ಭಾರತದ ಹಸಿವು ಸೂಚ್ಯಂಕದ ವರದಿಯ ಬಗ್ಗೆ ಅಣಕ ಮಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಗ್ಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಇತ್ತೀಚಿಗೆ ಹೈದರಾಬಾದಿನಲ್ಲಿ ಎಫ್‌ಐಸಿಸಿಐ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸ್ಮೃತಿ ಇರಾನಿ, ಜಾಗತಿಕ ಸೂಚ್ಯಂಕ ವರದಿಯ ಮಾನದಂಡಗಳ ಬಗ್ಗೆ ಪ್ರಶ್ನಿಸಿದ್ದರು. ಭಾರತದ ಬಗ್ಗೆ ಜಾಗತಿಕ ಹಸಿವು ಸೂಚ್ಯಂಕ ನೀಡಿದ ವರದಿಗಳು ಉದ್ದೇಶಪೂರ್ವಕವಾಗಿ ಸುಳ್ಳಾಗಿದೆ. ಇದು ಭಾರತದ ಪ್ರಗತಿಯನ್ನು ನಿಖರವಾಗಿ ಪ್ರತಿನಿಧಿಸುವುದಿಲ್ಲ ಎಂದು ಹೇಳಿದ್ದರು.
ಸ್ಮೃತಿ ಇರಾನಿ ಮಾಡಿದ ಭಾಷಣದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. “ಡಬ್ಲ್ಯೂಎಚ್‌ಎಚ್ ಸಂಸ್ಥೆ ಹಸಿವು ಸೂಚ್ಯಂಕವನ್ನು ಹೇಗೆ ತಯಾರಿಸುತ್ತದೆ? 140 ಕೋಟಿ ಜನಸಂಖ್ಯೆಯ ದೇಶದಲ್ಲಿ 30,000 ಜನರಿಗೆ ಫೋನ್ ಕರೆ ಮೂಲಕ ‘ಹಸಿದಿದೆಯೇ’ ಎಂದು ಕೇಳಿ ಸೂಚ್ಯಂಕ ನಿರ್ಧರಿಸಲಾಗುತ್ತದೆ. ಈಗ ನನ್ನ ಬಗ್ಗೆಯೆ ನಂಬಿ, ನಾನು ದೆಹಲಿಯಲ್ಲಿರುವ ನನ್ನ ಮನೆಯಿಂದ ಬೆಳಗ್ಗೆ 4 ಗಂಟೆಗೆ ಹೊರಟಿದ್ದೇನೆ. ನಾನು ಕೊಚ್ಚಿಗೆ ಹೋಗಲು 5 ಗಂಟೆಗೆ ವಿಮಾನವನ್ನು ಹಿಡಿಯುತ್ತೇನೆ. ವಿಮಾನದಿಂದ ಊಟದ ಸಮಯಕ್ಕೆ ಬರುವಷ್ಟರಲ್ಲಿ 10 ಗಂಟೆ ಆಗಿರುತ್ತದೆ. ನೀವು ಈ ದಿನದ ಯಾವುದೇ ಸಮಯದಲ್ಲಿ ನನಗೆ ಕರೆ ಮಾಡಿ ನಿಮಗೆ ಹಸಿವಾಗಿದೆಯೇ ಎಂದು ಕೇಳಿದರೆ, ನಾನು ಹೌದು, ಎಂದು ಹೇಳುತ್ತೇನೆ” ಎಂದು ಸೂಚ್ಯಂಕದ ಬಗ್ಗೆ ತಮಾಷೆ ಮಾಡಿದ್ದರು.
ಏತನ್ಮಧ್ಯೆ, ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಥೆ, ಇರಾನಿ ಅವರ ಹೇಳಿಕೆಗಳ ಬಗ್ಗೆ ವಾಗ್ದಾಳಿ ನಡೆಸಿ, “ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಏನೆಂದು ನನಗೆ ತಿಳಿದಿಲ್ಲ. ನಿಮ್ಮ ಅಜ್ಞಾನದ ಮಟ್ಟ ಅಥವಾ ನಿಮ್ಮ ಸಂವೇದನಾಶೀಲತೆಯನ್ನು ಸಭೆಯೊಂದರಲ್ಲಿ ಪ್ರದರ್ಶಿಸುತ್ತಿದ್ದೀರಾ? ನೀವು ಭಾರತದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿರುವುದಕ್ಕೆ ನಾಚಿಕೆಯಾಗಬೇಕು. ನಿಮ್ಮ ಮಾತುಗಳನ್ನು ಕೇಳಲು ಅಸಹ್ಯವಾಗುತ್ತದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಜಾಗತಿಕ ಹಸಿವು ಸೂಚ್ಯಂಕ | ಹಸಿದವರ ದೇಶವಾದ ಭಾರತ; ಪಾಕಿಸ್ತಾನಕ್ಕಿಂತ ಕೆಳಕ್ಕೆ ಕುಸಿತ
“ಮಾನ್ಯ ಸಚಿವರೆ, ದೇಶದ ಹಸಿವು ಸೂಚ್ಯಂಕವನ್ನು ಅಪೌಷ್ಟಿಕತೆ, ಮಕ್ಕಳ ಬೆಳವಣೆಗೆ ಕುಂಠಿತ, ಶಿಶುವಿನ ಮರಣ ಪ್ರಮಾಣ ಮುಂತಾದ ಅಂಶಗಳಿಂದ ನಿರ್ಧರಿಸಲಾಗಿದೆ. ದಯವಿಟ್ಟು ಹಸಿವಿನ ಬಗ್ಗೆ ಅಪಹಾಸ್ಯ ಮಾಡಬೇಡಿ. ನೀವು ಭಾರತ ಸರ್ಕಾರದ ಪ್ರಭಾವಶಾಲಿ ಮಂತ್ರಿ. ನೀವು ಭೇಟಿ ನೀಡುವ ಸ್ಥಳಗಳಲ್ಲಿ ಸಾಕಷ್ಟು ಮತ್ತು ಹೆಚ್ಚಿನ ಆಹಾರ ಸೇವೆ ಲಭ್ಯವಿರುತ್ತವೆ” ಎಂದು ಕುಟುಕಿದ್ದಾರೆ.
Ms @smritiirani ,
I don’t know what’s more shameful – your level of ignorance or your insensitivity at display here?
Do you honestly think Global Hunger Index is calculated by calling up people and asking them if they are hungry!!???
You are the Women and Child Development… pic.twitter.com/pTnHsNDEo3
— Supriya Shrinate (@SupriyaShrinate) October 20, 2023
ಇತ್ತೀಚೆಗೆ ಬಿಡುಗಡೆಯಾದ 2023ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 125 ದೇಶಗಳಲ್ಲಿ 111 ನೇ ಸ್ಥಾನದಲ್ಲಿತ್ತು. ಇದು ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಶ್ರೀಲಂಕಾಕ್ಕಿಂತ ಕೆಳಗೆ ಕುಸಿದಿತ್ತು.
ಸೂಚ್ಯಂಕದಲ್ಲಿ ನೆರೆ ರಾಷ್ಟ್ರಗಳಾದ ಪಾಕಿಸ್ತಾನ 102ನೇ ಸ್ಥಾನ, ಬಾಂಗ್ಲಾದೇಶ 81ನೇ ಸ್ಥಾನ, ನೇಪಾಳ 69ನೇ ಸ್ಥಾನ ಮತ್ತು ಶ್ರೀಲಂಕಾ 60ನೇ ಸ್ಥಾನ ಪಡೆದಿವೆ.
This is a rich person's view of 'hunger' in our country. That it's a Minister saying this is utterly shameful.
Not to mention illogical and utterly fact-less. pic.twitter.com/4EN4t3nQbo— Cow Momma (@Cow__Momma) October 20, 2023
ಹಸಿವು ಸೂಚ್ಯಂಕದಲ್ಲಿ ಭಾರತ 28.7 ಅಂಕ ಪಡೆದಿದೆ. ಇದು ಗಂಭೀರ ಮಟ್ಟದ ಹಸಿವನ್ನು ಸೂಚಿಸುತ್ತದೆ. ಇನ್ನು ದೇಶದಲ್ಲಿ ನ್ಯೂನಪೋಷಣೆ ಪ್ರಮಾಣ ಶೇ 16.6ರಷ್ಟಿದೆ. ಐದು ವರ್ಷಕ್ಕಿಂತ ಒಳಗಿನವರ ಮರಣ ಪ್ರಮಾಣ ಶೇ 3.1 ಇದೆ. 15 ರಿಂದ 24 ವರ್ಷದ ಒಳಗಿನ ಮಹಿಳೆಯರಲ್ಲಿನ ಅನೀಮಿಯಾ ಸಮಸ್ಯೆ ಶೇ 58.1ರಷ್ಟಿದೆ ಎಂದು ವರದಿಯಲ್ಲಿ ತಿಳಿಸಿದೆ.
ಜಾಗತಿಕ ಹಸಿವು ಸೂಚ್ಯಂಕ ಅಂಕಗಳ ಲೆಕ್ಕಾಚಾರದಲ್ಲಿ ಬಳಸುವ ಸೂಚಕಗಳಲ್ಲಿ ಒಂದಾದ ಅಪೌಷ್ಟಿಕತೆಯ ಹರಡುವಿಕೆಯು ಹೆಚ್ಚುತ್ತಿದೆ. ಅಪೌಷ್ಟಿಕತೆಯ ಸಂಖ್ಯೆಯು 572 ಮಿಲಿಯನ್‌ನಿಂದ ಸುಮಾರು 735 ಮಿಲಿಯನ್‌ಗೆ ಏರಿದೆ ಎಂದು ಸೂಚ್ಯಂಕ ವರದಿ ಹೇಳಿತ್ತು