ಕೇರಳ | ಪತ್ರಕರ್ತೆಯೊಂದಿಗೆ ಅನುಚಿತ ವರ್ತನೆ; ಕ್ಷಮೆ ಯಾಚಿಸಿದ ನಟ, ಬಿಜೆಪಿ ಮುಖಂಡ ಸುರೇಶ್‌ ಗೋಪಿ

Date:

Advertisements

ಕೇರಳದ ಬಿಜೆಪಿ ಮುಖಂಡ ಹಾಗೂ ನಟ ಸುರೇಶ್‌ ಗೋಪಿ, ಕೋಯಿಕ್ಕೋಡ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವಾಗ ಪತ್ರಕರ್ತೆಯೊಬ್ಬರ ಭುಜಕ್ಕೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ ಘಟನೆ ಶುಕ್ರವಾರ ನಡೆದಿದೆ.

ಸುರೇಶ್ ಗೋಪಿ ಮಹಿಳಾ ಪತ್ರಕರ್ತೆಯ ಹೆಗಲನ್ನು ಎರಡೆರಡು ಬಾರಿ ಅನುಚಿತವಾಗಿ ಮುಟ್ಟುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಘಟನೆಯ ವಿಡಿಯೋ ವೈರಲಾಗಿ, ಇದು ವಿವಾದವಾಗುತ್ತಿದ್ದಂತೆಯೇ ಫೇಸ್‌ಬುಕ್ ಪೋಸ್ಟ್ ಮೂಲಕ ಸುರೇಶ್ ಕ್ಷಮೆ ಯಾಚಿಸಿದ್ದಾರೆ.

Advertisements

ಆಗಿದ್ದೇನು?
ಶುಕ್ರವಾರ ಸಂಜೆ (ಅ.27) ಕೋಯಿಕ್ಕೋಡ್‌ನಲ್ಲಿ ಮಾಧ್ಯಮಗೋಷ್ಠಿ ಇತ್ತು. ಆ ವೇಳೆ, ಸುರೇಶ್ ಗೋಪಿ ಅವರಿಗೆ ‘ಮೀಡಿಯಾ ವನ್ ಚಾನೆಲ್‌’ನ ಮಹಿಳಾ ಪತ್ರಕರ್ತೆ ಶಿದಾ ಜಗತ್ ಪ್ರಶ್ನೆಯೊಂದನ್ನು ಕೇಳಿದ್ದರು. ಆ ಪ್ರಶ್ನೆಗೆ ಉತ್ತರಿಸುತ್ತಲೇ ಪತ್ರಕರ್ತೆಯ ಭುಜದ ಮೇಲೆ ಸುರೇಶ್ ಗೋಪಿ ಕೈ ಹಾಕಿದ್ದಾರೆ.

ಮೊದಲ ಬಾರಿ ಹೆಗಲ ಮೇಲೆ ಕೈ ಹಾಕುವಾಗ ಪತ್ರಕರ್ತೆ ಹಿಂದಕ್ಕೆ ಸರಿದಿದ್ದಾರೆ. ಆದಾಗ್ಯೂ, ಎರಡನೇ ಬಾರಿ ಮತ್ತೊಮ್ಮೆ ಸುರೇಶ್‌ ಗೋಪಿ ಹೆಗಲಿಗೆ ಕೈ ಹಾಕಿದ್ದು, ಈ ವೇಳೆ ಪತ್ರಕರ್ತೆ, ಸುರೇಶ್‌ ಗೋಪಿಯ ಕೈಯನ್ನು ದೂರ ಸರಿಸಿದ್ದಾರೆ.

ಪತ್ರಕರ್ತೆ ಎರಡೆರಡು ಬಾರಿ ದೂರ ಸರಿಸಿದರೂ ಕೂಡ ಸುರೇಶ್ ಗೋಪಿ ತಮ್ಮ ಈ ವರ್ತನೆಯನ್ನು ಮುಂದುವರಿಸಿದ್ದಾರೆ. ವಿಡಿಯೋದಲ್ಲಿ ಬಿಜೆಪಿ ಮುಖಂಡನ ಈ ವರ್ತನೆ ಸ್ಪಷ್ಟವಾಗಿ ಕಂಡಿದೆ. ಆ ಬಳಿಕ ಈ ವಿಡಿಯೋ ಎಲ್ಲ ಮಾಧ್ಯಮಗಳು ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿತ್ತು.

suresh gopi media

ಸುರೇಶ್ ಗೋಪಿಯ ಈ ನಡೆಯನ್ನು ಹಲವು ಮಹಿಳಾ ಸಂಘಟನೆಗಳು ಹಾಗೂ ರಾಜಕೀಯ ನೇತಾರರು ಖಂಡಿಸಿದ್ದಾರೆ. ಪತ್ರಕರ್ತೆ ಈ ಸಂಬಂಧ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ‘ಮೀಡಿಯಾ ವನ್ ಚಾನೆಲ್‌’ ಕೂಡ ಕಾನೂನು ಕ್ರಮ ಸೇರಿದಂತೆ ಮುಂದಿನ ಎಲ್ಲ ಹೆಜ್ಜೆಗಳಿಗೆ ತಮ್ಮ ಬೆಂಬಲ ನೀಡುವುದಾಗಿ ತಿಳಿಸಿದೆ.

ಕ್ಷಮೆಯಾಚನೆಗೆ ಒತ್ತಾಯಿಸಿದ್ದ ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟ
ಪತ್ರಕರ್ತೆಯೊಂದಿಗೆ ಅನುಚಿತವಾಗಿ ವರ್ತಿಸಿರುವ ಘಟನೆಗೆ ಸಂಬಂಧಿಸಿ ಸುರೇಶ್ ಗೋಪಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಒತ್ತಾಯಿಸಿತ್ತು.

ಈ ಬಗ್ಗೆ ಹೇಳಿಕೆ ಪ್ರಕಟಿಸಿದ್ದ ಕೆಯುಡಬ್ಲ್ಯುಜೆ ಹೇಳಿಕೆಯಲ್ಲಿ ಬಿಜೆಪಿ ನಾಯಕನ ಈ ವರ್ತನೆ ‘ಉದ್ಯೋಗಿ ಮಹಿಳೆಯರಿಗೆ ಮಾಡಿದ ಅವಮಾನ. ಮಾಧ್ಯಮದವರೊಂದಿಗೆ ಮಾತನಾಡುವ ಸಂದರ್ಭ, ಪತ್ರಕರ್ತೆಯ ಜೊತೆ ಅನುಚಿತವಾಗಿ ವರ್ತಿಸಿದ ಸುರೇಶ್ ಗೋಪಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು, ಜೊತೆಗೆ ಇತರ ಸೂಕ್ತ ಕಾನೂನು ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ತಿಳಿಸಿತ್ತು.

ಫೇಸ್‌ಬುಕ್‌ನಲ್ಲಿ ಕ್ಷಮೆಯಾಚಿಸಿದ ಸುರೇಶ್ ಗೋಪಿ
ಪತ್ರಕರ್ತೆ ಕಾನೂನು ಕ್ರಮ ಜರುಗಿಸಲು ಮುಂದಾದ ನಡುವೆಯೇ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಸುರೇಶ್ ಗೋಪಿ, ಕ್ಷಮೆಯಾಚಿಸಿದ್ದಾರೆ.

‘ನಾನು ಎಂದಿಗೂ ಸಾರ್ವಜನಿಕವಾಗಿಯೂ, ಖಾಸಗಿಯಾಗಿಯೂ ಅಸಭ್ಯವಾಗಿ ವರ್ತಿಸಿದ್ದಿಲ್ಲ. ಪತ್ರಕರ್ತೆಯನ್ನು ಪ್ರೀತಿಯಿಂದ ಮುಟ್ಟಿದ್ದೆ. ಆದರೆ, ಆಕೆಗೆ ಏನನ್ನಿಸಿದೆಯೋ ಅದನ್ನು ನಾವು ಒಪ್ಪಬೇಕು. ಆಕೆಗೆ ಯಾವುದೇ ರೀತಿಯ ನೋವಾಗಿದ್ದರೆ ಅಥವಾ ಮಾನಸಿಕ ತೊಂದರೆಯಾಗಿದ್ದರೆ ಕ್ಷಮೆ ಯಾಚಿಸುತ್ತೇನೆ’ ಎಂದು ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕ್ಷಮೆಯಾಚನೆ ಬಗ್ಗೆ ಪ್ರತಿಕ್ರಿಯಿಸಿರುವ ಪತ್ರಕರ್ತೆ ಶಿದಾ ಜಗತ್, ‘ತಾನು ಮಾಡಿದ್ದು ತಪ್ಪು ಎಂಬ ಅರಿವು ಅವರಿಗಿರಬೇಕು. ಒಬ್ಬರ ದೇಹವನ್ನು ಅವರ ಅನುಮತಿ ಇಲ್ಲದೇ ಮುಟ್ಟು ತಪ್ಪು. ನನಗೆ ಅದು ಅನುಚಿತವಾಗಿ ವರ್ತಿಸಿದ ರೀತಿಯೇ ಅನಿಸಿತು. ನನಗೆ ಅವರ ನಡವಳಿಕೆ ಸರಿ ಇಲ್ಲ ಎಂದು ತೋರಿದ ಕಾರಣಕ್ಕಾಗಿಯೇ ನಾನು ಅವರ ಕೈಯನ್ನು ದೂರ ಸರಿಸಿದ್ದೆ. ಹಾಗಾಗಿ, ಈ ಘಟನೆಯ ಕೋಯಿಕ್ಕೋಡ್ ನಗರ ಪೊಲೀಸ್ ಕಮಿಷನರ್ ಅವರಿಗೆ ದೂರು ಸಲ್ಲಿಸುತ್ತೇನೆ’ ಎಂದು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಅಧಿಕಾರ ಮತ್ತು ಪ್ರಸಿದ್ಧಿ ಯ ಅಮಲು ನೆತ್ತಿಗೇರಿರಬೇಕು, ಶಿಕ಼್ಷೆಯಾಗಬೇಕು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಚಿವ ಕೆ ಎನ್ ರಾಜಣ್ಣ ರಾಜೀನಾಮೆ ನೀಡಿಲ್ಲ, ಬದಲಿಗೆ ಸಂಪುಟದಿಂದ ಉಚ್ಚಾಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರಿಗೆ...

ರಾಯಚೂರು | ಬಣದಲ್ಲಿ ಅಸಮಾಧಾನ : ಎಂಎಲ್ ಸಿ ಕಾರು ತಡೆ ವಾಗ್ವಾದ

ಎಂಎಲ್ ಸಿ ಶರಣಗೌಡ ಪಾಟೀಲ್‌ ಅವರ ಕಾರಿಗೆ ಡಿ ಎಸ್ ಹುಲಗೇರಿ...

ಕಲಬುರಗಿ | ಮೂರು ತಿಂಗಳಿಂದ ಪಾವತಿಯಾಗದ ʼಗೃಹಲಕ್ಷ್ಮೀʼ ಹಣ : ವೆಲ್ಫೇರ್ ಪಾರ್ಟಿ ಆಕ್ರೋಶ

ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿಯ ಗೃಹಲಕ್ಷ್ಮೀ ಯೋಜನೆಯ ಹಣ...

ಬೆಳಗಾವಿ : ಮೂರು ವರ್ಷದ ಹೆಣ್ಣು ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ತಂದೆ ತಾಯಿ

ತಾಯಿಯ ಮಡಿಲಿಗೆ ತವಕಿಸುತ್ತಿರುವ ಮೂರು ವರ್ಷದ ಹೆಣ್ಣುಮಗುವನ್ನು ಆಸ್ಪತ್ರೆಯಲ್ಲಿ ತಂದೆ ತಾಯಿಗಳು...

Download Eedina App Android / iOS

X