ರಾಜ್ಯದ ಚಳಿಗಾಲದ ಅಧಿವೇಶನ ಡೆಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆಯಲಿದೆ. ಅಧಿವೇಶನಕ್ಕೆ ಸಕಲ ಸಿದ್ದತೆಗಳು ನಡೆಯುತ್ತಿವೆ. ಅದಕ್ಕಾಗಿ 10 ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನವೆಂಬರ್ 7ರಂದು ಬೆಳಗಾವಿಗೆ ವಿಧಾನಸಭಾ ಸ್ಫೀಕರ್ ಬರಲಿದ್ದಾರೆ. ಅವರು ಅಧಿವೇಶನದ ದಿನಾಂಕ ಘೋಷಣೆ ಮಾಡುತ್ತಾರೆ” ಎಂದು ತಿಳಿಸಿದ್ದಾರೆ.
“ಕಳೆದ ವರ್ಷ ಅಧಿವೇಶನಕ್ಕೆ 20 ಕೋಟಿ ಅನುದಾನ ಬಂದಿತ್ತು. ಇದರಲ್ಲಿ 18.5 ಕೋಟಿ ರೂ. ಖರ್ಚಾಗಿತ್ತು. ಸರ್ಕಾರದ ಅನುದಾನದಲ್ಲಿ ಉಳಿತಾಯವಾಗಲಿದೆ” ಎಂದು ಹೇಳಿದರು.
“ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ನಡೆಯಲಿದೆ. 100 ರೂಪಕ ವಾಹನಗಳು ರಾಜ್ಯೋತ್ಸವ ಮೆರವಣಿಗೆಯಲ್ಲಿ ಗಮನ ಸೆಳೆಯಲಿವೆ. ಹಳದಿ-ಕೆಂಪು ಬಣ್ಣದ ಗಾಳಿಪಟ ಉತ್ಸವ ಜಿಲ್ಲೆಯಾದ್ಯಂತ ನಡೆಯಲಿದೆ” ಎಂದು ಹೇಳಿದ್ದಾರೆ.
“ಎಂಇಎಸ್ ಕರಾಳ ದಿನಾಚರಣೆಗೆ ಅನುಮತಿ ಕೊಟ್ಟಿಲ್ಲ. ಮಹಾರಾಷ್ಟ್ರ ನಾಯಕರಿಗೆ ಬೆಳಗಾವಿ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಿದ್ದೇವೆ. ಕಳೆದ ವರ್ಷವೂ ಅವಕಾಶ ಕೊಟ್ಟಿಲ್ಲ. ಈ ವರ್ಷವೂ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.