ಕಳೆದ ಒಂದು ತಿಂಗಳಿನಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡು ರಾಜಧಾನಿ ಬೆಂಗಳೂರಿನಲ್ಲಿ ಮಾನವ ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ 14 ಆರೋಪಿಗಳನ್ನು ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಅ.31 ರಂದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ನೀಡಿದರು.
ಬಂಧಿತರಿಂದ 4 ದ್ವಿಚಕ್ರ ವಾಹನ, 1 ಕಾರು, 40 ಮೊಬೈಲ್ ಫೋನ್‌ಗಳು, 2 ಲ್ಯಾಪ್‌ಟಾಪ್‌ಗಳು, 3 ವಿವಿಧ ಕಂಪನಿಯ ಸಿಮ್ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಾಂಗ್ಲಾದೇಶ ಮೂಲದ ನಾಲ್ವರು, ಪಶ್ಚಿಮ ಬಂಗಾಳದ ಹನ್ನೊಂದು, ಕರ್ನಾಟಕದ ಮೂವರು, ತೆಲಂಗಾಣ ಹಾಗೂ ಉತ್ತರಾಖಂಡ್ ಮೂಲದ ತಲಾ ಓರ್ವ ಮಹಿಳೆಯರು ಸೇರಿದಂತೆ ಈ ಕಾರ್ಯಾಚರಣೆಯ ಸಮಯದಲ್ಲಿ ನೊಂದ 20 ಮಹಿಳೆಯರನ್ನು ರಕ್ಷಿಸಲಾಗಿದೆ.
“ಬಾಗಲಗುಂಟೆ, ವರ್ತೂರು, ಕೆ.ಆರ್.ಪುರಂ, ವಿದ್ಯಾರಣ್ಯಪುರ, ಅಮೃತಹಳ್ಳಿ ಠಾಣಾ ವ್ಯಾಪ್ತಿಗಳಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಸತತ ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ” ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.
“ಬಯೋಮೆಟ್ರಿಕ್ ಸ್ಕ್ಯಾನ್ ಬಳಸಿ ಗ್ರಾಹಕರ ಗಮನಕ್ಕೆ ಬಾರದೆ ವಂಚಕರು ಖಾತೆಯಲ್ಲಿದ್ದ ಹಣವನ್ನು ಕದಿಯುತ್ತಿದ್ದರು. ಸದ್ಯ ವಂಚಕರನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ ಸಲಕರಣೆ ಜಪ್ತಿ ಮಾಡಲಾಗಿದೆ” ಎಂದು ಪೊಲೀಸ್ ಕಮಿಷನರ್ ದಯಾನಂದ್ ಅವರು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಅಪಾರ್ಟ್‌ಮೆಂಟ್‌ನಲ್ಲಿ ಅಡಗಿರುವ ಚಿರತೆ ಸೆರೆಹಿಡಿಯಲು ಬೋನ್ ಇಟ್ಟ ಅರಣ್ಯ ಇಲಾಖೆ ಅಧಿಕಾರಿಗಳು
“ಆಧಾರ್, ಬಯೋಮೆಟ್ರಿಕ್ ಆಧಾರದಲ್ಲಿ ಹಣ ಡ್ರಾ ಮಾಡಬಹುದು. ಇದೇ ತಂತ್ರಜ್ಞಾನವನ್ನ ಬಳಸಿ ಖಾತೆಗಳಲ್ಲಿ ಹಣ ದೋಚುತ್ತಿದ್ದ ತಂಡ ಪತ್ತೆಯಾಗಿದೆ. ವಂಚಕರು ಸರ್ಕಾರದ ಈ ತಂತ್ರಜ್ಞಾನ ಕದ್ದು ಅಚ್ಚು ತಯಾರಿಸಿದ್ದರು. ಮೈಕ್ರೋ ಎಟಿಎಂ ಮೂಲಕ ಅಕ್ರಮವಾಗಿ ಹಣ ಡ್ರಾ ಮಾಡಿದ್ದರು” ಎಂದು ಹೇಳಿದ್ದಾರೆ.
“ಕಾವೇರಿ ವೆಬ್ಸೈಟ್ ಮೂಲಕ ಎಇಪಿಎಸ್ ಸಾಧನ ಬಳಸಿ ವಂಚನೆ ಮಾಡುತ್ತಿದ್ದರು. ಸದ್ಯ ವಂಚಕರನ್ನು ಬಂಧಿಸಿ, ಅವರಿಂದ ಕೃತ್ಯಕ್ಕೆ ಬಳಸಿದ್ದ ಸಲಕರಣೆ ಜಪ್ತಿ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.