ರಾಮನಗರ ಜಿಲ್ಲೆ ಹಾರೋಹಳ್ಳಿ ಪಟ್ಟಣದ ಜನತೆಗೆ ಕಾವೇರಿ ನೀರು ಪೂರೈಸುವ ₹6.25 ಕೋಟಿ ವೆಚ್ಚದ ಕಾಮಗಾರಿ ಮೂರ್ನಾಲ್ಕು ವರ್ಷದಿಂದ ಕುಂಟುತ್ತಾ ಸಾಗಿದೆ.
ಸರ್ಕಾರ 2019ರಲ್ಲಿ ಹಾರೋಹಳ್ಳಿ ಪಟ್ಟಣಕ್ಕೆ ಕಾವೇರಿ ನೀರು ಪೂರೈಸುವ ಕಾಮಗಾರಿಗೆ ಹಸಿರು ನಿಶಾನೆ ತೋರಿಸಿತ್ತು.ಬೆಂಗಳೂರಿಗೆ ಕಾವೇರಿ ನೀರಿನ ಸಂಪರ್ಕ ಹಾರೋಹಳ್ಳಿಯಿಂದಲೇ ಹಾದು ಹೋಗಿದ್ದರೂ ಹಾರೋಹಳ್ಳಿಯ ನಿವಾಸಿಗಳಿಗೆ ಈ ನೀರು ಲಭ್ಯವಾಗುತ್ತಿಲ್ಲ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಸೇನೆಯಲ್ಲಿ ಉದ್ಯೋಗ ಕೊಡಿಸುತ್ತೇನೆಂದು 150 ಜನರಿಗೆ ವಂಚನೆ; ಆರೋಪಿ ಬಂಧನ
ಕಾವೇರಿ ನೀರು ಕಾಮಗಾರಿಗಾಗಿ ಅಲ್ಲಲ್ಲಿ ರಸ್ತೆಗಳನ್ನು ಅಗೆದಿದ್ದು, ಇಂದಿಗೂ ಅವುಗಳನ್ನು ಮುಚ್ಚಿಲ್ಲ. ಇದರಿಂದ ಪಟ್ಟಣದ ರಸ್ತೆಗಳು ಅಲ್ಲಲ್ಲಿ ಗುಂಡಿ ಬಿದ್ದಿವೆ. ಹಾರೋಹಳ್ಳಿ ಗ್ರಾಮ ಪಂಚಾಯಿತಿಯ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕಾವೇರಿ ನೀರು ಸಂಪರ್ಕಕ್ಕಾಗಿ ಧ್ವಂಸ ಮಾಡಿದ್ದಾರೆ. ಪಟ್ಟಣದ ನಿವಾಸಿಗಳ ದಾಹ ನೀಗಿಸುತ್ತಿದ್ದ ಹಾರೋಹಳ್ಳಿ ದೊಡ್ಡ ಕೆರೆ ಈಗಾಗಲೇ ಕಲುಷಿತಗೊಂಡಿದ್ದು, ಬಳಕೆಗೆ ಬಾರದಂತಾಗಿದೆ.