ರಾಜ್ಯ ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹80 ಲಕ್ಷ ಮೌಲ್ಯದ ಒಂದು ಕೆಜಿ ತೂಕದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಅ.24 ರಂದು ಬೆಂಗಳೂರಿನ ಅಬುಧಾಬಿಯಿಂದ ಬೆಂಗಳೂರಿಗೆ EY 238 ವಿಮಾನ ಆಗಮಿಸಿದೆ. ವಿಮಾನ ಬಂದ ವೇಳೆ ಏರ್ ಕಸ್ಟಮ್ಸ್ ಅಧಿಕಾರಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ, ವಿಮಾನ ನಿಲ್ದಾಣದ ವಾಶ್ ರೂಂನಲ್ಲಿ ಕಪ್ಪು ಪೌಚ್‌ನಲ್ಲಿ ಸುತ್ತಿದ ಚಿನ್ನದ ಪೇಸ್ಟ್ ಬಚ್ಚಿಟ್ಟಿರುವುದು ಪತ್ತೆಯಾಗಿದೆ.
ಒಟ್ಟು 1331.66 ಗ್ರಾಂ ತೂಕದ ₹80,21,920 ಮೌಲ್ಯದ ಚಿನ್ನವನ್ನು ಕಸ್ಟ್‌ಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹೆಣ್ಣು ಭ್ರೂಣ ಲಿಂಗ ಪತ್ತೆ; ನಾಲ್ವರ ಬಂಧನ
ಅ.22 ರಂದು ಕೌಲಾಲಂಪುರ್, ದುಬೈ ಮತ್ತು ಕೊಲಂಬೊದಿಂದ ಆಗಮಿಸಿದ 4 ಜನರನ್ನು ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ತಡೆಹಿಡಿದು ಅವರಿಂದ ಸುಮಾರು ₹1.76 ಕೋಟಿ ಬೆಲೆಬಾಳುವ 3ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಜತೆಗೆ ಇಬ್ಬರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.