ಭಾರತ ಗೆಲ್ಲಲು ಬೇಕಿದ್ದು 26, ಕೊಹ್ಲಿ ಶತಕಕ್ಕೂ ಬೇಕಿತ್ತು 26: ಸತ್ಯ ಬಿಚ್ಚಿಟ್ಟ ಕೆ ಎಲ್ ರಾಹುಲ್

Date:

Advertisements

ಐಸಿಸಿ ಏಕದಿನ ವಿಶ್ವಕಪ್ 2023ರ ಟೂರ್ನಿಯ ಭಾರತ ಬಾಂಗ್ಲಾದೇಶ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಶತಕ ಗಳಿಸಿದ ರೀತಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಪಂದ್ಯದಲ್ಲಿ ಭಾರತ ಗೆಲ್ಲಲು 26 ಹಾಗೂ ವಿರಾಟ್ ಶತಕ ಪೂರೈಸಲು 26 ರನ್‌ ಬೇಕಿತ್ತು. ಎಲ್ಲ ರನ್‌ ತಾವೆ ಮಾಡಿ ಏಕದಿನ ಮಾದರಿಯಲ್ಲಿ 48ನೇ ಶತಕ ಪೂರೈಸಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ಒಂದು ಗುಂಪು ಕೊಹ್ಲಿ ಶತಕ ಬಾರಿಸುವ ಸಲುವಾಗಿಯೇ ಬೌಂಡರಿ ಬಳಿ ಚೆಂಡು ಹೋದರೂ ರನ್‌ ಓಡದೆ 100 ಪೇರಿಸಿದ ನಡೆಯನ್ನು ಆಕ್ಷೇಪಿಸಿದರೆ, ಮತ್ತೊಂದು ಗುಂಪು ವಿರಾಟ್‌ ಶತಕ ಪೇರಿಸಿದ್ದನ್ನು ಸಮರ್ಥಿಸಿಕೊಂಡಿದೆ.

ಆದರೆ ನಿಜವಾದ ಸತ್ಯ ಗೊತ್ತಿದ್ದು ಮಾತ್ರ ಜೊತೆಗಾರನಾಗಿ ಬೆಂಬಲ ನೀಡಿದ್ದ ಕನ್ನಡಿಗ ಕೆ ಎಲ್‌ ರಾಹುಲ್‌ಗೆ ಮಾತ್ರ. ವೀರೂ ಮತ್ತು ಕೆ ಎಲ್‌ ರಾಹುಲ್ ಜೋಡಿಯು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಮುರಿಯದ 83 ರನ್‌ಗಳ ಜೊತೆಯಾಟ ಆಡಿ ತಂಡಕ್ಕೆ 7 ವಿಕೆಟ್ ಗೆಲುವು ತಂದುಕೊಟ್ಟರು.

Advertisements

ಈ ಸುದ್ದಿ ಓದಿದ್ದೀರಾ? ಏಕದಿನ ವಿಶ್ವಕಪ್ 2023 | ಬಾಂಗ್ಲಾ ಮಣಿಸಿದ ಭಾರತ; ಶತಕದೊಂದಿಗೆ ಅಬ್ಬರಿಸಿದ ವಿರಾಟ್ ಕೊಹ್ಲಿ

ಟೀಂ ಇಂಡಿಯಾಕ್ಕೆ ಬೇಕಿದ್ದ 26 ರನ್‌ಗಳನ್ನು ಪೂರ್ತಿ ವಿರಾಟ್‌ ಹೊಡೆದ ಬಗ್ಗೆ ಕೆ ಎಲ್ ರಾಹುಲ್‌ ಸತ್ಯ ಬಿಚ್ಚಿಟ್ಟಿದ್ದಾರೆ. ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿ “ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಸಾಕಷ್ಟು ಗೊಂದಲದಲ್ಲಿದ್ದರು. ನಾನು ಒಂದು ರನ್ ತೆಗೆದುಕೊಳ್ಳದೆ ಇರುವುದು ಅಷ್ಟು ಚೆನ್ನಾಗಿ ಕಾಣಿಸುವುದಿಲ್ಲ. ಇದು ವಿಶ್ವಕಪ್. ನಾನು ನನ್ನ ವೈಯಕ್ತಿಕ ದಾಖಲೆಗೆ ಆಡಿದ್ದೇನೆ ಎಂದು ಜನರು ಮಾತನಾಡಿಕೊಳ್ಳುವುದು ನನಗೆ ಇಷ್ಟವಿಲ್ಲ” ಎಂದು ಹೇಳಿದ್ದರು.

“ನಾವು ಈ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದು, ಸುಲಭವಾಗಿ ಪಂದ್ಯ ಗೆಲ್ಲುತ್ತೇವೆ. ನೀವು ಶತಕದ ಮೂಲಕ ಮೈಲುಗಲ್ಲು ಸ್ಥಾಪಿಸಲು ಬಯಸಿದ್ದರೆ ಅದನ್ನು ಪೂರೈಸಲು ಪ್ರಯತ್ನಿಸಿ ಎಂದು ಹೇಳಿದ್ದೆ. ಹೀಗಾಗಿ ನಾನು ನನಗೆ ಬ್ಯಾಟ್ ಮಾಡಲು ಅವಕಾಶ ಸಿಕ್ಕಿದಾಗ ಒಂಟಿ ರನ್‌ಗಳನ್ನು ಓಡದೆ ವಿರಾಟ್‌ಗೆ ಅವಕಾಶ ಮಾಡಿಕೊಟ್ಟೆ” ಎಂದು ರಾಹುಲ್ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ 97 ರನ್ ಗಳಿಸಿದ್ದಾಗ 42ನೇ ಓವರ್ ನಲ್ಲಿ ತಮ್ಮ ಶತಕದ ಪೂರೈಕೆಗೆ 3 ರನ್ ಗಳ ಹಿಂದಿದ್ದರು. ಆಗ ಪಂದ್ಯ ಗೆಲುವಿಗೆ 2 ರನ್ ಬೇಕಾಗಿತ್ತು. ಈ ವೇಳೆ ಸ್ಪಿನ್ನರ್ ನಸುಮ್ ಅಹಮದ್ ಬೌಲಿಂಗ್ ನಲ್ಲಿ ಸಿಕ್ಸರ್ ಸಿಡಿಸಿ 48ನೇ ಎಕದಿನ ಮಾದರಿಯಲ್ಲಿ ಶತಕ ಪೂರೈಸಿದ ಕೊಹ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ವಿರಾಟ್ ಕೊಹ್ಲಿ ಶತಕಕ್ಕಾಗಿ ಪಂದ್ಯದ ಅಂತಿಮ 3 ಓವರ್ ಗಳಲ್ಲಿ 8 ಡಾಟ್ ಬಾಲ್ ಆಡಿದ್ದರು.

ಅಂಪೈರ್‌ ಏಕೆ ವೈಡ್‌ ನೀಡಲಿಲ್ಲ?

ಭಾರತದ ಗೆಲುವಿಗೆ 2 ರನ್‌ಗಳ ಅಗತ್ಯವಿದ್ದಾಗ, 97 ರನ್‌ಗಳಲ್ಲಿದ್ದ ಕೊಹ್ಲಿ ಶತಕ ಸಿಡಿಸಲು ಬೌಂಡರಿ ಹುಡುಕುತ್ತಿದ್ದರು. ಆಗ ಬಾಂಗ್ಲಾ ಬೌಲರ್ ನಸುಮ್ ಅಹ್ಮದ್ ಲೆಗ್​ಸೈಡ್ ಬೌಲ್ ಮಾಡಿದರು. ಆದಾಗ್ಯೂ, ಅಂಪೈರ್ ರಿಚರ್ಡ್ ಕೆಟಲ್‌ಬರೋ ಇದನ್ನು ವೈಡ್ ನಿರ್ಣಯ ನೀಡಲಿಲ್ಲ. ಇದು ಕೂಡ ವಿವಾದಕ್ಕೆ ಕಾರಣವಾಗಿತ್ತು. ಆದರೆ ಅಂಪೈರ್‌ ನಿರ್ಧಾರಕ್ಕೆ ಪ್ರಮುಖ ಕಾರಣವಿದೆ.

ವಿರಾಟ್ ಅಂಪೈರ್
Virat umpire

ಕಳೆದ ವರ್ಷ ಮಾರ್ಚ್‌ನಲ್ಲಿ, ಎಂಸಿಸಿ ಹೊಸ ಕಾನೂನು ಸಂಹಿತೆಯನ್ನು ಘೋಷಿಸಿದೆ. ಕಾನೂನು 22.1 ಅನ್ನು ತಿದ್ದುಪಡಿ ಮಾಡಲಾಗಿದ್ದು, ಇದರಲ್ಲಿ ಬ್ಯಾಟ್ಸ್‌ಮನ್ ನಿಂತಿರುವ ಸ್ಥಳಕ್ಕೆ ಮಾತ್ರ ವೈಡ್ ಅನ್ವಯಿಸುತ್ತದೆ. ಈಗ, ನಸುಮ್-ಕೊಹ್ಲಿ ವಿಷಯಕ್ಕೆ ಬಂದರೆ, ಇಲ್ಲಿ ಕೊಹ್ಲಿ ಬೌಂಡರಿ ಬಾರಿಸಲು ಕಾದಿದ್ದರಿಂದ ಲೆಗ್ ಸ್ಟಂಪ್‌ನ ಹೊರಗೆ ಬಲಗಾಲನ್ನು ಇರಿಸಿದ್ದರು. ನಸುಮ್ ಬೌಂಡರಿ ಮತ್ತು ಸಿಕ್ಸರ್ ಹೊಡೆಯುವುದನ್ನು ತಪ್ಪಿಸಲು ಕೊಹ್ಲಿಗೆ ಬೌಲಿಂಗ್ ಮಾಡಲು ಪ್ರಯತ್ನಿಸಿದರು. ಆಗ ಚೆಂಡನ್ನು ಲೆಗ್ ಸೈಡ್‌ನಿಂದ ಹಾಕಿದಾಗ ಕೊಹ್ಲಿ ಸಾಮಾನ್ಯ ಸಂದರ್ಭಕ್ಕೆ ಮರಳಿದ್ದಾರೆ. ಹೀಗಾಗಿ ಕಾನೂನಿನ ಬದಲಾವಣೆಯಿಂದ ಅಂಪೈರ್ ಕೆಟಲ್‌ಬರೋ ಅದನ್ನು ವೈಡ್ ಅಲ್ಲ ಎಂದು ನೀಡದಿರುವ ಸಾಧ್ಯತೆಯಿದೆ.

ಹಲವು ದಾಖಲೆಗಳಿಗೆ ಭಾಜನರಾದ ಕೊಹ್ಲಿ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 78ನೇ ಶತಕ, ಏಕದಿನ ಮಾದರಿಯಲ್ಲಿ 48

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕಿರುವ ವಿರಾಟ್ 25,958 ರನ್‌ ಪೇರಿಸಿದ್ದಾರೆ.

1,248 ರನ್‌ ಗಳಿಸುವುದರೊಂದಿಗೆ ವಿಶ್ವಕಪ್‌ನಲ್ಲಿ ಹೆಚ್ಚು ರನ್‌ ಬಾರಿಸಿದ ಆಟಗಾರರಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

ಕೇರಳ ಭೇಟಿ ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ...

Download Eedina App Android / iOS

X