ದಸರಾ ಹಬ್ಬದ ಹಿನ್ನೆಲೆ, ಪ್ರಯಾಣಿಕರ ಹೆಚ್ಚಿನ ಬೇಡಿಕೆಗೆ ಅನುಗುಣವಾಗಿ ವಾಸ್ಕೋ ಡ ಗಾಮಾ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ಬೆಂಗಳೂರು ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ರೈಲು ಸೇವೆಯನ್ನು ಓಡಿಸಲು ನೈರುತ್ಯ ರೈಲ್ವೆ ಇಲಾಖೆ ನಿರ್ಧರಿಸಿದೆ.
(ರೈಲು ಸಂಖ್ಯೆ 07357) ಅ.20 ರಂದು ಸಂಜೆ 5:30ಕ್ಕೆ ಎಸ್ಎಂವಿಟಿ ಬೆಂಗಳೂರಿನಿಂದ ಪ್ರಯಾಣವನ್ನು ಆರಂಭಿಸಿ, ಮರುದಿನ ಬೆಳಗ್ಗೆ 9:30ಕ್ಕೆ ವಾಸ್ಕೋ ಡ ಗಾಮಾ ನಿಲ್ದಾಣವನ್ನು ತಲುಪಲಿದೆ.
(ರೈಲು ಸಂಖ್ಯೆ 07358) ಅಕ್ಟೋಬರ್ 24ರಂದು ಮಧ್ಯಾಹ್ನ 02:30ಕ್ಕೆ ವಾಸ್ಕೋ ಡ ಗಾಮಾದಿಂದ ಹೊರಟು ಮರುದಿನ ಬೆಳಗ್ಗೆ 5 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.
ಎರಡೂ ಮಾರ್ಗಗಳಲ್ಲಿ ಈ ವಿಶೇಷ ರೈಲು ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಎಸ್.ಎಂ.ಎಂ ಹಾವೇರಿ, ಎಸ್.ಎಸ್.ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ, ಕ್ಯಾಸಲ್ ರಾಕ್, ಕುಲೆಮ್, ಸ್ಯಾನ್ವೊರ್ಡೆಮ್ ಮತ್ತು ಮಡಗಾಂವ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ₹22 ಲಕ್ಷ ಮೌಲ್ಯದ ವಿದೇಶಿ ಸಿಗರೇಟ್ ಅಕ್ರಮ ದಾಸ್ತಾನು ಪತ್ತೆ; ಸಿಸಿಬಿ ಪೊಲೀಸ್ ದಾಳಿ
ವಿಶೇಷ ರೈಲುಗಳು ಎಸಿ ಪ್ರಥಮ ದರ್ಜೆ (1), ಎಸಿ ಎರಡನೇ ದರ್ಜೆ (1), ಎಸಿ ಮೂರನೇ ದರ್ಜೆ (2), ಸ್ಲೀಪರ್ ಕ್ಲಾಸ್ (9), ಸಾಮಾನ್ಯ ದ್ವಿತೀಯ ದರ್ಜೆ (2) ಮತ್ತು ಎಸ್ಎಲ್ಆರ್ (2) ಸೇರಿದಂತೆ ಒಟ್ಟು 17 ಬೋಗಿಗಳು ಒಳಗೊಂಡಿದೆ.
ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು ಅಧಿಕೃತ ವೆಬ್ಸೈಟ್ https://enquiry.indianrail.gov.in ಅನ್ನು ಪರಿಶೀಲಿಸಬಹುದು ಅಥವಾ 139ಗೆ ಡಯಲ್ ಮಾಡಿ ಅಥವಾ ತಮ್ಮ ಹತ್ತಿರದ ರೈಲ್ವೆ ನಿಲ್ದಾಣವನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಹೇಳಿದೆ.