ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಇಂದು ನಡೆದ ವಿಶ್ವಕಪ್ ಕ್ರಿಕೆಟ್ ಕೂಟದ 21ನೇ ಪಂದ್ಯದಲ್ಲಿ ಟೀಮ್ ಇಂಡಿಯಾಕ್ಕೆ ಗೆಲ್ಲಲು ನ್ಯೂಝಿಲ್ಯಾಂಡ್ 274 ರನ್ಗಳ ಗುರಿ ನೀಡಿದೆ.
ಟಾಸ್ ಗೆದ್ದಿದ್ದ ಟೀಮ್ ಇಂಡಿಯಾ ಮೊದಲು ಬೌಲಿಂಗ್ ನಡೆಸುವ ತೀರ್ಮಾನ ಕೈಗೊಂಡಿತ್ತು. ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಕೀವೀಸ್ ಬ್ಯಾಟರ್ಗಳು ಆರಂಭದಲ್ಲೇ ಆಘಾತಕ್ಕೊಳಗಾಗಿದ್ದರು. 19 ರನ್ ಗಳಿಸುವ ವೇಳೆಗೆ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿತ್ತು.
Innings Break!
5⃣ wickets for Mohd. Shami
2⃣ wickets for Kuldeep Yadav
1⃣ wicket each for Mohd. Siraj & Jasprit BumrahTarget 🎯 for #TeamIndia – 274
Scorecard ▶️ https://t.co/Ua4oDBM9rn #CWC23 | #MenInBlue | #INDvNZ pic.twitter.com/EBVAEgTVbV
— BCCI (@BCCI) October 22, 2023
ಆ ಬಳಿಕ ಮೂರನೇ ವಿಕೆಟ್ಗೆ ಜೊತೆಯಾಟ ನಡೆಸಿದ ಯುವ ಬ್ಯಾಟರ್ ರಚಿನ್ ರವೀಂದ್ರ ಹಾಗೂ ಮಿಚೆಲ್ ಜೋಡಿ ತಾಳ್ಮೆಯ ಆಟವಾಡಿ 159 ಎಸೆತಗಳಲ್ಲಿ 159 ರನ್ಗಳ ಜೊತೆಯಾಟ ನಡೆಸಿದರು. 33.3 ಓವರ್ನಲ್ಲಿ ಮೊಹಮ್ಮದ್ ಶಮಿಯ ಬೌಲಿಂಗ್ನಲ್ಲಿ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ ಬೌಂಡರಿ ಗೆರೆಯ ಸಮೀಪ ಫೀಲ್ಡಿಂಗ್ನಲ್ಲಿದ್ದ ಶುಭಮನ್ ಗಿಲ್ಗೆ ಕ್ಯಾಚಿತ್ತು ರಚಿನ್ ರವೀಂದ್ರ ನಿರ್ಗಮಿಸಿದರು. 87 ಎಸೆತಗಳನ್ನು ಎದುರಿಸಿದ್ದ ರಚಿನ್ ರವೀಂದ್ರ, 1 ಸಿಕ್ಸ್ ಹಾಗೂ ಆರು ಬೌಂಡರಿಯ ನೆರವಿನಿಂದ 75 ರನ್ ದಾಖಲಿಸಿದರು.
ಆ ಬಳಿಕ ಬಂದ ಬ್ಯಾಟರ್ಗಳನ್ನು ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಬಿಡದ ಟೀಮ್ ಇಂಡಿಯಾ ಬೌಲರ್ಗಳು, ನಿಗದಿತ 50 ಓವರ್ ಮುಗಿಯುವಷ್ಟರಲ್ಲಿ ನ್ಯೂಝಿಲ್ಯಾಂಡ್ ಅನ್ನು 273 ರನ್ಗಳಿಗೆ ಆಲೌಟ್ ಮಾಡಿದರು.
ODI 💯 #5 for @dazmitchell47! His fourth this year and first overall against India. Brings it up in 100 balls. Follow play LIVE in NZ with @skysportnz. LIVE scoring | https://t.co/YL5NT9eSnP #CWC23 pic.twitter.com/79fve1EFLR
— BLACKCAPS (@BLACKCAPS) October 22, 2023
ನ್ಯೂಝಿಲ್ಯಾಂಡ್ ಪರವಾಗಿ ಉತ್ತಮ ಬ್ಯಾಟಿಂಗ್ ನಡೆಸಿದ ಡೇರಿಲ್ ಮಿಚೆಲ್ ಶತಕ ಗಳಿಸಿ ಮಿಂಚಿದರು. 127 ಎಸೆತಗಳಲ್ಲಿ 130 ರನ್(9 ಬೌಂಡರಿ, 5 ಸಿಕ್ಸ್) ಗಳಿಸಿ, ಶಮಿ ಬೌಲಿಂಗ್ನಲ್ಲಿ ಕೊಹ್ಲಿಗೆ ಕ್ಯಾಚಿತ್ತು ನಿರ್ಗಮಿಸಿದರು. ಈ ಶತಕದ ಮೂಲಕ ಮಿಚೆಲ್ ವಿಶ್ವಕಪ್ನಲ್ಲಿ ಮೊದಲ ಶತಕ ಬಾರಿಸಿದರು. ಇದು ಸುಮಾರು 4 ದಶಕಗಳ ಬಳಿಕ ಭಾರತ ವಿರುದ್ಧ ವಿಶ್ವಕಪ್ನಲ್ಲಿ ನ್ಯೂಝಿಲ್ಯಾಂಡ್ ಬ್ಯಾಟರ್ನ ಮೊದಲ ಶತಕವಾಗಿದೆ.
ಮೊದಲ ವಿಶ್ವಕಪ್ ಪಂದ್ಯದಲ್ಲೆ ಮಿಂಚಿದ ಶಮಿ
ನಾಲ್ಕು ಪಂದ್ಯಗಳಲ್ಲಿ ಹೊರಗೆ ಉಳಿದಿದ್ದ ಶಮಿ, ಸಿಕ್ಕ ಅವಕಾಶವನ್ನು ಸದುಪಯೋಗ ಪಡೆದುಕೊಂಡರು. ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಪರವಾಗಿ ಆಡಿದ ಮೊದಲ ಪಂದ್ಯದಲ್ಲೇ ಐದು ವಿಕೆಟ್ಗಳನ್ನು ಕಬಳಿಸುವ ಮೂಲಕ ವೇಗಿ ಮೊಹಮ್ಮದ್ ಶಮಿ ಮಿಂಚಿದ್ದಾರೆ. ಏಕದಿನ ವಿಶ್ವಕಪ್ ಸರಣಿಯಲ್ಲಿ ಆಡಿದ ಮೊದಲ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಮೊದಲ ಎಸೆತದಲ್ಲಿ ಕಿವೀಸ್ ಆರಂಭಿಕ ಆಟಗಾರ ವಿಲ್ ಯಂಗ್ ಅವರ ವಿಕೆಟ್ ಅನ್ನು ಪಡೆದರು. ತನ್ನ ಪಾಲಿನ 10 ಓವರ್ಗಳನ್ನು ಎಸೆದ ಮೊಹಮ್ಮದ್ ಶಮಿ, 54 ರನ್ ನೀಡಿ 5 ವಿಕೆಟ್ಗಳನ್ನು ಕಬಳಿಸಿದರು.
Mohammed Shami, the first 🇮🇳 bowler with two men’s ODI World Cup five-fors ⚡️https://t.co/wm8y4HuhSE #INDvNZ #CWC23 pic.twitter.com/OG010nc0SY
— ESPNcricinfo (@ESPNcricinfo) October 22, 2023
ಅಲ್ಲದೇ, ಏಕದಿನ ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ಗಳ ಸಾಲಿನಲ್ಲಿ ಅನಿಲ್ ಕುಂಬ್ಳೆ ಅವರನ್ನು ಹಿಂದಿಕ್ಕಿ ಮೊಹಮ್ಮದ್ ಶಮಿ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅನಿಲ್ ಕುಂಬ್ಳೆ 31 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದರು.
ಇನ್ನು ಉಳಿದಂತೆ ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಬೌಲಿಂಗ್ನಲ್ಲಿ ಕುಲದೀಪ್ ಯಾದವ್ 10 ಓವರ್ಗಳಲ್ಲಿ 73 ರನ್ ನೀಡಿ 2 ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ 10 ಓವರ್ಗಳಲ್ಲಿ 45 ರನ್ ನೀಡಿ 1 ವಿಕೆಟ್ ಮತ್ತು ಮೊಹಮ್ಮದ್ ಸಿರಾಜ್ 10 ಓವರ್ಗಳಲ್ಲಿ 45 ರನ್ ನೀಡಿ 1 ವಿಕೆಟ್ ಕಬಳಿಸಿದರು.