ಬಾಲಿವುಡ್ ಸ್ಟಾರ್ ಶಾರುಕ್ ಖಾನ್ ನಟಿಸಿರುವ ‘ಜವಾನ್’ ಚಿತ್ರ ಸೆ.7 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಂಡು ಸಿನಿಪ್ರಿಯರ ಮನಸ್ಸು ಗೆಲ್ಲುವಲ್ಲಿ ಯಶಸ್ವಿ ಕಂಡಿದೆ. ನವೆಂಬರ್ 2ರಂದು ನಟ ಶಾರುಕ್ ಖಾನ್ ಅವರ ಹುಟ್ಟುಹಬ್ಬವಿದ್ದು, ಅಂದೇ ಈ ಚಿತ್ರ ಕೂಡ ಒಟಿಟಿಗೆ ಬರಲಿದೆ.
ಸದ್ಯ ಈ ಸಿನಿಮಾ ಯಾವಾಗ ಒಟಿಟಿಯಲ್ಲಿ ಬರುತ್ತದೆ ಎಂಬ ಸಿನಿಪ್ರಿಯರ ಕುತೂಹಲಕ್ಕೆ ತೆರೆ ಬಿದ್ದಿದೆ. ಆಟ್ಲಿ ನಿರ್ದೇಶನದ ‘ಜವಾನ್’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿರುವ ನಟ ಶಾರುಕ್ ಖಾನ್ ಅವರಿಗೆ ವಿಶೇಷ ಮಾಸ್ ಲುಕ್ ನೀಡಲಾಗಿತ್ತು. ನವೆಂಬರ್ 2ರಂದು ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಬರಲಿದೆ.
ಇನ್ನು ಚಿತ್ರಮಂದಿರಗಳಲ್ಲಿ ‘ಜವಾನ್’ ಚಿತ್ರ ನೋಡದೆ ಇರುವವರು ಅಥವಾ ಚಿತ್ರಮಂದಿರಗಳಲ್ಲಿ ನೋಡಿದರೂ ಇನ್ನೊಮ್ಮೆ ನೋಡಬಯಸುವವರು ನೆಟ್‌ಫ್ಲಿಕ್ಸ್‌ನಲ್ಲಿ ನವೆಂಬರ್ 2ರಿಂದ ಚಿತ್ರವನ್ನು ನೋಡಬಹುದು.
₹1150 ಕೋಟಿ ಗಳಿಕೆ
‘ಜವಾನ್’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಅಂದಾಜು ₹1150 ಕೋಟಿ ಬಾಕ್ಸ್ ಆಫೀಸ್ ಗಳಿಕೆ ಮಾಡಿತ್ತು. ಹಿಂದಿ ಚಿತ್ರರಂಗದಲ್ಲಿ ಈ ಗಳಿಕೆ ದಾಖಲೆಯಾಗಿದೆ. ಕೇವಲ ಹಿಂದಿಯಲ್ಲಿಯೇ ₹590 ಕೋಟಿ ಗಳಿಸಿದೆ. ತಮಿಳು ಮತ್ತು ತೆಲುಗು ಸಿನಿ ಮಾರುಕಟ್ಟೆಯಲ್ಲೂ ಉತ್ತಮ ಗಳಿಕೆ ಮಾಡಿತ್ತು. ‘ಪಠಾಣ್’ ಚಿತ್ರದ ನಂತರ ಸಾವಿರ ಕೋಟಿ ಕ್ಲಬ್ ಸೇರಿದ ಚಿತ್ರ ಇದಾಗಿದೆ.
ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಚಿತ್ರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಿದೆ. ಈ ಸಿನಿಮಾ ಮೂಲಕ ನಿರ್ದೇಶಕ ಆಟ್ಲಿ ಮತ್ತು ನಟಿ ನಯನತಾರಾ ಅವರು ಬಾಲಿವುಡ್‌ಗೆ ಪದಾರ್ಪಣೆ ಮಾಡಿ ಗೆಲುವು ಕಂಡಿದ್ದರು.
ಈ ಸುದ್ದಿ ಓದಿದ್ದೀರಾ? ಚಲಿಸುತ್ತಿರುವ ರೈಲುಗಳಿಗೆ ಕಲ್ಲು ತೂರಾಟ; ತಪ್ಪಿತಸ್ಥರ ವಿರುದ್ಧ ಕಾರ್ಯಾಚರಣೆ ಪ್ರಾರಂಭಿಸಿದ ನೈರುತ್ಯ ರೈಲ್ವೆ
‘ಜವಾನ್’ ಚಿತ್ರವು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸೆ. 7 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ‘ಜವಾನ್’ ಚಿತ್ರದ ಡಿಜಿಟಲ್ ಹಕ್ಕನ್ನು ನೆಟ್‌ಫ್ಲಿಕ್ಸ್ ಸಂಸ್ಥೆ ₹250 ಕೋಟಿಗೆ ಖರೀದಿಸಿದೆ ಎಂದು ತಿಳಿದುಬಂದಿದೆ.
ಸಿನಿಮಾ ಬಿಡುಗಡೆಯಾದ ಎರಡು ತಿಂಗಳಿಗೆ ‘ಜವಾನ್’ ಒಟಿಟಿಗೆ ಬರಲಿದೆ. ಅಷ್ಟೇ ಅಲ್ಲ ಹೆಚ್ಚುವರಿ ದೃಶ್ಯಗಳನ್ನೂ ಒಳಗೊಂಡು ಒಟಿಟಿಗೆ ಪ್ರವೇಶಿಸಲಿದೆ ಎನ್ನಲಾಗಿದೆ.
‘ಜವಾನ್’ ಚಿತ್ರದಲ್ಲಿ ವಿಜಯ್ ಸೇತುಪತಿ, ಸಂಜಯ್ ದತ್, ನಯನತಾರಾ, ದೀಪಿಕಾ ಪಡುಕೋಣೆ ವಿಶೇಷ ಪಾತ್ರಗಳ ಮೂಲಕ ಕಾಣಿಸಿಕೊಂಡಿದ್ದಾರೆ. ಸಾನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ಗಿರಿಜಾ ಓಕ್, ಸಂಜೀತಾ ಭಟ್ಟಾಚಾರ್ಯ, ಲೆಹರ್ ಖಾನ್, ಆಲಿಯಾಹ್ ಖುರೇಷಿ, ರಿಧಿ ದೊಗ್ರಾ, ಸುನಿಲ್ ಗ್ರೋವರ್ ಮತ್ತು ಮುಖೇಶ್ ಛಾಬ್ರಾ ತಾರಾಗಣವಿದೆ.