ಬಸ್ ನಿಲ್ಲಿಸದಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರು ಒಟ್ಟಾಗಿ ಪ್ರತಿಭಟಿಸಿದ್ದ ವಿಡಿಯೋವೊಂದನ್ನು ತಪ್ಪಾಗಿ ಹಂಚಿಕೊಂಡು, ಬಲಪಂಥೀಯರು ಸೋಷಿಯಲ್ ಮೀಡಿಯಾದಲ್ಲಿ ಕೋಮು ಬಣ್ಣ ಹಚ್ಚಿ, ವೈರಲ್ ಮಾಡುತ್ತಿದ್ದಾರೆ.
“ಕೇರಳದಲ್ಲಿ ಮುಸ್ಲಿಂ ಮಹಿಳಾ ಪ್ರಯಾಣಿಕರು ಬುರ್ಖಾ ಇಲ್ಲದೆ ಇತರ ಸಮುದಾಯದ ಮಹಿಳೆಯರನ್ನು ಬಸ್ನಲ್ಲಿ ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ. ಈಗ, ಹಿಂದೂಗಳು ತಮ್ಮ ತಲೆಯನ್ನು ಮುಚ್ಚಿಕೊಳ್ಳಬೇಕು ಮತ್ತು ನಂತರ ಮಾತ್ರ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಬಹುದು. ಆಶ್ಚರ್ಯಕರ ವಿಷಯ ಏನೆಂದರೆ, ಈ ಘಟನೆಯನ್ನು ಯಾವುದೇ ಟಿವಿ ಚಾನೆಲ್ ಮತ್ತು ಯಾವುದೇ ಪತ್ರಿಕೆಯು ವರದಿ ಮಾಡಿಲ್ಲ. ಮಾಧ್ಯಮಗಳು ನಿಗೂಢವಾಗಿ ಮೌನವಾಗಿವೆ” ಎಂದು ಬಸ್ನೊಳಗೆ ನಡೆದ ಜಗಳವೊಂದರ ನಡೆಯುವ ವಿಡಿಯೋವೊಂದನ್ನು ಬಲಪಂಥೀಯರು ಹಂಚಿಕೊಂಡಿದ್ದರು.
ಇದು ನಿನ್ನೆ ಕೇರಳದಲ್ಲಿ. ಮುಸ್ಲಿಂ ಮಹಿಳಾ ಪ್ರಯಾಣಿಕರು ಬುರ್ಖಾ ಇಲ್ಲದೆ ಮಹಿಳೆಯರನ್ನು ಬಸ್ನಲ್ಲಿ ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ. ಈಗ, ಹಿಂದೂಗಳು ತಮ್ಮ ತಲೆಯನ್ನು ಮುಚ್ಚಿಕೊಳ್ಳಬೇಕು ಮತ್ತು ನಂತರ ಮಾತ್ರ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಬಹುದು.
ಆಶ್ಚರ್ಯಕರವಾಗಿ, ಈ ಘಟನೆಯನ್ನು ಯಾವುದೇ ಟಿವಿ ಚಾನೆಲ್ ಮತ್ತು ಯಾವುದೇ ಪತ್ರಿಕೆ pic.twitter.com/gw510veXL7
— Sridhar Gowda (@SridharGowda73) October 27, 2023
ಈ ಹಿನ್ನೆಲೆಯಲ್ಲಿ ಈ ವಿಡಿಯೋದ ಸತ್ಯಾಸತ್ಯತೆಯನ್ನು ಪತ್ತೆ ಹಚ್ಚಿರುವ ಫ್ಯಾಕ್ಟ್ ಚೆಕ್ ವೆಬ್ಸೈಟ್ ಆಲ್ಟ್ ನ್ಯೂಸ್, ‘ಬಲಪಂಥೀಯರು ಆರೋಪಿಸಿ ಹಂಚುತ್ತಿರುವ ವಿಡಿಯೋ ಸುಳ್ಳು. ಅದು ವಿದ್ಯಾರ್ಥಿಗಳು ಬಸ್ ನಿಲ್ಲಿಸದಿದ್ದಕ್ಕೆ ಪ್ರತಿಭಟನೆ ನಡೆಸಿದ ವೇಳೆ ಬಸ್ನೊಳಗೆ ಇದ್ದ ಸೀರೆಯುಟ್ಟ ಮಹಿಳೆ ವಿದ್ಯಾರ್ಥಿಗಳ ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಬಸ್ ನಿಲ್ಲಿಸದೇ ಇರುವುದರಿಂದ ತಾವು ಅನುಭವಿಸುತ್ತಿರುವ ಕಷ್ಟವನ್ನು ಮಹಿಳೆಗೆ ವಿವರಿಸಿದ್ದಾರೆ. ಈ ವೇಳೆ ವಾಗ್ವಾದವಾಗಿದೆ ಅಷ್ಟೇ. ಬುರ್ಖಾ ಇಲ್ಲದ್ದಕ್ಕೆ ಅಥವಾ ಬುರ್ಖಾ ಧರಿಸುವಂತೆ ಒತ್ತಾಯಿಸಿಲ್ಲ’ ಎಂದು ವರದಿ ಮಾಡಿದೆ.
Here is @AltNews Fact check link. It also has all the archive links to the communally misleading tweets. https://t.co/BB8KaGkyW9
— Mohammed Zubair (@zoo_bear) October 28, 2023
ಅಷ್ಟಕ್ಕೂ ಆಗಿದ್ದೇನು?
ಕೇರಳದ ಕಾಸರಗೋಡಿನ ಕುಂಬಳೆ-ಮುಳ್ಳೇರಿಯಾ ಭಾಗದಲ್ಲಿರುವ ಮಹಿಳಾ ಕಾಲೇಜು ಬಳಿ ಹೊಸದಾಗಿ ಬಸ್ ನಿಲ್ದಾಣವೊಂದನ್ನು ನಿರ್ಮಿಸಲಾಗಿತ್ತು. ಅಕ್ಟೋಬರ್ 22ರಂದು ಭಾಸ್ಕರ ನಗರದಲ್ಲಿ ಬಸ್ ನಿಲ್ಲಿಸದ ವಿಚಾರಕ್ಕೆ ನಡೆದ ಘಟನೆ.
#FactCheck: In #Kerala‘s #Kasaragod, a group of #Muslim students from a women’s college protested the bus driver for not stopping at their stop. They stood in the road until the bus finally stopped, and they boarded.
However, one of the #Hindu female passenger on the bus began… pic.twitter.com/Bbx5N4CgBJ
— Hate Detector 🔍 (@HateDetectors) October 27, 2023
ಭಾಸ್ಕರ ನಗರದಲ್ಲಿ ಹೊಸದಾಗಿ ಬಸ್ ನಿಲ್ದಾಣವನ್ನು ಕೇರಳ ಸಾರಿಗೆ ಇಲಾಖೆಯು ಅನುಮೋದಿಸಿದೆ. ಆದರೂ ಕೆಲ ಖಾಸಗಿ ಬಸ್ಗಳು ನಿಲ್ಲಿಸದೇ ಇದ್ದುದ್ದರಿಂದ ಸಮೀಪದ ಖನ್ಸ ಕಾಲೇಜು ವಿದ್ಯಾರ್ಥಿಗಳು ಎರಡು ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಈ ಪ್ರತಿಭಟನೆಯ ಸಂದರ್ಭದಲ್ಲಿ ಬಸ್ ಒಳಗಿದ್ದ ಹಿಂದೂ ಮಹಿಳೆಯೊಬ್ಬರು ತನಗೆ ತಡವಾಗುತ್ತಿದೆ ಎಂದು ದೂರುತ್ತಾ, ಬಸ್ ತಡೆದು ಪ್ರತಿಭಟನೆ ನಡೆಸಿದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಕೆಟ್ಟದಾಗಿ ನಿಂದಿಸಿದ್ದಾರೆ. ಹಾಗಾಗಿ ಅಲ್ಲಿದ್ದ ವಿದ್ಯಾರ್ಥಿನಿಯರು ಆ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಮಕ್ಕಳಿಗೂ ಇದೇ ರೀತಿ ಬಸ್ ನಿಲ್ಲಿಸದೇ ಇದ್ದಿದ್ದರೆ ನೀವು ಸುಮ್ಮನಿರುತ್ತೀರಾ? ಎಂದು ಪ್ರಶ್ನಿಸಿ, ತರಾಟೆಗೆ ತೆಗೆದುಕೊಂಡಿದ್ದಾರೆ. ಇಲ್ಲಿ ಬುರ್ಖಾದ ವಿಷಯವೇ ಪ್ರಸ್ತಾಪವಾಗಿರಲಿಲ್ಲ.
Sharia Patrols in India!
Islamic woman harassed a Hindu woman for daring to ride a bus in Kerala without a sharia covering. The enraged Muslims demanded she wear a burqa.
Muslims do not want Hindus to ride on public transportation without adhering to their Sharia demands -… pic.twitter.com/eXwTexfIl0
— Amy Mek (@AmyMek) October 27, 2023
ಅಲ್ಲದೇ, ಈ ಬಗ್ಗೆ ಕುಂಬಳೆ ಪೊಲೀಸ್ ಠಾಣೆಯ ಅಧಿಕಾರಿಗಳು ಕೂಡ ಸ್ಪಷ್ಟೀಕರಣ ನೀಡಿದ್ದು, ‘ಬಸ್ ನಿಲ್ಲಿಸದ ವಿಚಾರಕ್ಕೆ ಪ್ರತಿಭಟನೆ ನಡೆದಿದೆ. ಬಸ್ನೊಳಗಿದ್ದ ಮಹಿಳೆ ಅದರಿಂದ ಕಿರಿಕಿರಿ ಮಾಡಿದ್ದಾರೆ. ಉಳಿದ ವಿದ್ಯಾರ್ಥಿನಿಯರು ಅದು ಸರಿಯಲ್ಲ ಎಂದು ವಾದಿಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಕೋಮು ಆಯಾಮವಿಲ್ಲ ಮತ್ತು ಯಾವುದೇ ದೂರು ಬಂದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ ಬಲಪಂಥೀಯರು ಇದಕ್ಕೆ ಕೋಮು ಆಯಾಮ ನೀಡಿ, ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ, ಇದನ್ನೇ ನಂಬಿಕೊಂಡು, ವಿಡಿಯೋವನ್ನು ಪರಿಶೀಲನೆ ನಡೆಸದೆ ಕೆಲವೊಂದು ಗೋದಿ ಮಾಧ್ಯಮಗಳೂ ಅದೇ ರೀತಿ ಸುದ್ದಿ ಪ್ರಕಟಿಸಿದೆ.