ಭಾರತ ದೇಶದಲ್ಲಿ 66% ಯುವಕರಿದ್ದಾರೆ. ಯುವಜನರು ಮೇಲುಕೀಳೆಂಬ ಭಾವನೆಯನ್ನು ಬಿಟ್ಟು, ಅಂಬೇಡ್ಕರರ ವಿಚಾರವನ್ನು ಅನುಸರಿಸಬೇಕು. ಸಮಸಮಾಜ ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಉಪನ್ಯಾಸಕ ರಾಹುಲ್ ಪಂಚಶೀಲ ಹೇಳಿದ್ದಾರೆ.
ಕಲಬುರಗಿಯ ಜೇವರ್ಗಿಯಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. “ಯುವಜನರು ಶಿಕ್ಷಣವಂತರಾಗಬೇಕು. ‘ಶಿಕ್ಷಣ ಎಂಬುದುಹುಲಿಯ ಹಾಲು ಇದ್ದಂತೆ, ಕುಡಿದವರು ಘರ್ಜಿಸಬೇಕು’ ಎಂದು ಅಂಬೇಡ್ಕರ್ ಹೇಳಿದ್ದಾರೆ. ಯುವಜನರು ಶಿಕ್ಷಣವಂತರಾದರೆ ಮಾತ್ರ ನಮಗೆ ಅನ್ಯಾಯದ ವಿರುದ್ಧ ಪ್ರಶ್ನಿಸುವ, ಪ್ರತಿಭಟಿಸುವ ಧೈರ್ಯ ಬರುತ್ತದೆ. ಅಂಬೇಡ್ಕರ್ ವಿಚಾರಧಾರೆಗಳನ್ನು ನನಸು ಮಾಡುವ ನಿಟ್ಟಿನಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು” ಎಂದು ಯುವಜನರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ ಕೆ.ಎಂ.ಸಂದೇಶ, ಬುದ್ದೇಶ್ ಶಿಂಗೆ, ಮಾಂತೇಶ್ ಬಾವಿಕಟ್ಟಿ, ಸಿದ್ದು ಶಹಾಪುರ, ಅಬ್ದುಲ್ ಗನ್ನಿ, ವಿಶ್ವರಾಧ್ಯ ಗೋಪಾಲ್ಕರ್, ಅರ್ಜುನ್, ರಾಜು ಆಂದೋಲ, ಬಸವರಾಜ್ ಇಂಗಳಗಿ, ಸತೀಶ್ ಹರವಾಳ, ಮರೆಪ್ಪ ಕೊಳಕೂರ, ಮೌನೇಶ್ ಗೂಲ್ಲಾ, ದೇವು ಬಡಿಗೇರ್ ಸೇರಿದಂತೆ ಹಲವರು ಇದ್ದರು.