ಮೈಸೂರಿನ ಲಲಿತ ಮಹಲ್ ನಗರ ಮುಖ್ಯ ರಸ್ತೆಯಲ್ಲಿರುವ ನಿವೃತ್ತ ಪೊಲೀಸ್ ಅಧಿಕಾರಿ ಜೆ ಬಿ ರಂಗಸ್ವಾಮಿ ಅವರ ಒಡೆತನದ ಕಟ್ಟಡದಲ್ಲಿ ವೇಶ್ಯಾವಾಟಿಕೆ ಜಾಲವನ್ನು ಒಡನಾಡಿ ಸ್ವಯಂಸೇವಾ ಸಂಸ್ಥೆ ಹಾಗೂ ಸ್ಥಳೀಯ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿದ್ದಾರೆ.
ರಂಗಸ್ವಾಮಿ ಮನೆಯ ಮೊದಲ ಮಹಡಿಯಲ್ಲಿ ದನಿಯಾ ಫ್ಯಾಮಿಲಿ ಸಲೂನ್ ಎಂಬ ಹೆಸರಿನ ಬ್ಯೂಟಿ ಪಾರ್ಲರ್ ಇದ್ದು, ವಾಸ್ತವದಲ್ಲಿ ಅದು ವೇಶ್ಯಾವಾಟಿಕೆ ನಡೆಸುವ ಅಡ್ಡೆಯಾಗಿತ್ತು. ಈ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಒಡನಾಡಿ ಸಂಸ್ಥೆಯವರು ಈ ಜಾಲವನ್ನು ಭೇಧಿಸಲು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಹಲವು ಬಾರಿ ಪ್ರಯತ್ನಿಸಿದ್ದರು. ಆದರೆ ಹೇಗೋ ಮಾಹಿತಿ ಸೋರಿಕೆಯಾಗಿ ದಂಧೆಕೋರರು ತಪ್ಪಿಸಿಕೊಳ್ಳುತ್ತಿದ್ದರು. ಈ ಬಾರಿ ಒಡನಾಡಿ ಸಂಸ್ಥೆ ನೇರವಾಗಿ ನಗರದ ಪೊಲೀಸ್‌ಕಮಿಷನರ್ ಅವರನ್ನು ಸಂಪರ್ಕಿಸಿ ಕಾರ್ಯಾಚರಣೆ ನಡೆಸುವಂತೆ ಮನವಿ ಮಾಡಿದ್ದರು. ಅದರಂತೆ ಕಮಿಷನರ್ ಅವರು ಸ್ಥಳೀಯ ಸ್ಟೇಷನ್‌ಗೆ ಹೊರತಾದ ಅನುಭವಿ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿ ದಿಢೀರ್ ಕಾರ್ಯಾಚರಣೆ ನಡೆಸಿದ್ದಾರೆ.

ದಾಳಿಯಲ್ಲಿ ಪ್ರಕರಣದ ಕೇಂದ್ರ ಬಿಂದು ಎನ್ನಲಾದ ಮಹೇಶ್ ಸಿಕ್ಕಿಬಿದ್ದಿದ್ದಾನೆ. ಈತನ ಮೇಲೆ ಉದಯಗಿರಿ ಠಾಣೆ ಸೇರಿದಂತೆ ಅನೇಕ ಠಾಣೆಗಳಲ್ಲಿ ಗಂಭೀರ ಪ್ರಕರಣಗಳು ದಾಖಲಾಗಿವೆ. ಅಪ್ರಾಪ್ತ ಮಕ್ಕಳನ್ನು ಮಾರಾಟ ಮಾಡಿದ ಪ್ರಕರಣದಲ್ಲಿ ಈ ಹಿಂದೆ ಈತ ಜೈಲು ಸೇರಿದ್ದ. ಈತನ ಮೇಲೆ ಫೋಕ್ಸೋ ಪ್ರಕರಣ ಕೂಡ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಐವರು ಬಾಂಗ್ಲಾದೇಶಿ ಮೂಲದವರು ಎನ್ನಲಾದ ಯುವತಿಯರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಆರೋಪಿಗಳ ಜೊತೆಗೆ ಕಟ್ಟಡದ ಮಾಲಿಕ ನಿವೃತ್ತ ಅಧಿಕಾರಿ ಜೆ ಬಿ ರಂಗಸ್ವಾಮಿ ಅವರ ವಿರುದ್ಧವು ಪ್ರಕರಣ ದಾಖಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ತುರ್ತು ಚಿಕಿತ್ಸಾ ವಾರ್ಡ್‌ನಲ್ಲಿ ಹಾಸಿಗೆ ಕೊರತೆ; ಚಿಕಿತ್ಸೆ ಸಿಗದೆ ಬಿಜೆಪಿ ಮಾಜಿ ಸಂಸದನ ಪುತ್ರ ಸಾವು
ಈ ಪ್ರಕರಣದ ವಿಶೇಷವೆಂದರೆ, ಜೆ ಬಿ ರಂಗಸ್ವಾಮಿ ಅವರು ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದು, ಹಲವಾರು ಗಂಭೀರ ಅಪರಾಧಗಳನ್ನು ಪತ್ತೆಹಚ್ಚಿದ ಖ್ಯಾತಿ ಪಡೆದವರು. ಆದರೆ ತಮ್ಮದೇ ಮನೆಯಲ್ಲಿ ಬಾಡಿಗೆ ಪಡೆದಿರುವವರು ನಡೆಸುತ್ತಿರುವ ದಂಧೆ ಅವರ ಪೊಲೀಸ್ ಕಣ್ಣಿಗೆ ಬೀಳಲಿಲ್ಲವೆ ಎಂದು ಸ್ಥಳೀಯ ನಿವಾಸಿಗಳು ಪ್ರಶ್ನಿಸುತ್ತಿದ್ದಾರೆ. ಮತ್ತಷ್ಟು ಅನುಮಾನ ಹುಟ್ಟಿಸುವ ಸಂಗತಿಯೆಂದರೆ, ಈ ದನಿಯಾ ಸಲೂನ್ ಎದುರುಗಡೆಯೇ ಒಂದು ಟ್ಯೂಷನ್ ಕೇಂದ್ರವಿದ್ದು, ಇಲ್ಲಿಗೆ ಬರುವ ವಿದ್ಯಾರ್ಥಿಗಳು ಈ ಸಲೂನ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮಾಲೀಕರಾದ ರಂಗಸ್ವಾಮಿ ಅವರ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. ಆದರೆ ರಂಗಸ್ವಾಮಿ ಅವರು ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ ಎಂದು ಕಾರ್ಯಾಚರಣೆ ತಂಡದಲ್ಲಿದ್ದ ಸದಸ್ಯರೊಬ್ಬರು ತಿಳಿಸಿದ್ದಾರೆ.
ಮಾಲೀಕ ಜೆ ಬಿ ರಂಗಸ್ವಾಮಿ ಕೂಡ ಅದೇ ಕಟ್ಟಡದ ಮತ್ತೊಂದು ಅಂತಸ್ತಿನಲ್ಲಿ ವಾಸವಿದ್ದಾರೆ ಎಂಬುದು ಆಶ್ಚರ್ಯವಾದರೂ ಸತ್ಯ. ತಮ್ಮ ಸ್ವಂತ ಕಟ್ಟಡದಲ್ಲಿಯೇ ವರ್ಷಗಳಿಂದ ನಡೆಯುತ್ತಿರುವ ಈ ದಂಧೆಯ ಬಗ್ಗೆ ಅವರಿಗೆ ಗೊತ್ತಿರಲಿಲ್ಲವೇ ಎಂಬ ಸಂಶಯ ಈಗ ಸಾರ್ವಜನಿಕರಲ್ಲಿ ಮೂಡುತ್ತಿದೆ. ಪೊಲೀಸ್ ಅಧಿಕಾರಿಯಾದ ಇವರು ಆರೋಪಿಗಳ ಹಿನ್ನೆಲೆಯನ್ನು ತಿಳಿಯದೆ ಬಾಡಿಗೆ ನೀಡಿದರೆ ಎನ್ನುವ ಅನುಮಾನಗಳು ಸ್ಥಳೀಯರಲ್ಲಿ ಕಾಡತೊಡಗಿವೆ. ಅದರಲ್ಲೂ ವೇಶ್ಯಾವಾಟಿಕೆ ದಂಧೆಯಲ್ಲಿ ಕುಖ್ಯಾತನಾಗಿದ್ದ ಮಹೇಶ್ ಅಲಿಯಾಸ್ ಬಾಣಲಿ ಮಹೇಶ್ ಈ ದಾಳಿಯ ಸಂದರ್ಭದಲ್ಲಿ ರಾಜಾರೋಷವಾಗಿ ಸ್ವಾಗತಕಾರರ ಮೇಜಿನ ಮೇಲೆ ಆಸೀನನಾಗಿದ್ದ. ಅಂದರೆ ಈ ದಂಧೆ ಎಷ್ಟು ಬಹಿರಂಗವಾಗಿ ನಡೆಯುತ್ತಿತ್ತು ಎಂಬುದನ್ನು ಯಾರಾದರೂ ಊಹಿಸಬಹುದು.
ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆದರೆ ಎಷ್ಟೊಂದು ಕಾಣದ ಕೈಗಳು ಬಯಲಾಗುತ್ತವೋ ಕಾದು ನೋಡೋಣ.
ರಂಗಸ್ವಾಮಿಯವರಿಗೆ ಅಲ್ಲಿ ನಡೆಯುತ್ತಿರುವ ಚಟುವಟಿಕೆಗಳ ವಿಷಯ ತಿಳಿದ ಕೂಡಲೇ ಅವರೇ ಪೋಲೀಸರಿಗೆ ತಿಳಿಸಿ ಕ್ರಮಕೈಗೊಳ್ಳಲು ತಿಳಿಸಿದ್ದರು. ಇಲ್ಲಸಲ್ಲದ ಸುಳ್ಳು ಸುದ್ದಿ ಹರಡಬೇಡಿ. ಪತ್ರಿಕಾಧರ್ಮದ ಘನತೆ ಉಳಿಸಿಕೊಳ್ಳಿ.
ಈ ಲಿಂಕ್ ನೋಡಿ: https://www.facebook.com/100000622776482/posts/pfbid0GLystS19RwccsZ7BWdLcVL1ikyodbEBMuFkLbE7ZFUct4BHWFPKoKb6RyPdmtRuhl/?mibextid=Nif5oz
Well done, “ಈದಿನ”. You’re a very great follower of journalism principles. 🙏🙏