ಐಸಿಸಿ ಏಕದಿನ ವಿಶ್ವಕಪ್ 2023ರ ಟೂರ್ನಿಯಲ್ಲಿ ಭಾರತದ ಗೆಲುವಿನ ನಾಗಲೋಟ ಮುಂದುವರೆದಿದೆ. ಕಡಿಮೆ ಮೊತ್ತ ದಾಖಲಿಸಿದ್ದರೂ ಆಂಗ್ಲ ತಂಡವನ್ನು ಟೀಂ ಇಂಡಿಯಾ 129 ರನ್‌ಗಳಿಗೆ ಆಲೌಟ್ ಮಾಡಿ ಸತತ 6ನೇ ಗೆಲುವು ದಾಖಲಿಸಿತು.
Suna tha Lucknow mein Shami Kebab famous hain? Sahi suna tha! 😌#MohammedShami#CWC23 #INDvENG pic.twitter.com/ejmcrumV0l
— Disney+ Hotstar (@DisneyPlusHS) October 29, 2023
ಲಖನೌದ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ 230 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡ ಟೀಂ ಇಂಡಿಯಾ ಬೌಲರ್‌ಗಳ ದಾಳಿಗೆ ತತ್ತರಿಸಿ 34.5 ಓವರ್‌ಗಳಲ್ಲಿ 129 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 100 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿತು.
Undefeated India go to the top of the #CWC23 points table with their sixth successive win in the tournament 👊#INDvENG 📝: https://t.co/sLTTWYaH8H pic.twitter.com/ZqjSAJ7NBL
— ICC (@ICC) October 29, 2023
ಭಾರತದ ಪರ ಮೊಹಮ್ಮದ್ ಶಮಿ 22/4, ಜಸ್‌ಪ್ರೀತ್ ಬೂಮ್ರಾ 32/3, ಕುಲದೀಪ್ ಯಾದವ್ 34/2 ಹಾಗೂ ರವೀಂದ್ರ ಜಡೇಜಾ 16/1 ವಿಕೆಟ್ ಕಬಳಿಸಿ ಗೆಲುವಿನ ರೂವಾರಿಯಾದರು.
Shami rattles the stumps again 💥#TeamIndia one wicket away from a win in Lucknow 🏟️
Follow the match ▶️ https://t.co/etXYwuCQKP#CWC23 | #MenInBlue | #INDvENG pic.twitter.com/gNXlU7av21
— BCCI (@BCCI) October 29, 2023
ಲಿಯಾಮ್ ಲಿವಿಂಗ್‌ಸ್ಟೋನ್ (27) ಹೊರತುಪಡಿಸಿದರೆ ಉಳಿದ ಬ್ಯಾಟ್ಸ್‌ಮನ್‌ಗಳು 20ರ ಗಡಿ ದಾಟದೆ ಸಂಪೂರ್ಣ ವಿಫಲರಾದರು. ಆರು ಪಂದ್ಯವಾಡಿರುವ ಇಂಗ್ಲೆಂಡ್‌ಗೆ ಇದು ಐದನೇ ಸೋಲು. ಕಳೆದ ಬಾರಿಯ ಚಾಂಪಿಯನ್ ಇಂಗ್ಲೆಂಡ್ ಈ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ನೀಡಿ 6 ಪಂದ್ಯಗಳಲ್ಲಿ 5 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಈ ಸುದ್ದಿ ಓದಿದ್ದೀರಾ? ಭಾರತದ ಮಾಜಿ ಕ್ರಿಕೆಟಿಗ, ಲೆಜೆಂಡರಿ ಸ್ಪಿನ್ನರ್ ಬಿಶನ್ ಸಿಂಗ್ ಬೇಡಿ ನಿಧನ
ರೋಹಿತ್, ಸೂರ್ಯಕುಮಾರ್ ಉತ್ತಮ ಆಟ
ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ಆರಂಭಿಸಿ ನಾಯಕ ರೋಹಿತ್ ಶರ್ಮಾ (87), ಸೂರ್ಯ ಕುಮಾರ್ ಯಾದವ್ (49) ಹಾಗೂ ಕೆಎಲ್ ರಾಹುಲ್ (39) ರನ್‌ಗಳ ಉಪಯುಕ್ತ ಆಟದಿಂದ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 229 ರನ್ ದಾಖಲಿಸಿತ್ತು.