ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ 2023ರ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರಿರುವುದಕ್ಕೆ ಪ್ರಮುಖ ಬೆಲೆ ತೆತ್ತಿದೆ. ಕಳಪೆ ಪ್ರದರ್ಶನದ ಹೊಣೆ ಹೊತ್ತು ಪಾಕಿಸ್ತಾನ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಇಂಜಮಾಮ್-ಉಲ್-ಹಕ್ ಟೂರ್ನಿಯ ಮಧ್ಯದಲ್ಲೇ ರಾಜೀನಾಮೆ ನೀಡಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಸತತ ನಾಲ್ಕು ಪಂದ್ಯಗಳ ಸೋಲಿನ ನಂತರ ಇಂಜಮಾಮ್-ಉಲ್-ಹಕ್ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಝಕಾ ಅಶ್ರಫ್ ಅವರಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಇಂಡಿಯಾ’ ಸಂಕ್ಷಿಪ್ತ ರೂಪ; ರಾಜಕೀಯ ಮೈತ್ರಿ ನಿಯಂತ್ರಣ ಸಾಧ್ಯವಿಲ್ಲ ಎಂದ ಚುನಾವಣಾ ಆಯೋಗ
ಪ್ರಮುಖವಾಗಿ, ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನದ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಹಿತಾಸಕ್ತಿ ಸಂಘರ್ಷದ ಆರೋಪಗಳಿಂದ ಇಂಜಮಾಮ್ ಸಂತೋಷವಾಗಿರಲಿಲ್ಲ. ಹಿತಾಸಕ್ತಿ ಸಂಘರ್ಷದ ಕಾರಣದಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆರೋಪಗಳ ತನಿಖೆಗಾಗಿ ಐದು ಸದಸ್ಯರ ಸಮಿತಿಯನ್ನು ರಚಿಸಿತು.
“ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಹಿತಾಸಕ್ತಿ ಸಂಘರ್ಷದ ಆರೋಪಗಳ ಬಗ್ಗೆ ಪಾರದರ್ಶಕ ವಿಚಾರಣೆ ನಡೆಸಲು ಪಿಸಿಬಿಗೆ ಅವಕಾಶ ನೀಡಲು ನಾನು ಹುದ್ದೆಯಿಂದ ಕೆಳಗಿಳಿಯುತ್ತಿದ್ದೇನೆ. ಸಮಿತಿಯು ನನ್ನನ್ನು ತಪ್ಪಿತಸ್ಥನಲ್ಲ ಎಂದು ಆರೋಪ ಮುಕ್ತಗೊಳಿಸಿದರೆ, ನಾನು ನನ್ನ ಹುದ್ದೆಯನ್ನು ಪುನರಾರಂಭಿಸುತ್ತೇನೆ” ಎಂದು ಇಂಜಮಾಮ್ ಎಂದು ಪಿಸಿಬಿ ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.