ಬೆಳಗಾವಿಯಲ್ಲಿ 2023-25ನೇ ಆರ್ಥಿಕ ವರ್ಷದಲ್ಲಿ ತೆರಿಗೆ ಹೆಚ್ಚಳ ಮಾಡುವುದಕ್ಕೆ ಸಂಬಂಧಿಸಿದಂತೆ ಬೆಳಗಾವಿ ಮಹಾನಗರ ಪಲಿಕೆಯ ಮೇಯರ್ ತಪ್ಪಾಗಿ ಸಹಿ ಹಾಕಿದ್ದ ಪತ್ರ ಕಾಣೆಯಾಗಿದೆ. ಈ ಸಂಬಂಧ ಪಾಲಿಕೆಯ ಪರಿಷತ್ ಕಾರ್ಯದರ್ಶಿ ಮತ್ತು ಮೇಯರ್ ವಿರುದ್ಧ ಪಾಲಿಕೆ ಆಯುಕ್ತ ಅಶೋಕ್ ದುಡಗುಂಟಿ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪಾಲಿಕೆಯ ಕೌನ್ಸಿಲ್ ಸಭೆಯು 2023-24ನೇ ಆರ್ಥಿಕ ವರ್ಷದಲ್ಲಿ ತೆರಿಗೆ ಹೆಚ್ಚಳ ಮಾಡಲು ನಿರ್ಧಿರಿಸಿತ್ತು. ಅದಕ್ಕೆ ಮೇಯರ್ ಅನುಮೋದನೆ ಪಡೆಯಲು ಪತ್ರ ಸಿದ್ದಪಡಿಸಿತ್ತು. ಆದರೆ, ಪತ್ರದಲ್ಲಿ 2023-24 ಬದಲಾಗಿ 24-25 ಎಂದು ನಮೂದಿಸಲಾಗಿತ್ತು. ಅದನ್ನು ಸರಿಯಾಗಿ ಪರಿಶೀಲಿಸದ ಮೇಯರ್ ಸಹಿ ಹಾಕಿದ್ದರು. ಆದರೆ, ಈಗ ಆ ಪತ್ರವೇ ಕಾಣೆಯಾಗಿವೆ.
ಪತ್ರ ಕಾಣೆಯಾಗಿರುವ ಬಗ್ಗೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಗದ್ದಲ ನಡೆದಿತ್ತು. ತನಿಖೆ ನಡೆಸಲು ಪಾಲಿಕೆ ನಿರ್ಣಯಿಸಿತ್ತು. ಬಳಿಕ, ಪತ್ರ ಕಾಣೆಯಾಗಿರುವ ಸಂಬಂಧ ತನಿಖೆ ನಡೆಸುವಂತೆ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಪಾಲಿಕೆ ಆಯುಕ್ತರು ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
“ಪಾಲಿಕೆ ಮೇಯರ್ ಶೋಭಾ ಸೋಮನಾಚೆ ವಿರುದ್ಧ ದೂರು ದಾಖಲಿಸಿದ್ದೇವೆ. ಬಿಜೆಪಿಗರು ಕಡತವನ್ನು ಆಯಕ್ತರೇ ಸರ್ಕಾರಕ್ಕೆ ಸಲ್ಲಿಸುತ್ತಾರೆ. ಅವರನ್ನೇ ಏನೋ ಕೈವಾಡವಿದೆ ಎನ್ನುತ್ತಿದ್ದಾರೆ. ಮೇಯರ್ ಸಹಿ ಮಾಡಿದ ನಂತರವೇ ಆಯುಕ್ತರು ಸರ್ಕಾರಕ್ಕೆ ವರದಿ ಸಲ್ಲಿಸುವುದು. ಹೀಗಾಗಿ, ಕಡತವನ್ನು ಯಾರೋ ಬಚ್ಚಿಟ್ಟಿದ್ದಾರೆ. ಕಡತ ಸಿಕ್ಕ ಬಳಿಕ ಸತ್ಯಾಂಶ ಹೊರಬರುತ್ತದೆ” ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
“ಪಾಲಿಕೆಯಲ್ಲಿ ಮೇಯರ್ ಅವರೇ ಸುಪ್ರೀಂ ಆಗಿರುತ್ತಾರೆ. ಅವರು ಪತ್ರದಲ್ಲಿದ್ದ ತಪ್ಪನ್ನು ಸರಿ ಮಾಡುವುದು ಬಿಟ್ಟು, ಕಡತವನ್ನು ಕಾಣೆಯಾಗಿಸಿ ತಪ್ಪೆಸದ್ದಾರೆ. ಪೊಲೀಸರು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡೋಣ” ಎಂದು ಜಾರಕಿಹೊಳಿ ಹೇಳಿದ್ದಾರೆ.