ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣ ಬೆಳೆಸಲು ‘ಶಕ್ತಿ ಯೋಜನೆ’ಯನ್ನು ಜಾರಿಗೆ ತಂದಿದೆ. ಆದರೆ, ಹೆಚ್ಚಿನ ಇನ್ಸೆಂಟಿವ್ ಆಸೆಗೆ ಬಿದ್ದ ಬಸ್ ನಿರ್ವಾಹಕರೊಬ್ಬರು ಮಹಿಳೆಯರಿಗಾಗಿ ಮೀಸಲಿರುವ ಉಚಿತ ಟಿಕೆಟ್‌ಗಳನ್ನು ಬೇಕಾಬಿಟ್ಟಿಯಾಗಿ ಹರಿದು ಬಿಸಾಕುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಈ ಸಂಬಂಧ ತನಿಖೆ ನಡೆಸಿದ ಅಧಿಕಾರಿಗಳು ನಿರ್ವಾಹಕರನ್ನು ಅಮಾನತು ಮಾಡಿದ್ದಾರೆ.
ಬೇಕಾಬಿಟ್ಟಿಯಾಗಿ ಟಿಕೆಟ್ ಹರಿದು ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿದ್ದ ಬಸ್ ನಿರ್ವಾಹಕ ಪ್ರಕಾಶ್ ಅರ್ಜುನ್ ಕೊಟ್ಯಾಳ ಅಮಾನತುಗೊಂಡವರು.
ಇವರು ಡಿಪೋ-17 ಮಾರ್ಗದ ಸಂಖ್ಯೆ-242B ಮೆಜೆಸ್ಟಿಕ್ನಿಂದ ತಾವರಕೆರೆ ಮಾರ್ಗದಲ್ಲಿ ಸಂಚರಿಸುವ ಬಿಎಂಟಿಸಿ ಬಸ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಉಚಿತ ಪ್ರಯಾಣ ಕಲ್ಪಿಸುವ ದೃಷ್ಟಿಯಿಂದ ಶಕ್ತಿ ಯೋಜನೆ ಜಾರಿಗೆ ತಂದಿದೆ. ಇದನ್ನೇ ದುರ್ಬಳಕೆ ಮಾಡಿಕೊಂಡ ಬಸ್ ನಿರ್ವಾಹಕರು ಇನ್ಸೆಂಟಿವ್ ಆಸೆಗೋಸ್ಕರ ಬೇಕಾಬಿಟ್ಟಿಯಾಗಿ ಟಿಕೆಟ್ ಹರಿದು ಬೀಸಾಕಿದ್ದಾರೆ. ಇದನ್ನು ಕಂಡ ಮಹಿಳಾ ಪ್ರಯಾಣಕಿಯೊಬ್ಬರು ‘ಯಾಕೆ ಈ ರೀತಿ ಟಿಕೆಟ್ ಹರಿದು ಬೀಸಾಕುತ್ತಿದ್ದೀರಿ’ ಎಂದು ಪ್ರಶ್ನಿಸಿದ್ದಾರೆ.
ಮಹಿಳೆಯರಿಗೆ ಮೀಸಲಾಗಿರುವ ಉಚಿತ ಟಿಕೆಟ್‌ಗಳನ್ನು ಹರಿದು, ನಿಗಮಗಳಿಗೆ ನಿರ್ವಾಹಕರು ಹೆಚ್ಚಿನ ಲೆಕ್ಕ ತೋರಿಸುತ್ತಾರೆ. ಇದರಿಂದ ಹೆಚ್ಚಿನ ಫ್ರೀ ಟಿಕೆಟ್ ತೋರಿಸಿದರೆ ಹೆಚ್ಚು ಇನ್ಸೆಂಟಿವ್ ಬರಬಹುದು ಎಂಬ ಆಸೆಯಿಂದ ಈ ರೀತಿ ಮಾಡುತ್ತಿದ್ದಾರೆ ಎಂಬ ಆರೋಪವಿದೆ.
ಈ ಸಂಬಂಧ ಅಧಿಕಾರಿಗಳು ಬಸ್ ನಿರ್ವಾಹಕ ಅರ್ಜುನ್ ಅವರನ್ನು ಬಿಎಂಟಿಸಿ ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಆ ಬಳಿಕ ಬಸ್ ನಿರ್ವಾಹಕ ಅರ್ಜುನ್ ಅವರನ್ನು ಕೆಲಸದಿಂದ ಅಮಾನತು ಮಾಡಿ ಆದೇಶಿಸಲಾಗಿದೆ.
ಈ ಘಟನೆ ಬೆನ್ನಲ್ಲೇ, ಈ ರೀತಿಯ ಘಟನೆಗಳು ಮತ್ತೆ ಮರುಕಳಿಸದಂತೆ, ನಿಗಮ ಇತರ ಬಸ್ ನಿರ್ವಾಹಕರಿಗೆ ಎಚ್ಚರಿಕೆ ನೀಡಿದೆ.
ಈ ಸುದ್ದಿ ಓದಿದ್ದೀರಾ? ಶಕ್ತಿ ಯೋಜನೆ | ಬೇಕಾಬಿಟ್ಟಿಯಾಗಿ ಉಚಿತ ಟಿಕೆಟ್ ಹರಿದು ಬೀಸಾಕಿದ ಬಿಎಂಟಿಸಿ ನಿರ್ವಾಹಕ
ಅ.11 ರಿಂದ ಅ.14ರವರೆಗೆ ನಾಲ್ಕು ನಿಗಮದ ಬಸ್‌ಗಳಲ್ಲಿ 77,56,72,604 ಮಹಿಳೆಯರು ಸಂಚರಿಸಿದ್ದಾರೆ. ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ 18,08,45,54,754 ಆಗಿದೆ. ಪ್ರತಿನಿತ್ಯ ಅಂದಾಜು 60 ಸಾವಿರಕ್ಕೂ ಹೆಚ್ಚು ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಮಹಿಳಾ ಪ್ರಯಾಣಿಕರ ಸಾರಿಗೆ ವೆಚ್ಚವನ್ನು ಸರ್ಕಾರ ನಿಗಮಗಳಿಗೆ ನೀಡುತ್ತಿದೆ.