅಲಂಕರಿಸಿದ್ದರು. ಅವರು ದುರದುಂಡೇಶ್ವರ ಮಠದ 11ನೇ ಪೀಠಾಧಿಪತಿಯಾಗಿದ್ದರು.