ಪಾ ರಂಜಿತ್ ನಿರ್ದೇಶನದ ವಿಕ್ರಮ್ ನಟನೆಯ ‘ತಂಗಲಾನ್’ 2024ರ ಜನವರಿಯಲ್ಲಿ ತೆರೆಗೆ

Date:

Advertisements

ಸ್ವಾತಂತ್ರ್ಯ ಪೂರ್ವದಲ್ಲಿ ಕೋಲಾರದ ಚಿನ್ನದ ಗಣಿಯಲ್ಲಿ ತಮಿಳುನಾಡು ಮೂಲದ ಜನರು ಕೆಲಸ ಮಾಡುತ್ತಿದ್ದಾಗ ಏನಾಗಿತ್ತು ಎಂಬುದನ್ನು ವಿವರಿಸಲಿರುವ, ಪಾ ರಂಜಿತ್ ಅವರ ಬಹು ನಿರೀಕ್ಷಿತ ‘ತಂಗಲಾನ್’ ಸಿನಿಮಾ 2024ರ ಜನವರಿಯಲ್ಲಿ ತೆರೆಗೆ ಬರಲು ಸಿದ್ಧತೆ ನಡೆಸಿದೆ.

ಕರ್ನಾಟಕದ ಕೋಲಾರದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಮೂಡಿಬರುತ್ತಿದೆ. ತಮಿಳು ನಟ ಚಿಯಾನ್ ವಿಕ್ರಮ್​ ಅವರು ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಬರೀ ತುಂಡು ಕಚ್ಚೆಯಲ್ಲಿ ವಿಕ್ರಮ್ ಇಡೀ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

‘ಸ್ಟುಡಿಯೋ ಗ್ರೀನ್​’ ಸಂಸ್ಥೆಯ ಮೂಲಕ ಕೆ.ಇ. ಜ್ಞಾನವೇಲ್​ ರಾಜಾ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣ ಆಗಿದ್ದು, ಬಜೆಟ್ ನೂರು ಕೋಟಿ ದಾಟಿದೆ ಎಂದು ಹೇಳಲಾಗುತ್ತಿದೆ. ಸಿನಿಮಾವು ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗುವ ಮೂಲಕ, ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿ ಬರಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಈಗಾಗಲೇ ಬಿಡುಗಡೆಗೊಂಡಿರುವ ಸಿನಿಮಾದ ಪೋಸ್ಟರ್‌ನಲ್ಲಿ ಈ ಎಲ್ಲ ಭಾಷೆಗಳಲ್ಲಿ ‘ತಂಗಲಾನ್’ ಹೆಸರನ್ನು ಹಾಕಲಾಗಿದೆ.

Advertisements

WhatsApp Image 2023 10 26 at 3.40.04 PM

 

ಚಿಯಾನ್ ವಿಕ್ರಮ್ ಹಾಗೂ ನಿರ್ದೇಶಕ ಪಾ ರಂಜಿತ್

ಈಗಾಗಲೇ ಚಿತ್ರದ ಶೂಟಿಂಗ್ ಮುಗಿಸಲಾಗಿದ್ದು, ಚಿತ್ರವು ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ.

ಹೆಸರಾಂತ ವಿದೇಶಿ ಹಂಚಿಕೆದಾರರು ಸದ್ಯದಲ್ಲೇ ಈ ಸಿನಿಮಾಕ್ಕೆ ಅಧಿಕೃತವಾಗಿ ಸೇರ್ಪಡೆ ಆಗಲಿದ್ದಾರೆ. ಚಿತ್ರವನ್ನು ಹಾಲಿವುಡ್ ಗುಣಮಟ್ಟಕ್ಕೆ ಹೊಂದಿಕೆಯಾಗುವಂತೆ ತಯಾರಿಸುತ್ತಿದ್ದೇವೆ ಎಂದು ಚಿತ್ರದ ನಿರ್ಮಾಪಕ ಜಿ.ಧನಂಜೇಯನ್ ಅವರು ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

Thangaalan02

ಸಹ-ನಿರ್ಮಾಪಕ ಜ್ಞಾನವೇಲ್ ರಾಜ ಪ್ರಸ್ತುತ ಮುಂಬೈನಲ್ಲಿದ್ದಾರೆ. ಚಿತ್ರವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೂ ಕೊಂಡೊಯ್ಯುವ ವಿಚಾರದಲ್ಲಿ ಹೆಸರಾಂತ ಬ್ಯಾನರ್‌ನೊಂದಿಗೆ ಸಹಕರಿಸಲು ಮಾತುಕತೆ ನಡೆಸುತ್ತಿದ್ದಾರೆ. ತಂಗಳಾನ್‌ನ ಕೆಲವು ದೃಶ್ಯಗಳು ಹೊಸ ದಾಖಲೆಗಳನ್ನು ಬರೆಯಲಿದೆ ಮತ್ತು ಪ್ರೇಕ್ಷಕರನ್ನು ದಿಗ್ಭ್ರಮೆಗೊಳಿಸುತ್ತವೆ ಎಂದು ನಿರ್ಮಾಪಕ ಜಿ.ಧನಂಜೇಯನ್ ಗಲಟ್ಟಾ ಡಾಟ್ ಕಾಮ್‌(Galatta.com)ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

ಮುಂದಿನ ವಾರದಲ್ಲಿ ಬಹಳ ಅದ್ಧೂರಿಯಾಗಿ ಟೀಸರ್ ಬಿಡುಗಡೆ ಮಾಡಲು ಚಿತ್ರ ತಂಡ ತಯಾರಿ ನಡೆಸುತ್ತಿದ್ದು, ಟೀಸರ್ ಬಿಡುಗಡೆಯ ವೇಳೆಯಲ್ಲಿ ಅಧಿಕೃತವಾಗಿ ಸಿನಿಮಾದ ಬಗ್ಗೆ ಜನರಲ್ಲಿ ಮೂಡಿರುವ ಎಲ್ಲ ಕುತೂಹಲಗಳಿಗೆ ತೆರೆ ಎಳೆಯಲಿದೆ ಎಂದು ವರದಿಯಾಗಿದೆ.

ಈ ನಡುವೆ ಚಿತ್ರದ ಪ್ರಮುಖ ಪಾತ್ರಧಾರಿ, ನಟ ಚಿಯಾನ್ ವಿಕ್ರಮ್​ ಅವರು ‘ಅಪ್‌ಡೇಟ್ ಅಲರ್ಟ್‌’ ಎಂದು ಅ.24ರಂದು ಟ್ವೀಟ್ ಮಾಡಿದ್ದು, ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದ್ದಾರೆ.

ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿದ್ದ ಚಿತ್ರ ತಂಡ
ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿಯಾನ್ ವಿಕ್ರಮ್ ಹುಟ್ಟಿದ ದಿನ ‘ತಂಗಲಾನ್’ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಲಾಗಿತ್ತು. ಈ ಮೇಕಿಂಗ್ ವಿಡಿಯೋದಲ್ಲಿ ವಿಕ್ರಮ್ ಹೇಗೆ ‘ಚೇಂಜ್ ಓವರ್’ ಆಗಿದ್ದರು, ಆ ಲುಕ್‌ಗಾಗಿ ಏನೆಲ್ಲಾ ಕಸರತ್ತು ಮಾಡಿದ್ದರು, ತನ್ನ ಪಾತ್ರಕ್ಕಾಗಿ ಹೇಗೆ ಸಿದ್ದರಾಗಿದ್ದರು ಎನ್ನುವುದನ್ನು ತೋರಿಸಲಾಗಿತ್ತು.

ಕೋಲಾರದ ಕೆಜಿಎಫ್ ಗಣಿ ಸೇರಿದಂತೆ ಕಾಡು, ಬೆಟ್ಟ ಗುಡ್ಡಗಳ ನಡುವೆ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ಆಕ್ಷನ್ ದೃಶ್ಯಗಳ ಚಿತ್ರೀಕರಣದ ಝಲಕ್ ಕೂಡ ತೋರಿಸಲಾಗಿತ್ತು. ಈ ವಿಡಿಯೋದಲ್ಲಿ ವಿಕ್ರಮ್ ಲುಕ್ ನೋಡಿದವರು ಅಚ್ಚರಿ ವ್ಯಕ್ತಪಡಿಸಿದ್ದರು.

ಸ್ಯಾಂಡಲ್‌ವುಡ್ ನಟ ಯಶ್ ನಟನೆಯ ಕೆ ಜಿ ಎಫ್ ಸಿನಿಮಾದ ಮೂಲಕ ನಿರ್ದೇಶಕ ಪ್ರಶಾಂತ್ ನೀಲ್, ಕಾಲ್ಪನಿಕ ಕಥೆ ಕಟ್ಟಿಕೊಟ್ಟಿದ್ದರು. ಆದರೆ ನಿರ್ದೇಶಕ ಪಾ. ರಂಜಿತ್ ಅವರು, ಅಲ್ಲಿ ನಡೆದ ನಿಜವಾದ ಘಟನೆಗಳನ್ನು ಆಧರಿಸಿ, ಆ ಬಗ್ಗೆ ಸಂಶೋಧನೆ ನಡೆಸಿ ಸಿನಿಮಾ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದರು.

ನೂರು ವರ್ಷಗಳ ಹಿಂದೆ ಅಲ್ಲಿನ ಗಣಿ ಕಾರ್ಮಿಕರ ಪರಿಸ್ಥಿತಿ ಹೇಗಿತ್ತು, ಆ ಪ್ರದೇಶದ ಸ್ಥಳೀಯ ಜನರು ಮತ್ತು ವಿದೇಶಿ ಶಕ್ತಿಗಳ ನಡುವಿನ ಭೂಮಿಯ ಮೇಲಿನ ಹೋರಾಟದ ಯಾವ ರೀತಿ ಇತ್ತು ಎನ್ನುವುದರ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ ಎಂದು ತಿಳಿದುಬಂದಿದೆ.

ಎ. ಕಿಶೋರ್ ಸಿನಿಮಾಟೋಗ್ರಫಿ, ಜಿ.ವಿ ಪ್ರಕಾಶ್ ಕುಮಾರ್ ಸಂಗೀತ ‘ತಂಗಲಾನ್’ ಚಿತ್ರಕ್ಕಿದೆ. ಚಿತ್ರದಲ್ಲಿ ಪಾರ್ವತಿ ತಿರುವೋತ್ತು, ಮಾಳವಿಕಾ ಮೋಹನನ್, ಪಶುಪತಿ, ಹರಿಕೃಷ್ಣನ್ ಅನ್ಬುದುರೈ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ, ಇಂಗ್ಲಿಷ್ ನಟ ಡೇನಿಯಲ್ ಕ್ಯಾಲ್ಟಗಿರೋನ್ ಚಿತ್ರಕ್ಕಾಗಿ ನಟಿಸಿದ್ದಾರೆ ಎಂದು ಖುದ್ದು ಚಿಯಾನ್ ವಿಕ್ರಮ್ ಮಾಹಿತಿ ಹಂಚಿಕೊಂಡಿದ್ದರು. ಈ ಸುದ್ದಿ ಅಭಿಮಾನಿಗಳಲ್ಲಿ ಮತ್ತಷ್ಟು ಉತ್ಸಾಹವನ್ನು ಹೆಚ್ಚಿಸಿತ್ತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

Download Eedina App Android / iOS

X