ಕರ್ನಾಟಕವು ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಸಾಂಸ್ಕೃತಿಕ ಬೀಡಾಗಿದೆ ಎಂದು ಶಾಸಕ ಗಣೇಶ ಪ್ರಸಾದ್ ಹೇಳಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರ್ನಾಟಕವು ವಿವಿಧ ಕಲೆಗಳ ನಾಡು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ದಂಡಾಧಿಕಾರಿ ಟಿ ರಮೇಶ್ ಬಾಬು, “ನವಂಬರ್ 1 ಕರ್ನಾಟಕದ ಜನತೆಗೆ ವಿಶೇಷ ದಿನ. ಮುಂಬೈ – ಹೈದರಾಬಾದ್‌ನೊಂದಿಗೆ ಹರಿದು ಹಂಚಿಹೋಗಿದ್ದ ಕನ್ನಡ ನಾಡಿನ ಜನತೆಯನ್ನು ಒಗ್ಗೂಡಿಸಿ ಕರ್ನಾಟಕ ಎಂದು ಮಾಡಲು ಅನೇಕರು ಶ್ರಮಿಸಿದ್ದರು. ಕನ್ನಡ ನಾಡು ಏಕೀಕರಣವಾಗಿ 68 ವರ್ಷವಾಯಿತು. ಕರ್ನಾಟಕವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ನವಂಬರ್ 1973ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು:” ಎಂದು ತಿಳಿಸಿದರು.
ಸಿದ್ದರಾಜಪ್ಪ ಮಾತನಾಡಿ, “ಕನ್ನಡ ಭಾಷೆಯ ಇತಿಹಾಸವನ್ನು ಅವಲೋಕಿಸಿದರೆ ಕನ್ನಡ ನಾಡಿನ ಮಹಿಮೆ ತಿಳಿಯುತ್ತದೆ. ಕನ್ನಡಕ್ಕೆ ಸುಮಾರು 2000 ವರ್ಷಗಳ ಇತಿಹಾಸವಿದೆ. ಪಂಪ ರನ್ನ ಕುವೆಂಪು ಇತರ ಕವಿಗಳನ್ನು ಪಡೆದ ಕರ್ನಾಟಕದ ಜನತೆ ಪುಣ್ಯರು. ಕನ್ನಡದ ಬಗ್ಗೆ ಜನತೆಗೆ ಎಂಟು ಜ್ಞಾನಪೀಠ ಪ್ರಶಸ್ತಿಯನ್ನು ದೊರಕಿಸಿಕೊಟ್ಟಿದ್ದಾರೆ ವಚನ ಸಾಹಿತ್ಯ ಮತ್ತು ಸಾಹಿತ್ಯದ ಮುಖಾಂತರ ಕನ್ನಡಕ್ಕೆ ಇರುವ ಇತಿಹಾಸವನ್ನು ಸಾರಿದ್ದಾರೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಕನ್ನಡಪರ ಸಂಘಟನೆಯ ಮುಖಂಡರು, ಜನಪದ ಕಲಾವಿದರು, ಸಾಹಿತ್ಯ ಕ್ಷೇತ್ರ ಚುಟುಕು ಸಾಹಿತಿಗಳನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಡಲ್‌ಸಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್ ಮತ್ತು ವೃತ್ತ ನಿರೀಕ್ಷಕ ಪರಶಿವಮೂರ್ತಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನಂಜುಂಡೇಗೌಡ ಪುರಸಭೆಯ ಮುಖ್ಯ ಅಧಿಕಾರಿ ವಸಂತ್ ಕುಮಾರಿ ಶಿಶು ಅಭಿವೃದ್ಧಿ ಅಧಿಕಾರಿ ಹೇಮಾವತಿ ಪುರಸಭೆ ಸದಸ್ಯರಾದ ಶ್ರೀನಿವಾಸ ಕಣ್ಣಪ್ಪ ಎನ್ ಕುಮಾರ್ ಅಣ್ಣಯ್ಯ ಸ್ವಾಮಿ, ಮಧುಸೂದನ್ ಸಂಘಟನೆಯ ಮುಖಂಡರಾದ ಸುಭಾಷ್ ಮಾಡ್ರಳ್ಳಿ ಹಾಗೂ ಸುರೇಶ್ ನಾಯಕ್ ಹಾಗೂ ರಾಜೇಂದ್ರ ನಾಯಕ್ ಜಯ ಕರ್ನಾಟಕ ಸಂಘಟನೆಯ ಮಹೇಶ್ ಮಾಡ್ರಹಳ್ಳಿ ರಂಗಪ್ಪ ಯೋಗೇಶ್ ಕೆ ಇನ್ನು ಹಲವಾರು ಮುಖಂಡರು ಉಪಸ್ಥಿತರಿದ್ದರು