ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಮತ್ತೆ ಗೆಲ್ಲಿಸಿದ್ರೆ ಉಳಿಯುತ್ತೀರಿ, ಇಲ್ಲಾಂದ್ರೆ ಉಳಿಯುವುದಿಲ್ಲ ಎಂದಿದ್ದ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಮಹಾಲಿಂಗೇಶ್ವರ ಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಇದೀಗ ಉಲ್ಟಾ ಹೊಡೆದಿದ್ದಾರೆ. ನಾನು ಅಂತಹ ಹೇಳಿಕೆಯನ್ನಾಗಲೀ ಅಥವಾ ಭವಿಷ್ಯವನ್ನಾಗಲಿ ನುಡಿದೇ ಇಲ್ಲವೆಂದು ಹೇಳಿದ್ದಾರೆ.
ಮೋದಿಯನ್ನು ಮತ್ತೆ ಆಯ್ಕೆ ಮಾಡಬೇಕೆಂದು ಅವರು ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬೆನ್ನಲ್ಲೇ ಅವರು ಸ್ಪಷ್ಟನೆ ನೀಡಿದ್ದು, “ನಾನು ಅಂತಹ ಹೇಳಿಕೆ ನೀಡಿಲ್ಲ. ಯಾರೋ ಕಿಡಿಗೇಡಿಗಳು ವಿಡಿಯೋ ಹರಿಬಿಟ್ಟಿದ್ದಾರೆ. ನಾನು ಯಾವ ಪಕ್ಷದ ಪರವೂ ಮಾತನಾಡಿಲ್ಲ. ನನಗೆ ಏನೂ ಗೊತ್ತಿಲ್ಲ” ಎಂದಿದ್ದಾರೆ.
ನವರಾತ್ರಿ ದೀಪೋತ್ಸವ ವೇಳೆ ಅವರು ಕೈಯಲ್ಲಿ ಜಟ ಹಿಡಿದು ಜಟವಾಣಿ ನುಡಿದಿದ್ದಾರೆ ಎಂದು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ.