ಜೋಕುಮಾರ ಸ್ವಾಮಿ ಮನೆ ಮನೆಗೆ ಬಂದ – ರೈತರಲ್ಲಿ‌ ಸಂತಸ ತಂದ

Date:

Advertisements

ಉತ್ತರ ಕರ್ನಾಟಕದಲ್ಲಿ ಆಚರಿಸಲಾಗುವ ಪರಂಪರೆಯ ಜಾನಪದ ಹಬ್ಬಗಳಲ್ಲಿ ಜೋಕುಮಾರ ಸ್ವಾಮಿ ಹಬ್ಬವೂ ಒಂದು. ಬರಗಾಲದ ಬೇಸಿಗೆ ಸಮಯದಲ್ಲಿ ಮಳೆಗಾಗಿ ಜೋಕುಮಾರನ ಮಣ್ಣಿನ ಮೂರ್ತಿ ಮಾಡಿ ವಿಶೇಷ ಪೂಜೆ ಸಲ್ಲಿಸಿ, ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ, ಅವುಗಳನ್ನು ಜೋಕುಮಾರ ಸ್ವಾಮಿ ಬಗೆಹರಿಸುತ್ತಾನೆಂಬ ನಂಬಿಕೆ ಹಳ್ಳಿಗಳ ರೈತಾಪಿ ಜನರದ್ದು.

ಗಣೇಶ ಚತುರ್ಥಿ ನಂತರದ ಅಷ್ಟಮಿ ದಿನದಂದು ಜೋಕುಮಾರ ಸ್ವಾಮಿ ಹುಟ್ಟುತ್ತಾನೆ. ಹುಟ್ಟಿದ ಏಳು ದಿನಕ್ಕೆ ಜೋಕುಮಾರ ಸ್ವಾಮಿ ಸಾಯುತ್ತಾನೆ. ಬಡಿಗೇರ ಸಮುದಾಯದ ಕುಟುಂಬದದವರು ಕೆರಗೆ ಹೋಗಿ ಅರಲನ್ನು ತಂದು ಜೋಕುಮಾರ ಸ್ವಾಮಿಯ ಮೂರ್ತಿಯನ್ನು ತಯಾರು ಮಾಡುತ್ತಾರೆ. ಅಗಲ‌ ಮುಖ, ಮುಖಕ್ಕೆ ತಕ್ಕಂತೆ ಕಣ್ಣು, ತೆರೆದ ಬಾಯಿ, ಚೂಪಾದ ಮೀಸೆಯುಳ್ಳ ಮೂರ್ತಿ ತಯಾರಿಸಿ ಬಾರಕೇರ ಸಮುದಾಯಕ್ಕೆ ಒಪ್ಪಿಸುತ್ತಾರೆ.

ಬಾರಕೇರ ಸಮುದಾಯದ ಮಹಿಳೆಯರು ಜೋಕುಮಾರಸ್ವಾಮಿ ಮೂರ್ತಿಗೆ ಕಿರೀಟದಂತೆ ಇರುವ ತಲೆಸುತ್ತು ಸುತ್ತಿ, ಹಣೆಗೆ ವಿಭೂತಿ, ಕುಂಕುಮ ಭೊಟ್ಟು ಇಟ್ಟು ಅಲಂಕಾರ ಮಾಡುತ್ತಾರೆ. ಬಿದಿರಿನ ಬುಟ್ಟಿಯಲ್ಲಿ ಬೇವಿನ ಎಲೆಗಳನ್ನು ಇಟ್ಟು, ಅದರ ನಡುವೆ ಅಲಂಕಾರಗೊಂಡ ಜೋಕುಮಾರ ಸ್ವಾಮಿಯ ಮೂರ್ತಿಯನ್ನು ಇಡುತ್ತಾರೆ.

Advertisements

WhatsApp Image 2023 10 18 at 2.07.31 PM

ಇದೆಲ್ಲ ಮುಗಿದ ಮೇಲೆ ಬಾರಕೇರ ಸಮುದಾಯದ ಐವರು ಮಹಿಳೆಯರು ಜೋಕುಮಾರ ಸ್ವಾಮಿಯನ್ನು ಪೂಜಿಸುತ್ತಾರೆ. ಒಬ್ಬ ಮಹಿಳೆ ಜೋಕುಮಾರ ಸ್ವಾಮಿಯನ್ನು ಹೊತ್ತರೆ, ಒಬ್ಬರು ಕಾಡಿಗೆ ಮತ್ತು ಜೊಳದ ನುಚ್ಚು ಬುಟ್ಟಿಯನ್ನು ಹೊರುತ್ತಾರೆ. ಇನ್ನೂ ಮೂರು ಹಿರಿ ಮಹಿಳೆಯರು (ಅಮ್ಮ) ಜೋಕುಮಾರ ಸ್ವಾಮಿಯ ಹಾಡುಗಳನ್ನು ಹಾಡುತ್ತಾರೆ.

“ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡ ಕೆರೆಗಳರಲ್ಲ ತುಂವಿ ಒಡ್ಡುಗಳೆಲ್ಲ ಒಡೆದಾವು”, “ಅಬ್ಬಬ್ಬಾ ಇವನ ಏನ ಡೌಲು – ಜೋಕುಮಾರ ಆಗ್ಯಾನ ಜೋಕುಮಾರ” ಹಾಡುಗಳನ್ನು ಹಾಡುತ್ತಾ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ. ರೈತರ ಮನೆಗಳಿಗೆ ಹೋಗಿ, ಬಾಗಿಲ ಮುಂದೆ ಇಟ್ಟು ಹಾಡುಗಳನ್ನು ಹಾಡುತ್ತಾರೆ.

ಜೋಕುಮಾರ ಸ್ವಾಮಿ ಮನೆಗೆ ಬಂದನೆಂದು ಜೋಳ, ಅಕ್ಕಿ, ರೊಟ್ಟಿ, ಮೆಣಸಿನಕಾಯಿ, ಉಪ್ಪು, ತರಕಾರಿ, ಹೊಲದಲ್ಲಿ ಬೆಳೆದ ಧಾನ್ಯಗಳನ್ನು ನೀಡುತ್ತಾರೆ. ಹೀಗೆ ನೀಡಿದವರಿಗೆ ಜೋಗಪ್ಪನ ಪ್ರಾಸಾದ ಜೋಳದ ನುಚ್ಚು, ಕಾಡಿಗೆ ಕೊಡುತ್ತಾರೆ. ಈ ಪ್ರಸಾದವನ್ನು ಊರಲ್ಲಿರುವ ಪ್ರತಿಯೊಬ್ಬ ರೈತನು ತಗೊಂಡು ತಮ್ಮ ಜಮೀನುಗಳಿಗೆ ಚೆಲ್ಲುತ್ತಾರೆ. ಹಾಗೆ ಚೆಲ್ಲಿದರೆ ಹೊಲದಲ್ಲಿ ಬೆಳೆದ ಬೆಳೆ ಹುಲುಸಾಗಿ ಬೆಳೆಯುತ್ತದೆ ಎಂಬ ನಂಬಿಕೆ ರೈತರಲ್ಲಿದೆ. ಕಾಡಿಗೆಯನ್ನು ದನಕರುಗಳಿಗೆ ಹಚ್ಚಿದರೆ ಚಿಕ್ಕಾಡಿ, ಉಣ್ಣೆ ಆಗುವುದಿಲ್ಲ ಎಂದೂ ಅವರು ನಂಬುತ್ತಾರೆ.

WhatsApp Image 2023 10 18 at 2.07.32 PM

ಜೋಕುಮಾರ ಸ್ವಾಮಿಯನ್ನು ಹೊತ್ತ ಮಹಿಳೆಯರಿಗೆ ರೈತರು ನೀರನ್ನು ಹೂಯ್ಯೂತ್ತಾರೆ. ಇದರಿಂದ ಭೂಮಿಗೆ ಮಳೆ ಆಗುತ್ತದೆ ಎನ್ನುತ್ತಾರೆ ರೈತರು. ಏಳು ದಿನ ಜೋಕುಮಾರ ಸ್ವಾಮಿಯನ್ನು ಹೊತ್ತು ಊರೂರು, ರೈತರ ಮನೆಗಳಿಗೆ ತೆರಳಿ ಮೆರವಣಿಗೆ ನಡೆಯುತ್ತದೆ. ಏಳನೆಯ ದಿನಕ್ಕೆ ಜೋಕುಮಾರ ಸ್ವಾಮಿಯನ್ನು ದಲಿತರ ವಸತಿ ಪ್ರದೇಶದಲ್ಲಿ ಇಟ್ಟು, ಅವನ ಸುತ್ತ ಮುಳ್ಳುಕಂಟಿ ಹಾಕಿ ಮಹಿಳೆಯರು ಸುತ್ತುತ್ತಾರೆ. ಆಗ ಮಹಿಳೆಯರ ಸೆರಗು ಮುಳ್ಳಿಗೆ ಸಿಕ್ಕಿಕೊಂಡರೆ, ಜೋಕುಮಾರ ಸ್ವಾಮಿಯೇ ಎಳೆದಿದ್ದಾನೆ ಎಂದು ಆ ಮೂರ್ತಿಯನ್ನು ಹೊಡೆದು (ಸಾಯಿಸಿ) ಹಳ್ಳದಲ್ಲಿ ಮುಚ್ಚುತ್ತಾರೆ.

ಜೋಕುಮಾರ ಸ್ವಾಮಿ ಸತ್ತ ನಂತರ ಅಗಸ ಸಮುದಾಯದವರು ತಿಥಿ ಮಾಡಿ ಅಡುಗೆ ಮಾಡಿ ಊಟ ಮಾಡುವುದು ಸಂಪ್ತದಾಯವಾಗಿ ಬೆಳೆದು ಬಂದಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X