ರಾಯಚೂರು | ‘ಮನ್ ಕಿ ಬಾತ್ ನಿಲ್ಲಿಸಿ, ಜನರ ಮಾತು ಕೇಳಿ’; ರೇಡಿಯೋ ಒಡೆದು ಪ್ರಧಾನಿ ವಿರುದ್ಧ ಆಕ್ರೋಶ

Date:

Advertisements

ಕಳೆದ ಹತ್ತು ವರ್ಷದಿಂದ ಮೋದಿಯ ಮನ್ ಕೀ ಬಾತ್ ಕೇಳಿ ಮನೆ ಹಾಳಾಯ್ತು, ದೇಶ ಹಾಳಾಯ್ತು. ಮೋದಿ ಬೇಡ ಮೋದಿ ಸುಳ್ಳುಗಳು ಬೇಡ ಎಂಬ ಧ್ಯೇಯ ವಾಕ್ಯದಡಿ, ‘ಮನ್ ಕಿ ಬಾತ್’ ರೇಡಿಯೋ ಪ್ರಸಾರ ವಿರೋಧಿಸಿ ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷ ರಾಯಚೂರು ಜಿಲ್ಲಾ ಘಟಕದಿಂದ ಕೇಂದ್ರ ಸರ್ಕಾರ ಬಹಿಷ್ಕಾರ ಚಳವಳಿ ನಡೆಯಿತು.

ರಾಯಚೂರು ನಗರದ ಡಾ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಪಕ್ಷದ ಪದಾಧಿಕಾರಿಗಳು ರೇಡಿಯೋ ಒಡೆಯುವ ಮೂಲಕ, ಪ್ರಧಾನಿ ಮೋದಿ ಹಾಗೂ‌ ಕೇಂದ್ರ ಸರ್ಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.

“ಕೇಂದ್ರದ ಮೋದಿ ಸರ್ಕಾರ ಕಳೆದ 9 ವರ್ಷಗಳಿಂದ ಮನ್ ಕಿ ಬಾತ್ ಹೇಳುತ್ತಿದೆ. ಜನರ ಮಾತು ಕೇಳುತ್ತಿಲ್ಲ. 2 ಕೋಟಿ ಉದ್ಯೋಗ ಸೃಷ್ಟಿ, ಬಡತನ ನಿರ್ಮೂಲನೆ ಮಾಡದೇ ದಿನಬಳಕೆಯ ವಸ್ತುಗಳ ಬೆಲೆ ಕಡಿಮೆ ಮಾಡದೆ ಜನ ವಿರೋಧಿ‌ ನೀತಿ ಅನುಸರಿಸುತ್ತಿದೆ. ದೇಶದ ನಾಗರಿಕರ ಸಮಸ್ಯೆ ಆಲಿಸದೆ ಅಂತಾರಾಷ್ಟ್ರೀಯ ಮಟ್ಟದ ವಿಷಯದ ಬಗ್ಗೆ ಕಣ್ಣೀರು ಸುರಿಸುತ್ತಿದೆ. ದೇಶದ ನಾಗರಿಕರ ಜೀವಕ್ಕಿಂತ  ಪ್ರಧಾನಿ ಮೋದಿಗೆ ಪರದೇಶದ ಚಿಂತೆ ಹೆಚ್ಚಾಗಿದೆ” ಎಂದು ಪ್ರತಿಭಟನಾಕಾರರು ದೂರಿದರು.

Advertisements

ಪ್ರತಿಭಟನಾನಿರತ ಸಿಪಿಐಎಲ್‌ರೆಡ್ ಸ್ಟಾರ್ ರಾಜ್ಯ ಸಮಿತಿಯ ಸದಸ್ಯ ಜಿ ಅಮರೇಶ್ ಮಾತನಾಡಿ, “ಪ್ರಧಾನಿ ಮೋದಿ ಕೇಂದ್ರ‌ ಸರ್ಕಾರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ದೇಶದ ಜನರ ಬದುಕು ದುಸ್ತರವಾಗಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡದೇ ಕೇವಲ ಮನ್ ಕಿ‌ ಬಾತ್ ಹೇಳುತ್ತಿದೆ. ನಮಗೆ ಮನ್ ಕಿ‌ ಬಾತ್ ಬೇಕಾಗಿಲ್ಲ. ಕಾಮ್ ಕಿ ಬಾತ್( ಕೆಲಸದ ಮಾತು) ಬೇಕು. ಯುವಕರಿಗೆ ಉದ್ಯೋಗ ಬೇಕು” ಎಂದು ಆಗ್ರಹಿಸಿದರು.

“15 ಲಕ್ಷ ಹಾಕುತ್ತೇನೆಂದು ಹೇಳಿ ಒಂದು‌ ನಯಾ ಪೈಸಾನೂ ಹಾಕಿಲ್ಲ. ಕೇವಲ‌ ಸುಳ್ಳಿನ ಭರವಸೆ ನೀಡುತ್ತಿದ್ದು, ಆರ್ ಎಸ್ ಎಸ್ ಅಣತಿಯಂತೆ ಮೋದಿ ಸರ್ಕಾರ ನಡೆಯುತ್ತಿದೆ. ದೇಶದ ಅಲ್ಪಸಂಖ್ಯಾತರ, ದಲಿತರ ರಕ್ಷಣೆ ಮಾಡುತ್ತಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಸರ್ಕಾರವನ್ನು ಸೋಲಿಸಲು ಪ್ರಗತಿಪರ ಸಂಘಟನೆಗಳು, ಜಾತ್ಯಾತೀತ, ಅಲ್ಪಸಂಖ್ಯಾತರ, ದಲಿತರ ಧ್ಯೇಯ ಹೊಂದಿರುವ ಎಲ್ಲ ರಾಜಕೀಯ ಪಕ್ಷಗಳೂ ಒಂದಾಗಬೇಕು” ಎಂದು ಮಾನವಿ ಮಾಡಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ಕೆರೆಯಲ್ಲಿ ನವ ವಿವಾಹಿತೆ ಶವವಾಗಿ ಪತ್ತೆ; ಕೊಲೆ ಆರೋಪ

ಪ್ರತಿಭಟನೆಯಲ್ಲಿ ಪಕ್ಷದ ತಾಲೂಕು ಕಾರ್ಯದರ್ಶಿ ಆರ್ ಹುಚ್ಚ ರೆಡ್ಡಿ, ಪಕ್ಷದ‌ ಪದಾಧಿಕಾರಿಗಳಾದ ಅಝೀಝ್ ಜಾಗೀರದಾರ್, ಮಲ್ಲಯ್ಯ ಕಟ್ಟಿಮನಿ,‌ ಆದೇಶ‌ ನಗನೂರು, ಜಿ ಅಡವಿರಾವ್, ವೆಂಕಟೇಶ ಚಿಲ್ಕರಾಗಿ, ನಿರಂಜನ ಕುಮಾರ, ನಿಸರ್ಗ, ಹನೀಫ್ ಅಬಕಾರಿ, ಲಕ್ಷ್ಮಣ, ನಾರಾಯಣ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

ಮಂಗಳೂರು | ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ಕ್ಕಾಗಿ ಜಗಳ: ಮಹಿಳೆಯ ವಿಡಿಯೋ ಮಾಡಿ ತೇಜೋವಧೆಗೆ ಯತ್ನ!

ನ್ಯಾಯಬೆಲೆ ಅಂಗಡಿಯಲ್ಲಿ 'ಗೋಣಿಚೀಲ' ನೀಡುವಂತೆ ಪಟ್ಟು ಹಿಡಿದದ್ದಲ್ಲದೇ, ಗ್ರಾಹಕನೋರ್ವ ನ್ಯಾಯಬೆಲೆ ಅಂಗಡಿಯವರ...

ಮೈಸೂರು | ಜಿ ಟಿ ದೇವೇಗೌಡರ ದಲಿತ ವಿರೋಧಿ ಹೇಳಿಕೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿಗಳು...

Download Eedina App Android / iOS

X